ಬಿಗ್ ಬಾಸ್ ಸೀಸನ್ 7 ಯಶಸ್ವಿ ಹತ್ತು ವಾರಗಳನ್ನು ಮುಗಿಸುತ್ತಾ ನಾಳೆ ವಾರದ ಕಥೆ ಬರಲಿದೆ. ಇನ್ನು ಈ ಹತ್ತು ವಾರದ ಸ್ಪರ್ಧಿಗಳ ಆಟಗಳ ಏರಿಳಿತಗಳಲ್ಲಿ, ಮನೆಯೊಳಗಿನ ಅವರ ವರ್ತನೆ, ನಡವಳಿಕೆ ಎಲ್ಲಾ ನೋಡುತ್ತಾ ಪ್ರೇಕ್ಷಕರಿಗೆ ಅವರವರ ಫೇವರಿಟ್ ಎಂದು ಕೆಲವರನ್ನು ಅಭಿಮಾನಿಸಲು ಆರಂಭಿಸುತ್ತಾರೆ. ಹಾಗೆ ಅಪಾರ ಜನ ಮೆಚ್ಚುಗೆಯನ್ನು ಪಡೆದ ಸ್ಪರ್ಧಿಗಳಲ್ಲಿ ಒಬ್ಬರು ಶೈನ್ ಶೆಟ್ಟಿ. ಬಿಗ್ ಬಾಸ್ ಗೆ ಬರುವ ಮೊದಲು ಶೈನ್ ಧಾರಾವಾಹಿಗಳ ಮೂಲಕ ಜನರ ಮೆಚ್ಚುಗೆ ಪಡೆದವರು‌, ಆದರೆ ಅನಂತರದ ದಿನಗಳಲ್ಲಿ ಅವಕಾಶ ಸಿಗದೇ ಇದ್ದಾಗಲೂ, ಸೆಲೆಬ್ರಿಟಿ ಎಂಬ ದರ್ಪ ಇಲ್ಲದೆ ಫುಡ್ ಟ್ರಕ್ ನಡೆಸುತ್ತಾ ಸ್ವಾವಲಂಬಿ ಜೀವನವನ್ನು ನಡೆಸಿದವರು ಶೈನ್‌.

ಶೈನ್ ಬಿಗ್ ಬಾಸ್ ಗೆ ಬಂದ ಮೇಲೆ ಅವರ ಫುಡ್ ಟ್ರಕ್ಕನ್ನು ಸಹಾಯಕರ ಜೊತೆಗೆ ಅವರ ತಾಯಿಯವರೇ ನಡೆಸಿಕೊಂಡು ಹೋಗುತ್ತಿದ್ದಾರೆ. ಮಗನ ಬ್ಯುಸಿನೆಸ್ ಕೆಡಬಾರದೆಂಬ ಆ ತಾಯಿಯ ಕಾಳಜಿ ಹಾಗೂ ಪ್ರೀತಿ. ಶೈನ್ ಅವರ ತಾಯಿ ಮಾದ್ಯಮವೊಂದಕ್ಕೆ ಸಂದರ್ಶನ ನೀಡುತ್ತಾ, ತಮ್ಮ ಮಗನ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶೈನ್ ಅವರ ತಾಯಿ ತಮ್ಮ ಮಗನ ವಿಷಯದಲ್ಲಿ ಬಹಳ ಬೇಗ ಭಾವುಕರಾಗಿಬಿಡುತ್ತಾರೆ. ಮಗನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಾರೆ ಶೈನ್ ಅವರ ತಾಯಿ.
ಆದರೆ ತಮ್ಮ ಮಗನಿಗೆ ಜನರಿಂದ ಸಿಗುತ್ತಿರುವ ಪ್ರೀತಿ ಹಾಗೂ ಫುಡ್ ಟ್ರಕ್ ಬಳಿ ಬರುವ ಜನರು ಶೈನ್ ಬಗ್ಗೆ ಆಡುವ ಮಾತುಗಳು ಕೇಳಿ ಸಂತೋಷವಾಗುತ್ತದೆ ಎನ್ನುತ್ತಾರೆ.

ಮಗ ಧಾರಾವಾಹಿ‌ ಬಿಟ್ಟಾಗ ಬಹಳಷ್ಟು ಬೇಸರವಾಗಿದ್ದು ನಿಜ, ಅನಂತರ ಮಗ ಫುಡ್ ಟ್ರಕ್ ಮಾಡಿ ಒಬ್ಬನೇ ಕೆಲಸಗಳನ್ನು ಮಾಡುತ್ತಾ, ಮನೆಯವರಿಗೆ ತಾನು ಪಡುತ್ತಿರುವ ಕಷ್ಟದ ಬಗ್ಗೆ ಏನೂ ಹೇಳದೆ ಇದ್ದ ವಿಚಾರಗಳೆಲ್ಲಾ, ಬಿಗ್ ಬಾಸ್ ಮನೆಗೆ ಹೋದ ಮೇಲೆ ಗೊತ್ತಾಗಿದೆ ಎಂದು ಆ ತಾಯಿ ಭಾವುಕರಾಗಿದ್ದಾರೆ. ತಮ್ಮ ಮಗ ಮೊದಲಿನಿಂದಲೂ ಸ್ನೇಹ ಜೀವಿ, ಹೆಚ್ಚು ಜನರ ಜೊತೆ ಇರೋಕೆ ಇಷ್ಟ ಪಡ್ತಾನೆ. ಬಹಳ ಚಟುವಟಿಕೆಯಿಂದ ಇರ್ತಾನೆ ಎಂದು ಆ ತಾಯಿ ಹೆಮ್ಮೆಯಿಂದ ಹೇಳುತ್ತಲೇ ಮಗನ ಮೇಲಿನ ಅಪಾರವಾದ ಪ್ರೀತಿಯಿಂದ ಭಾವುಕರಾಗುತ್ತಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here