ಅನಂತು ವರ್ಸಸ್ ನುಸ್ರತ್ ಶುಕ್ರವಾರವಷ್ಟೇ ಬಿಡುಗಡೆ ಅಂದರೆ ಕೇವಲ ಎರಡು ದಿನಗಳ ಹಿಂದೆಯಷ್ಟೇ ಬಿಡುಗಡೆ ಹೊಂದಿದೆ ಅಪರೂಪ ದೃಶ್ಯಕಾವ್ಯ. ಚಿತ್ರ ಬಿಡುಗಡೆಯ ನಂತರ ಎಲ್ಲೆಡೆಯಿಂದಲೂ ವ್ಯಾಪಕವಾಗಿ ಪ್ರಶಂಸೆಯನ್ನು ದೋಚಿಕೊಳ್ಳುತ್ತಿರುವ ಮನೋಜ್ಞ ಚಿತ್ರವಾಗಿದೆ ಅನಂತು ವರ್ಸಸ್ ನುಸ್ರತ್. ಬಹುಶಃ ಬಿಡುಗಡೆಗೆ ಮುನ್ನ ಇದೊಂದು ಅನ್ಯ ಧರ್ಮೀಯರಾದ ನಾಯಕ ಹಾಗೂ ನಾಯಕಿ ನಡುವಿನ ನಡೆಯುವ ಪ್ರೇಮ ಕಥಾ ಹಂದರವಷ್ಟೇ ಎಂದು ತಿಳಿದವರಿಗೆಲ್ಲಾ, ಚಿತ್ರ ಇದು ಕೇವಲ ಒಂದು ಪ್ರೇಮ ಕಥಾನಕ ಮಾತ್ರವಲ್ಲ, ಇದೊಂದು ಬಾಂಧವ್ಯಗಳ ಬೆಸೆಯುವ ಚಿತ್ರ, ಮನಸ್ಸುಗಳು ಮಿಡಿಯುವ ಚಿತ್ರ ಹಾಗೂ ಕುಟುಂಬ ಸಮೇತ ವೀಕ್ಷಿಸುವ ಸದಭಿರುಚಿಯ ಚಿತ್ರ ಎಂಬದನ್ನು ಅಕ್ಷರಶಃ ಸಾಬೀತು ಮಾಡಿ ತೋರಿಸಿದೆ.

ಇನ್ನು ಈ ಚಿತ್ರ ಬಿಡುಗಡೆಯ ನಂತರ ಸ್ಯಾಂಡಲ್ ವುಡ್ ನ ಹಿರಿಯ ಹಾಗೂ ದಿಗ್ಗಜರೆನಿಸಿದ ನವರಸ ನಾಯಕ ಜಗ್ಗೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡಾ ಚಿತ್ರವನ್ನು ವೀಕ್ಷಿಸುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈಗ ಈ ಚಿತ್ರದ ಬಗ್ಗೆ ಯುವ ನಾಯಕ ನಟ, ಕನ್ನಡದ ಭರವಸೆಯ ಯುವ ನಟ ಧೃವ ಸರ್ಜಾ ಅವರು ತಮ್ಮ ಮನಸ್ಸಿನ ಮಾತುಗಳನ್ನು ಹೇಳಿದ್ದಾರೆ. ಧೃವ ಸರ್ಜಾ ಅವರು ಮಾತನಾಡುತ್ತಾ ಮೊದಲಿಗೆ ವಿನಯ್ ರಾಜ್‍ಕುಮಾರ್ ಅವರಿಗೆ ಅವರ ಹೊಸ ಚಿತ್ರಕ್ಕಾಗಿ ಆಲ್ ದಿ ಬೆಸ್ಟ್ ವಿಷ್ ಮಾಡಿದ್ದಾರೆ. ತದನಂತರ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಅವರು ಆಡಿದ್ದಾರೆ.

ಧೃವ ಸರ್ಜಾ ಅವರು ಅನಂತು ವರ್ಸಸ್ ನುಸ್ರತ್ ಸಿನಿಮಾ ತುಂಬಾ ಚೆನ್ನಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಕುಳಿತು ನೋಡುವಂತಹ ಸದಭಿರುಚಿಯ ಚಿತ್ರವೆಂದು ಹೇಳಿದ್ದಾರೆ. ನಂತರ ಇಡೀ ಚಿತ್ರ ತಂಡಕ್ಕೆ ಅವರು ಆಲ್ ದಿ ಬೆಸ್ಟ್ ವಿಷ್ ಮಾಡಿದ್ದಾರೆ. ತಮ್ಮ ಮಾತು ಮುಗಿಸುವ ಮುನ್ನ ಅವರು ಮತ್ತೊಮ್ಮೆ ವಿನಯ್ ರಾಜ್‍ಕುಮಾರ್ ಅವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.ಹಾಗೂ ಎಲ್ಲರೂ ನೋಡಿ ಆಶೀರ್ವದಿಸಿ ಎಂದು ಹೇಳಿದ್ದಾರೆ. ಹೀಗೆ ಕನ್ನಡ ಚಿತ್ರ ರಂಗದ ನಟರು ಕೂಡಾ ಅನಂತು ವರ್ಸಸ್ ನುಸ್ರತ್ ಚಿತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ಕೆಜಿಎಫ್ ಅಬ್ಬರದ ನಡುವೆಯೂ ಸದಭಿರುಚಿಯ ಚಿತ್ರವಾದ ಅನಂತು ವರ್ಸಸ್ ನುಸ್ರತ್ ಗೆ ಒಂದು ಒಳ್ಳೆ ಸ್ಥಾನವನ್ನು ತಂದು ಕೊಟ್ಟಿದೆ.

ಅನಂತು ವರ್ಸಸ್ ನುಸ್ರತ್ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here