ಸುಮಾರು ಮೂರು ದಶಕಗಳ ಕಾಲದಿಂದಲೂ ನೂರಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಕೆಲವೇ ದಿನಗಳ ಹಿಂದೆ ಪೋಲಿಸರ ಬರ್ಬರ ಹತ್ಯೆಗೆ ಕಾರಣನಾಗಿದ್ದ ಕುಖ್ಯಾತ ರೌಡಿಯೊಬ್ಬನು ಇಂದು ಬೆಳಿಗ್ಗೆ ಪೋಲಿಸ್ ಎನ್ ಕೌಂಟರ್ ನಲ್ಲಿ ಬಲಿಯಾಗಿದ್ದನು. ಆದರೆ ಇದೀಗ ಆತನ ಪರವಾಗಿ, ಆತನ ಸಾವಿನ ಬಗ್ಗೆ ಅನುಮಾನಗಳಿಗೆ ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿದೆ. ವಿಕಾಸ್ ದುಬೆ ಎಂಬ ನರಹಂತಕನ ಹತ್ಯೆಗೆ ಸಂಬಂಧಿಸಿದಂತೆ ಇದೀಗ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯೊಂದನ್ನು ಸಲ್ಲಿಕೆ ಮಾಡಲಾಗಿದೆ.‌ ಕಳೆದ ಕೆಲವು ದಿನಗಳಿಂದಲೂ ತಲೆ ಮರೆಸಿಕೊಂಡಿದ್ದ ವಿಕಾಸ್ ದುಬೆಯನ್ನು ಪೋಲಿಸರು ತೀವ್ರವಾಗಿ ಹುಡುಕುತ್ತಿದ್ದರು.

ಆತ ಪೊಲೀಸರಿಂದ ತಪ್ಪಿಸಿಕೊಂಡು ಹೋಗುವ ಸಮಯದಲ್ಲಿ ಆತನನ್ನು ತಾವು ಎನ್‌ಕೌಂಟರ್‌ ಆಗಿರುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಇದನ್ನು ಅನೇಕ ಮಂದಿ ಅಲ್ಲಗಳೆದಿರುವುದು ಮಾತ್ರವೇ ಅಲ್ಲದೇ ಈ ಎನ್ಕೌಂಟಂರ್ ನ ಹಿನ್ನೆಲೆಯಲ್ಲಿ, ಇದರ ಸತ್ಯಾಸತ್ಯತೆ ಎಷ್ಟು ಎಂಬುದನ್ನು ಕುರಿತು ತನಿಖೆ ನಡೆಸಬೇಕೆಂದು ಘನಶ್ಯಾಮ್ ಉಪಾಧ್ಯ ಎನ್ನುವವರು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಮನುಷ್ಯನನ್ನು ಹೀಗೆ ಕೊಲ್ಲುವುದು ಮಾನವನ ಹಕ್ಕುಗಳ ಉಲ್ಲಂಘನೆ ಎಂದಿದ್ದಾರೆ.‌

ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ಕಾರಣದಿಂದ, ಇದರ ಬಗ್ಗೆ ತನಿಖೆಯನ್ನು ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆದೇಶಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.‌ ಈ ಪ್ರಕರಣದ ತನಿಖೆಯನ್ನು ಸುಪ್ರೀಂಕೋರ್ಟ್‌ನ ಪರಿವೀಕ್ಷಣೆಯಲ್ಲಿ ಸಿಬಿಐ ನಡೆಸಬೇಕು ಹಾಗೂ ಈ ಪ್ರಕರಣದಲ್ಲಿ ಪೊಲೀಸರು ಏನಾದರೂ ಭಾಗಿಯಾಗಿದ್ದರೆ ಎಂದು ತಿಳಿದು ಬಂದರೆ. ಅವರ ವಿರುದ್ಧ ಕೂಡಾ ಕಾನೂನಿನ ಪ್ರಕಾರ ಸೂಕ್ತ ಕ್ರಮವನ್ನು ಜರುಗಿಸಬೇಕೆಂದು ಕೂಡಾ ಮನವಿಯನ್ನು ಮಾಡಲಾಗಿದೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here