ಐಪಿಎಲ್ ಕ್ರಿಕೆಟ್ ಎಂದರೆ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಹಬ್ಬವಿದ್ದಂತೆ. ಆದರೆ ಈ ಬಾರಿ ಕನ್ನಡಿಗರಿಗೆ ಇದು ಹಬ್ಬವಾಗಿ ಉಳಿದಿಲ್ಲ. ಅದಕ್ಕೆ ಕಾರಣ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ಪ್ಲೇ ಆಫ್​ ರೇಸ್​​ನಿಂದ ಹೊರಬಂದಿದ್ದು. ನಿರಂತ ಸೋಲುಗಳ ಸವಿ ಉಂಡದ್ದು. ಹೀಗೆ ನಿರಾಶಾದಾಯಕ ಆಟದಿಂದ ತಂಡವು ರೇಸ್ ನಿಂದ ಹೊರಬಿದ್ದಿದ್ದಕ್ಕೆ ತಂಡದ ನಾಯಕ ವಿರಾಟ್​ ಕೊಹ್ಲಿ ಆರ್.ಸಿ.ಬಿ. ಅಭಿಮಾನಿಗಳಾದ ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದ್ದಾರೆ. ಟೂರ್ನಿಯಲ್ಲಿ ತಂಡವು ನೀಡಿದಂತಹ ಹೀನಾಯ ಪ್ರದರ್ಶನದಿಂದ ಕನ್ನಡಿಗರ ಮನಸ್ಸಿಗೆ ನಾವು ನೋವನ್ನುಂಟು ಮಾಡಿದ್ದೇವೆ. ನಮ್ಮಿಂದ ನಡೆದ ಈ ತಪ್ಪಿಗೆ ಕನ್ನಡಿಗರಲ್ಲಿ ಕ್ಷಮೆ ಕೋರುವುದಾಗಿ ಅವರು ತಿಳಿಸಿದ್ದಾರೆ

ಈಗ ಅದೇ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ವಿರಾಟ್ ಕೊಹ್ಲಿಯವರ ಟ್ವಿಟರ್ ಖಾತೆಯಲ್ಲಿ ಕನ್ನಡದ ಬರಹ ಕಾಣಿಸಿಕೊಂಡಿದೆ. ಈ ಹಿಂದೆ ವಿರಾಟ್ ಕೊಹ್ಲಿಯವರು ಕನ್ನಡದಲ್ಲಿ ಟ್ವೀಟ್ ಮಾಡಿರುವ ಉದಾಹರಣೆಗಳಿಲ್ಲ. ಆದರೆ ಈ ಬಾರಿ ಅವರು ಕನ್ನಡದಲ್ಲಿ ಟ್ವೀಟ್ ಮಾಡಲು ಕಾರಣವೂ ಇದೆ. ಏಕೆಂದರೆ ಈ ಬಾರಿ ಆರ್.ಸಿ.ಬಿ.‌ ಯ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಅದಕ್ಕೆ ವಿರಾಟ್ ಅವರು ಕ್ಷಮಾಪಣೆ ಕೇಳಿದ್ದರು.‌ ಈಗ ಮತ್ತೊಮ್ಮೆ ಟ್ವಿಟರ್ ನಲ್ಲಿ ಕೂಡಾ ಅವರು ಧನ್ಯವಾದಗಳನ್ನು ಹೇಳಿದ್ದಾರೆ.

ಮೊದಲಿಗೆ ಅವರ ತಮಗೆ ಅಪಾರವಾದ ಪ್ರೀತಿ ಹಾಗೂ ಬೆಂಬಲ ನೀಡಿದ ತಂಡ, ಅಭಿಮಾನಿಗಳು ಹಾಗೂ ಗ್ರೌಂಡ್ ಸಿಬ್ಬಂದಿಗೆ ಧನ್ಯವಾದವನ್ನು ಹೇಳಿದ್ದಾರೆ. ಅದಾದ ನಂತರ ಮುಂದಿನ ವರ್ಷ ಮತ್ತಷ್ಟು ಬಲಿಷ್ಠವಾಗಿ ಮರಳಿ ಬರುವುದಾಗಿ ಭಾಷೆ ನೀಡಿದ್ದಾರೆ. ಇದೆಲ್ಲಾ ಆಂಗ್ಲದಲ್ಲಿ ಟ್ವೀಟ್ ಮಾಡಿದ್ದು ಕಡೆಯಲ್ಲಿ ” ನೀವಿಲ್ಲಾ ಅಂದ್ರೆ ನಾವು ಏನು ಅಲ್ಲಾ ” ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here