ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ನಡುವೆ ಸಂಸಾರದ ಗಲಾಟೆಯಾಗಿದೆ ಎಂಬ ವಿಚಾರವಾಗಿ ಮತ್ತೆ ಸುದ್ದಿಯಾಗಿದ್ದು, ದರ್ಶನ್ ಪತ್ನಿಯನ್ನು ಹೊಡೆದಿದ್ದಾರೆ ಎಂಬ ಸುದ್ದಿಯೊಂದು ಹರಡಿದೆ. ಬೆಂಗಳೂರಿನ ಹೊಸಕೆರೆ ಹಳ್ಳಿಯ ಅಪಾರ್ಟ್ಮೆಂಟ್ ನಲ್ಲಿ ವಾಸವಿರುವ ದರ್ಶನ್ ಅವರು ನಿನ್ನೆ ತಮ್ಮ ಪತ್ನಿಯ ಮೇಲೆ ಸಿಟ್ಟಾಗಿ ಕೈ ಮಾಡಿದ್ದಾರೆಂದೂ, ಸಿಗರೇಟಿನಿಂದ ಸುಟ್ಟಿದ್ದಾರೆಂದು ಹೇಳಲಾಗಿದ್ದು, ಪತ್ನಿಯನ್ನು ಮಾತ್ರವಲ್ಲದೆ ಅವರು ಮನೆಯಲ್ಲಿದ್ದ ಅತ್ತೆಯ ಮೇಲೂ ಕೈ ಮಾಡಿದ್ದಾರೆಂದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೂಡಾ ಸುದ್ದಿ ಹರಡಿದೆ. ಜಗಳವನ್ನು ನೋಡಿದ ಅವರ ಮಗ ಗಾಬರಿಯಿಂದ ಮನೆಯಿಂದ ಹೊರ ಬಂದಿದ್ದನ್ನೆಲಾಗಿದೆ.

ಆತ ಪಕ್ಕದ ಮನೆಯಲ್ಲೇ ಇದ್ದ ಇನ್ನೊಬ್ಬ ನಟನನ್ನು ಕರೆ ತಂದಿದ್ದು, ಆ ನಟನಿಗೂ ದರ್ಶನ್ ಅವರಿಂದ ಏಟು ಬಿದ್ದಿದೆ ಎನ್ನಲಾಗಿದೆ. ಪದೇ ಪದೇ ಕ್ರೌರ್ಯ ಕ್ಕೆ ಬೇಸತ್ತು ವಿಜಯಲಕ್ಷ್ಮಿ ಅವರು ಪೋಲಿಸರಿಗೆ ದೂರು ನೀಡಲು ಹೋಗಿ ಅನಂತರ ಆಪ್ತರು ವಾಪಸ್ಸು ಕರೆತಂದಿದ್ದಾರೆ ಎಂದೂ ಕೂಡಾ ಹೇಳಲಾಗುತ್ತಿದ್ದು, ತಮ್ಮ ತಾಯಿಯನ್ನು ಹೊಡೆದ ಕಾರಣಕ್ಕೆ ಅವರು ಮಹಿಳಾ ಆಯೋಗದ ಮೊರೆ ಹೋಗಲಿದ್ದಾರೆನ್ನಲಾಗಿದ್ದು, ಈ ವಿಷಯ ತಿಳಿದು ಪ್ರಮುಖ ರಾಜಕೀಯ ನಾಯಕರೊಬ್ಬರು ಪತಿ ಪತ್ನಿ ನಡುವೆ ಸಂಧಾನ ಮಾಡಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡಾ ಒಮ್ಮೆ ದರ್ಶನ್ ಅವರು ಪತ್ನಿಯ ಮೇಲೆ ಕೈ ಮಾಡಿ ಸುದ್ದಿಯಾಗಿದ್ದರು.

ಆದರೆ ಅನಂತರ ಮಗನಿಗಾಗಿ ಹಿಂದಿನದೆಲ್ಲವನ್ನು ಮರೆತು ಅವರು ಅನ್ಯೋನ್ಯವಾಗಿರಲು ನಿರ್ಧಾರ ಮಾಡಿದ್ದರು. ಆದರೆ ಈಗ ಮತ್ತೊಮ್ಮೆ ಅಂತಹುದೇ ಸುದ್ದಿ ಬಂದಿದೆ. ಆದರೆ ಇದ್ಯಾವುದೂ ನಿಜವಲ್ಲ ಎಂಬಂತೆ, ದರ್ಶನ್ ಅವರ ಪತ್ನಿ ಟ್ಚಿಟರ್ ನಲ್ಲಿ ಒಂದೇ ಸಾಲಿನಲ್ಲಿ ಹರಿದಾಡುತ್ತಿರುವ ವದಂತಿಗಳೆಲ್ಲಾ‌ ಸುಳ್ಳು ಎಂದು ಟ್ವೀಟ್ ಮಾಡಿ ಸುದ್ದಿಗೆ ತೆರೆ ಎಳೆಯುವ ಕೆಲಸವನ್ನು ಮಾಡಿದ್ದಾರೆ. ಆದರೆ ಹಲವರು ಏನದು? ಯಾವ ವಿಚಾರ ಎಂದೆಲ್ಲಾ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here