ವಿಜಯ ನಗರ ನೂತನ ಜಿಲ್ಲೆಯ ರಚನೆಗೆ ಬೇಡಿಕೆಗಳು ಒಂದೆಡೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಅಖಂಡ ಬಳ್ಳಾರಿ ಜಿಲ್ಲೆಯ ಆಗ್ರಹವನ್ನು ಮಾಡುತ್ತಾ ಅದಕ್ಕಾಗಿ ಕೂಡಾ ಹೋರಾಟಗಳು ನಡೆಯುತ್ತಿದ್ದು, ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ರಾಜ್ಯ ಸರ್ಕಾರವು ಬಳ್ಳಾರಿ ಜಿಲ್ಲೆಯಿಂದ ಆರು ತಾಲೂಕು ಗಳನ್ನು ಬೇರ್ಪಡಿಸಿ ಜಿಲ್ಲೆಯ ಹೊಸ ಮ್ಯಾಪೊಂದನ್ನು ಸಿದ್ಧ ಪಡಿಸಿದೆ. ಹೊಸ ಮ್ಯಾಪಿನಲ್ಲಿ ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಹೊಸಪೇಟೆ, ಹಗರಿಬೊಮ್ಮನ ಹಳ್ಳಿ, ಹೂವಿನ ಹಡಗಲಿ, ಕೊಟ್ಟೂರು, ಹರಪನಹಳ್ಳಿ ಗಳನ್ನು ಸೇರಿಸಲಾಗಿದೆ. ಇನ್ನ ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ಬಳ್ಳಾರಿ, ಸಿರಗುಪ್ಪ, ಕೂಡ್ಲಿಗಿ, ಸಂಡೂರು, ಕುರಗೋಡ್ ತಾಲೂಕುಗಳು ಉಳಿಯಲಿವೆ.

ಜಿಲ್ಲೆ ವಿಭಜನೆಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ ಈಗಾಗಲೇ ಜಿಲ್ಲಾಧಿಕಾರಿಗಳಿಂದ ವರದಿಯನ್ನು ಪಡೆದುಕೊಂಡಿದ್ದು, ಸರ್ಕಾರ ಜಿಲ್ಲೆಯನ್ನು ಬೇರ್ಪಡಿಸಿರುವ ಹೊಸ ನಕ್ಷೆಯನ್ನು ಸಿದ್ದಪಡಿಸಿದೆ. ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯಲಿರುವ ಬಳ್ಳಾರಿ ಜಿಲ್ಲಾ ಪ್ರತಿನಿಧಿಗಳ ಸಭೆಯ ನಂತರ ಸರ್ಕಾರ ಸಿದ್ಧಪಡಿಸಿರುವ ಹೊಸ ನಕ್ಷೆಯನ್ನು ಅಂಗೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಶಾಸಕ ಸೋಮಶೇಖರ್ ರೆಡ್ಡಿ, ಕುರಣಾಕರರೆಡ್ಡಿ, ಸಚಿವ ಶ್ರೀರಾಮುಲು ಅವರು ಅಖಂಡ ಬಳ್ಳಾರಿ ಜಿಲ್ಲೆಯ ಉಳಿವಿಗಾಗಿ ಆಗ್ರಹಿಸಿದ್ದಾರೆ.

ಇದಕ್ಕೆ ವ್ಯತಿರೇಕವಾಗಿ ಅನರ್ಹ ಶಾಸಕರಾದ ಆನಂದಸಿಂಗ್, ಕೆಸಿ ಕೊಂಡಯ್ಯ. ಅಲ್ಲಂ ವೀರಭದ್ರಪ್ಪ ಅವರು ವಿಜಯನಗರ ಜಿಲ್ಲೆಯ ರಚನೆ ಅನಿವಾರ್ಯ ಎಂದು ಸಿಎಂ ಮೇಲೆ ಒತ್ತಡವನ್ನು ಹಾಕಿದ್ದಾರೆ. ಈ ವಿಷಯದಲ್ಲಿ ಉಂಟಾಗಿರುವ ಗೊಂದಲ ಪರಿಹಾರಕ್ಕಾಗಿ ಸಿಎಂ ಅವರು ಬಳ್ಳಾರಿ ಜನಪ್ರತಿನಿಧಿಗಳ ಸಭೆಯನ್ನು ಕರೆದಿದ್ದಾರೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here