ಡ್ಯಾಷಿಂಗ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಶ್ವದ ಅತೀ ಕೆಟ್ಟ ಆಟಗಾರನಂತೆ….ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. ಮೈದಾನದಲ್ಲಿ ಬ್ಯಾಟ್​ ಮೂಲಕ ಅಲ್ಲದೆ ಮಾತಿನಿಂದಲೂ ಅನೇಕ ಬಾರಿ ಎದಿರೇಟು ನೀಡುವಲ್ಲಿ ಎತ್ತಿದ ಕೈ. ಇದುವೇ ಕೆಲವೊಂದು ಬಾರಿ ಅತಿರೇಕಕ್ಕೆ ಹೋಗಿದ್ದು ಇದೆ. ಕೊಹ್ಲಿಯ ಇಂತಹ ವರ್ತನೆ ಬಗ್ಗೆ ಬಾಲಿವುಡ್​ ನಟ ನಾಸಿರುದ್ದೀನ್ ಶಾ ಚಾಟಿ ಬೀಸಿದ್ದಾರೆ.ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್​ಮನ್ ಮಾತ್ರವಲ್ಲ, ವಿಶ್ವದ ಅತೀ ಕೆಟ್ಟ ವರ್ತನೆಯ ಆಟಗಾರ ಕೂಡ ಹೌದು. ಇದರಿಂದ ಅವರ ಹೆಸರನ್ನು ದುರ್ವತನೆ ನುಂಗಿ ಹಾಕುತ್ತಿದೆ’ ಎಂದು ತಮ್ಮ ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದಾರೆ.

ಆದರೆ ಬಾಲಿವುಡ್​ ನಟನ ಈ ಹೇಳಿಕೆಗೆ ಮುಖ್ಯ ಕಾರಣ ಏನು ಎಂಬುದು ಮಾತ್ರ ಅವರು ಸ್ಪಷ್ಟಪಡಿಸಿಲ್ಲ.ಆದರೆ ಪರ್ತ್​ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಆಟಗಾರರನ್ನು ಸ್ಲೆಡ್ಜ್​ ಮಾಡಿರುವುದಕ್ಕೆ ವಿರಾಟ್ ಕೊಹ್ಲಿ ವಿರುದ್ಧ ನಾಸಿರುದ್ದೀನ್ ಶಾ ಗರಂ ಆಗಿದ್ದಾರೆ ಎನ್ನಲಾಗಿದೆ. ಆಸೀಸ್ ನಾಯಕ ಟಿಮ್ ಪೈನೆ ನಡುವೆ ನಡೆದ ಮಾತಿನ ಚಕಮಕಿಯನ್ನು ಅಂಪೈರ್ ಮಧ್ಯಪ್ರವೇಶಿಸಿ ನಿಲ್ಲಿಸಬೇಕಾಯಿತು.ಇದನ್ನು ಉಲ್ಲೇಖಿಸಿ ‘ವೆಡ್ನೆಸ್​​ಡೆ’ ನಟ ಈ ಪೋಸ್ಟ್​ ಹಾಕಿದ್ದಾರೆ ಎನ್ನಲಾಗಿದೆ.

ಅದೇ ರೀತಿ ವಿದೇಶಿ ಆಟಗಾರರನ್ನು ಇಷ್ಟಪಡುವವರು ದೇಶ ತೊರೆಯಿರಿ ಎಂಬ ಕೊಹ್ಲಿ ವಿವಾದಾತ್ಮಕ ಹೇಳಿಕೆಯನ್ನು ವ್ಯಂಗ್ಯವಾಡಿರುವ ನಾಸಿರುದ್ದೀನ್ ಶಾ, ನಾನು ಭಾರತ ಬಿಟ್ಟು ಹೋಗುವ ಯಾವುದೇ ಆಲೋಚನೆಗಳಿಲ್ಲ ಎಂದು ಕಿಚಾಯಿಸಿದ್ದಾರೆ.ಈ ಪೋಸ್ಟ್​​ಗೆ ಪರ ವಿರೋಧಗಳು ವ್ಯಕ್ತವಾಗಿದ್ದು, ಇಲ್ಲಿ ಕೆಲವರು ಕೊಹ್ಲಿಯ ವರ್ತನೆಯನ್ನು ಖಂಡಿಸಿದರೆ, ಮತ್ತೆ ಕೆಲವರು ನಾಸಿರುದ್ದೀನ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಆಕ್ರಮಣಕಾರಿ ಆಟಗಾರನ ವಿರುದ್ಧ ಬಾಲಿವುಡ್ ನಟ ನೀಡಿದ ಈ ಹೇಳಿಕೆ ಮತ್ತೊಂದು ವಿವಾದಕ್ಕೆ ಕಾರಣವಾಗುವ ಲಕ್ಷಣಗಳು ಕಾಣಿಸುತ್ತಿದೆ.

Virat K is not only the worlds best batsman but also the worlds worst behaved player. His cricketing brilliance pales…

Naseeruddin Shah ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಡಿಸೆಂಬರ್ 16, 2018

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here