ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಡೇರ್ಡೆವಿಲ್ಸ್ ತಂಡದ ವಿರುದ್ಧ 5 ವಿಕೆಟ್ ಗಳ ಭರ್ಜರಿ ಗೆಲುವು ಪಡೆದಿದೆ.
ಏಳು ಸೋಲುಗಳನ್ನು ಕಂಡಿದ್ದ ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು ತಂಡಕ್ಕೆ11ನೇ ಪಂದ್ಯ ಗೆಲ್ಲಲು ಡೆಲ್ಲಿ ಡೇರ್ ಡೇವಿಲ್ಸ್ ತಂಡ 182ರನ್’ಗಳ ಸವಾಲಿನ ಗುರಿ ನೀಡಿತು.

ಟಾಸ್ ಗೆದ್ದ ಬೆಂಗಳೂರು ತಂಡ ದೆಹಲಿ ತಂಡದ ಆಟಗಾರರನ್ನು ಬ್ಯಾಟಿಂಗ್ ಆಹ್ವಾನಿಸಿದರು. ಪಂತ್, ಅಭಿಷೇಕ್ ಶರ್ಮಾ ಸ್ಫೋಟಕ ಆರ್ಭಟ ಹಾಗೂ ಶ್ರೇಯಸ್ ಅಯ್ಯರ್ (32)ಸಮಯೋಚಿತ ಆಟದಿಂದ  20 ಓವರ್’ಗಳಲ್ಲಿ 181ರನ್ ಪೇರಿಸಿದರು.
34 ಚಂಡುಗಳನ್ನು ಎದುರಿಸಿದ ಪಂತ್  4 ಸಿಕ್ಸ್’ರ್,5 ಬೌಂಡರಿಯೊಂದಿಗೆ 61 ರನ್ ಸಿಡಿಸಿದರು.

ಕೇವಲ 19 ಚಂಡುಗಳಲ್ಲಿ ಅಭಿಷೇಕ್ ಶರ್ಮಾ 4 ಸಿಕ್ಸ್’ರ್ 3 ಬೌಂಡರಿಯೊಂದಿಗೆ 46 ರನ್ ಚಚ್ಚಿದರು.182 ರನ್ ಗಳ ಬೃಹತ್ ಮೊತ್ತ ಬೆನ್ನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರಂಭಿಕ ಆಟಗಾರರಾದ ಪಾರ್ಥಿವ್ ಪಟೇಲ್ ಮತ್ತು ಅಲಿ ನಿರಾಶೆ ಮೂಡಿಸಿದರು.

ನಂತರ ಬಂದ ಸ್ಪೋಟಕ ಬ್ಯಾಟ್ಸ್‌ಮನ್ ಗಳಾದ ವಿರಾಟ್ ಕೊಹ್ಲಿ ಮತ್ತು ಎ ಬಿ ಡಿ ವಿಲಿಯರ್ಸ್ ಭರ್ಜರಿ ಜೊತೆಯಾಟ ಆಡಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 40 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿ

ನೆರವಿನಿಂದ ಭರ್ಜರಿ 70 ರನ್ ಗಳಿಸಿ ಔಟಾದರು.ಮತ್ತೊಬ್ಬ ಸ್ಪೋಟಕ ಬ್ಯಾಟ್ಸ್‌ಮನ್ ಎ ಬಿ ಡಿ ವಿಲಿಯರ್ಸ್
37 ಎಸೆತಗಳಲ್ಲಿ ಭರ್ಜರಿ 6 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 72 ರನ್ ಗಳಿಸಿ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗೆಲ್ಲುವಂತೆ ಮಾಡಿದರು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here