ಬೆಂಗಳೂರು: ರಾಜ ಬಿಜೆಪಿಯಲ್ಲಿ ಕಳೆದ ಆರು ತಿಂಗಳಿಂದ ಅರಸನಿಲ್ಲದ ಆಳ್ವಿಕೆಯಂತಾಗಿದ್ದ ಬಿಜೆಪಿ ಪಕ್ಷಕ್ಕೆ ಈಗ ಅರಸ ಸಿಕ್ಕಂತಾಗಿದೆ.
ಹೌದು ಇಂದು ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ ಎಸ್ ಯಡಿಯೂರಪ್ಪ ಅವರ ಮಗ ಬಿ ವೈ ವಿಜಯೇಂದ್ರ ಅವರು ಪದಗ್ರಹಣ ಮಾಡಿದ್ದಾರೆ.
ಆದರೆ ರಾಜ್ಯ ಬಿಜೆಪಿಯಲ್ಲಿ ಕೆಲವು ಹಿರಿಯ ನಾಯಕರು ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದರಿಂದ ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬಿಸಿ ಎದ್ದಿದೆ ಎಂದು ತಿಳಿದು ಬರುತ್ತಿದೆ
ಹೌದು.. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿರುವ ಬಹುತೇಕ ನಾಯಕರ ಗೈರು ಎದ್ದು ಕಾಣುತ್ತಿತ್ತು.
ಸಿ.ಟಿ.ರವಿ, ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಡಾ.ಕೆ.ಸುಧಾಕರ್, ಅರವಿಂದ ಬೆಲ್ಲದ್, ಅರವಿಂದ ಲಿಂಬಾವಳಿ ಸೇರಿದಂತೆ ಸಂತೋಷ್ ಬಣದ ನಾಯಕಕರು ವಿಜಯೇಂದ್ರ ಕಾರ್ಯಕ್ರಮದಿಂದ ದೂರು ಉಳಿದಿದ್ದಾರೆ. ಇದರೊಂದಿಗೆ ನೂತನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಆರಂಭದಲ್ಲೇ ಬಂಡಾಯದ ಬಿಸಿ ತಟ್ಟಿದೆ.
#WATCH | Newly-appointed Karnataka BJP chief BY Vijayendra takes charge in Bengaluru, officially taking over from his predecessor, Nalin Kumar Kateel. pic.twitter.com/vOSTOgFwXU
— ANI (@ANI) November 15, 2023
Disclaimer: This Story is auto-aggregated by a Syndicated Feed and has not been Created or Edited By City Big News Staff.