ರಾಜ್ಯದಲ್ಲಿ ಬಂದೊದಗಿರುವ ಪ್ರವಾಹ ಪರಿಸ್ಥಿತಿಯ ಅರಿವು ಈಗಾಗಲೇ ಎಲ್ಲರಿಗೂ ತಿಳಿದಿದೆ. ಪ್ರವಾಹದಿಂದಾಗಿ ಅಸಂಖ್ಯಾತ ಜನರ ಬದುಕು ಬರಡಾಗಿದೆ.ಮಳೆ ಪ್ರಮಾಣ ತಗ್ಗಿದ್ದರೂ ಪ್ರವಾಹ ಸೃಷ್ಟಿಸಿರುವ ಅನಾಹುತಗಳನ್ನು ಮಾತ್ರ ಅನುಭವಿಸಲೇ ಬೇಕಾದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಧೈರ್ಯ ನೀಡಿ, ಅವರ ನೋವಿಗೆ ಸ್ಪಂದಿಸಬೇಕಾದ್ದು ಎಲ್ಲರ ಕರ್ತವ್ಯ ಹಾಗೂ ಅದೇ ಅತ್ಯುತ್ತಮವಾದ ಕಾರ್ಯ ಕೂಡಾ ಹೌದು. ಇದನ್ನು ಅರಿತು, ತಮ್ಮ ಖಾಸಗಿ ಬದುಕಿನ ಬಗ್ಗೆ ಚಿಂತಿಸದೆ, ಸಂತ್ರಸ್ತರ ಜೊತೆಗೆ ನಿಂತು ಮಾದರಿ ಅಧಿಕಾರಿ ಎನಿಸಿಕೊಂಡಿದ್ದಾರೆ ವಿಜಯಪುರ ಜಿಲ್ಲಾಧಿಕಾರಿಯವರು.

ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ತಮ್ಮ ಅಜ್ಜ ನಿಧನರಾದ ವಿಷಯ ತಿಳಿದರೂ, ಅಂತಿಮ ದರ್ಶನಕ್ಕೆ ತೆರಳದೆ, ಅದಕ್ಕಿಂತ ಮುಖ್ಯವಾದುದು ಪ್ರವಾಹ ಸಂತ್ರಸ್ತರ ರಕ್ಷಣೆ ಎಂದು ಆ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೃಷ್ಣಾ ಹಾಗೂ ಭೀಮಾನದಿಯ ಉಕ್ಕಿ ಉಂಟಾದ ಪ್ರವಾಹದಿಂದ ವಿಜಯಪುರ ಜಿಲ್ಲೆಯ ಹಲವು ಭಾಗಗಳಲ್ಲಿ ಜನರು ಹಾಗೂ ಜಾನುವಾರುಗಳಿಗೆ ಅಪಾರ ಹಾನಿಯಾಗಿದೆ. ಅನೇಕ ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಆದರೆ ದುರಾದೃಷ್ಟವೆಂಬಂತೆ ಜಿಲ್ಲಾಧಿಕಾರಿಯ ತಾತ ಅದೇ ಸಂದರ್ಭದಲ್ಲಿ ನಿಧನರಾಗಿದ್ದಾರೆ.

ಶುಕ್ರವಾರದಂದು ಜಿಲ್ಲಾಧಿಕಾರಿಯ ಅಜ್ಜಯ್ಯ ಎಂ.ಎಚ್.ನಾಯ್ಕ ಅವರು ಬೆಳಗಾವಿಯ ಬೈಲಹೊಂಗಲದಲ್ಲಿ ನಿಧನರಾಗಿದ್ದರು. ಆದರೆ ಇಲ್ಲಿ ನೆರೆ ಪೀಡಿತರ ನೆರವಿಗೆ ಧಾವಿಸಿದ ಜಿಲ್ಲಾಧಿಕಾರಿಯವರು, ಜನರ ಜೊತೆ ಇರುವುದು ಕರ್ತವ್ಯ ಎಂದು ತಿಳಿದು, ಬಾಲ್ಯದಿಂದ ಸಾಕಿ ಸಲುಹಿದ ಅಜ್ಜನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದೆ, ಪ್ರವಾಹ ಪೀಡಿತ ಗ್ರಾಮಗಳಿಗೆ ಸಂಚಾರ ನಡೆಸುತ್ತಾ, ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತಾ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here