ಸದ್ಯಕ್ಕೆ ವಿಷ್ಣುವರ್ಧನ್ ಸ್ಮಾರಕ ಆಗಲ್ಲ… ಅರೆ ಯಾಕೀಗೆ ಹೇಳ್ತಿದಿವಿ‌ ಅಂದ್ಕೊಂಡ್ರಾ..ಇದು ನಾವು ಹೇಳಿದ್ತಿರೋದಲ್ಲ.ಸ್ವತಃ ಸಾಹಸಸಿಂಹ ವಿಷ್ಣುವರ್ಧನ್ ಅವರ ಕೆಲ ಅಭಿಮಾನಿಗಳು ಅಸಮಾಧಾನ ಹೊರಹಾಕುತ್ತಿರೋ ರೀತಿ ಇದು..ಕಳೆದ ಒಂಭತ್ತು ವರ್ಷಗಳಿಂದ ವಿಷ್ಣುವರ್ಧನ್ ಸ್ಮಾರಕಕ್ಕೆ ಕಾದು ಕಾದು ಸೋತ ಅಭಿಮಾನಿಗಳ ಮನನೊಂದ ನುಡಿಗಳು ಇವು. ಹೌದು ಕನ್ನಡ ನಾಡಿನ ಸಾಹಸ ಸಿಂಹ , ಕರುನಾಡ ಜನನಾಯಕ ವಿಷ್ಣು ವರ್ಧನ್. ನಾಗರಹಾವಿನ ಮೂಲಕ ತೆರೆಯ ಮೇಲೆ ವಿಜೃಂಭಿಸಿದ ಈ ನಟನ ಗತ್ತು, ಗಮ್ಮತ್ತು, ನಟನಾ ಸಾಮರ್ಥ್ಯ ಜನಮಾನಸದಲ್ಲಿ ಮರೆಯಲಾರದ ಸವಿ ನೆನಪುಗಳಾಗಿ ಉಳಿದಿವೆ. ಇವರು ಗಳಿಸಿದ ಅಭಿಮಾನಿಗಳೋ ಅಪಾರ ಸಂಖ್ಯೆಯಲ್ಲಿ ಇದ್ದಾರೆ. ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ಅವರ ಕೊಡುಗೆ ಅಪಾರ ಹಾಗೂ ಅನಂತ. ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಸದಾ ಇವರ ಹೆಸರು ಅಮರ. ವಿಷ್ಣುವರ್ಧನ್ ಅವರು ನಮ್ಮನ್ನಗಲಿ ಒಂಬತ್ತು ವರ್ಷಗಳಾಗುತ್ತಾ ಬಂದರೂ, ಈ ನಟ ವಿಖ್ಯಾತನಿಗೆ ದೊರೆಯಬೇಕಾದ ಗೌರವ-ಮನ್ನಣೆಯನ್ನು ಸರ್ಕಾರ ನೀಡದೆ ತಾರತಮ್ಯ ಧೋರಣೆ ತೋರಿದೆ. ಅವರ ಸ್ಮಾರಕ ನಿರ್ಮಾಣ ವಿಷಯದಲ್ಲಿ ನಿರ್ಲಿಪ್ತ ಧೋರಣೆ ವಹಿಸಿದೆ. ಕ್ಷಮಿಸಿ ಸರ್ಕಾರ ಮಾತ್ರ ವಿಷ್ಣು ಸ್ಮಾರಕ ವಿಚಾರಕ್ಕೆ ಅಡ್ಡಗಾಲು ಹಾಕಿದೆ ಅಂತವಾಂದುಕೊಂಡರೆ ಅದು ದೊಡ್ಡ ತಪ್ಪು.

ನಿಜಕ್ಕೂ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಅಡ್ಡವಾಗಿರೋದು ಯಾರು ? ಸ್ವತಃ ಡಾ.ವಿಷ್ಣುವರ್ಧನ್ ಅವರ ಕೆಲವು ಅಭಿಮಾನಿಗಳು ಮತ್ತು ಡಾ.ವಿಷ್ಣುವರ್ಧನ್ ಅವರ ಕುಟುಂಬ. ಹೌದು ಸಾಹಸಸಿಂಹ ವಿಷ್ಣು ಕುಟುಂಬದ ಪ್ರಕಾರ ವಿಷ್ಣುವರ್ಧನ್ ಸ್ಮಾರಕ ಬೆಂಗಳೂರಿನಲ್ಲಿ ಬೇಡ ಮೈಸೂರಿನಲ್ಲಿ ಇರಲಿ ಎಂಬುದು. ಆದರೆ ಕೆಲ ವಿಷ್ಣುವರ್ಧನ್ ಅವರ ಅಭಿಮಾನಿಗಳ ಪ್ರಕಾರ ವಿಷ್ಣುವರ್ಧನ ಸ್ಮಾರಕ ಬೆಂಗಳೂರಿನಲ್ಲಿ ಇರಲಿ ಎಂಬುದು ಮತ್ತೂ ಕೆಲ ವಿಷ್ಣುವರ್ಧನ್ ಅವರ ಅಭಿಮಾನಿಗಳ ಆಸೆ ಎಲ್ಲಾದರೂ ಸರಿ ಬೇಗ ವಿಷ್ಣುವರ್ಧನ್ ಸ್ಮಾರಕ ಆಗಲಿ ಎಂಬುದು. ಈ ಕುರಿತು ಸರ್ಕಾರ ಸಹ ಸ್ವಲ್ಪ ಗೊಂದಲಕ್ಕೆ ಸಿಲುಕಿದೆ. ಕೆಲವರು ವಿಷ್ಣುವರ್ಧನ್ ಸ್ಮಾರಕ ಬೆಂಗಳೂರಿನಲ್ಲಿ ಇರಲಿ ಎಂದು ಸರ್ಕಾರಕ್ಕೆ ಮನವಿ ಪತ್ರ ನೀಡಿದ್ದಾರೆ.

ಆದರೆ ಮತ್ತೆ ಕೆಲವರು ಮೈಸೂರಿನಲ್ಲಿ ಐದು ಎಕರೆ ಕೊಟ್ಟು ಸ್ಮಾರಕ ನಿರ್ಮಿಸಿ ಎನ್ನುವ ಬೇಡಿಕೆ ಇಟ್ಟಿದ್ದಾರೆ.ಇವರಿಬ್ಬರ ಬೇಡಿಕೆಗಳ ನಡುವೆ ಸರ್ಕಾರ ತಟಸ್ಥವಾಗಿದೆ.ಇದು ಕೇವಲ ಇಂದಿನ ಕಥೆಯಲ್ಲ ಕಳೆದ ನಾಲ್ಕೈದು ವರ್ಷಗಳಿಂದ ನಡೆಯುತ್ತಿರುವ ಹಗ್ಗ ಜಗ್ಗಾಟ. ವಿಷ್ಣುವರ್ಧನ್ ಅಭಿಮಾನಿಗಳಲ್ಲಿ ಎರಡು ಮೂರು ಬಣಗಳಾಗಿರುವುದೇ ವಿಷ್ಣುವರ್ಧನ್ ಸ್ಮಾರಕ ವಿಳಂಬಕ್ಕೆ ಮುಖ್ಯ ಕಾರಣ. ಅದಕ್ಕೆ ಉದಾಹರಣೆ ಅಂದ್ರೆ ಐದಾರು ವರ್ಷಗಳಿಂದ ಭಾರತಿ ವಿಷ್ಣುವರ್ಧನ್ ಅವರ ಜೊತೆ ವಿಷ್ಣುವರ್ಧನ್ ಅಭಿಮಾಬಿಗಲಕು ನಡೆಸಿದ ಸಭೆಗಳು ಯಶಸ್ವಿ ಆಗದಿರುವುದೇ ಸಾಕ್ಷಿ.ಅಷ್ಟೇ ಯಾಕೆ ಇಂದು ಸಾಹಸಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುಧ್ ಅವರ ನೇತೃತ್ವದಲ್ಲಿ ಭಾರತಿ ವಿಷ್ಣುವರ್ಧನ್ ಅವರ ಸಮ್ಮುಖದಲ್ಲಿ ವಿಷ್ಣು ಮನೆಯಲ್ಲಿ ನಡೆದ ಸ್ಮಾರಕ ವಿಚಾರ ಸಭೆಯಲ್ಲಿ ಸಹ ಕೆಲ ಅಭಿಮಾನಿಗಳು ಅರ್ಧಕ್ಕೆ ಹೊರನಡೆದುರುವುದೇ ಸಾಕ್ಷಿ. ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ಕುಟುಂಬದ ಮತ್ತು ಅಭಿಮಾನಿಗಳ ಒಮ್ಮತ ಅಭಿಪ್ರಾಯ ಬರುವ ತನಕ ಸ್ಮಾರಕ ವಿಚಾರ ಗೊಂದಲ ಬಗೆಹರಿಯಲ್ಲ ಎನ್ನುವುದು ಸತ್ಯ‌.ಮೊದಲು ಎಲ್ಲರೂ ಒಮ್ಮತದ ಅಭಿಪ್ರಾಯಕ್ಕೆ ಬರಬೇಕಿದೆ.ಸಮಸ್ಯೆ ತಮ್ಮಲ್ಲಿ ಇಟ್ಟುಕೊಂಡೇ ರಾಜ್‍ಕುಮಾರ್ ಮತ್ತು ಅಂಬರೀಶ್ ಸ್ಮಾರಕ ಕಡೆ ಬೆರಳು ಮಾಡುವುದು ಶೋಭೆಯಲ್ಲ ಎಂಬುದು ಸ್ವತಃ ವಿಷ್ಣುವರ್ಧನ್ ಅಭಿಮಾನಿಗಳು ಹೇಳಿದ ಮಾತಾಗಿವೆ.

ಇನ್ನು ಸರ್ಕಾರದ ಈ ನಿರ್ಲಕ್ಷ್ಯ ನೋಡಿ, ಈಗ ವಿಷ್ಣುವರ್ಧನ್ ಅವರ ಅಭಿಮಾನಿಗಳು ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಅವರ ಸ್ಮಾರಕ ನಿರ್ಮಾಣ ಶೀಘ್ರದಲ್ಲೇ ಆಗಬೇಕು, ಅದರ ಬಗ್ಗೆ ಸರ್ಕಾರ ಸರಿಯಾದ ಒಂದು ನಿರ್ಣಯ ಕೈಗೊಳ್ಳಬೇಕೆಂದು ವಿಷ್ಣುವರ್ಧನ್ ಅವರ ಅಭಿಮಾನಿಗಳು ಸರ್ಕಾರದ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಸರ್ಕಾರಕ್ಕೆ ಡಿಸೆಂಬರ್ 24 ರ ವರೆಗೆ ಗಡುವು ನೀಡಿರುವ ಅಭಿಮಾನಿಗಳು ಅಷ್ಟರೊಳಗೆ ವಿಷ್ಣುವರ್ಧನ್ ಸ್ಮಾರಕಕ್ಕೆ ಸ್ಥಳ ನಿಗಧಿ ಪಡಿಸಬೇಕೆಂದು, ಇಲ್ಲದಿದ್ದರೆ ಡಿಸೆಂಬರ್ 30ಕ್ಕೆ ಬೆಂಗಳೂರು ಬಂದ್ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಭಿಮಾನಿಗಳು ಭಾರತಿ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚೆ ಕೂಡಾ ಮಾಡಿದ್ದಾರೆ. ಅಭಿಮಾನಿಗಳ ಈ ಹೋರಾಟದಲ್ಲಿ ವಿಷ್ಣುವರ್ಧನ್ ಅವರ ಕುಟುಂಬ ಕೂಡಾ ಕೈ ಜೋಡಿಸಲಿದೆ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ ಸರ್ಕಾರದ ಈ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ಒಬ್ಬ ಕಲಾವಿದನಿಗೆ ಸರ್ಕಾರ ಈ ರೀತಿಯ ಬೆಲೆ ನೀಡುವುದು ಸರಿಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಅವರ ಆಕ್ರೋಶ ನಿಜಕ್ಕೂ ಸರಿಯಾಗಿದೆ. ಏಕೆಂದರೆ ವಿಷ್ಣುವರ್ಧನ್ ಅವರ ಕುಟುಂಬದವರು ಎಷ್ಟೇ ಕಛೇರಿಗಳನ್ನು ಅಲೆದರೂ ಇದುವರೆವಿಗೂ ಸರ್ಕಾರ ಏನು ಮಾಡಿಲ್ಲ.

ಅಭಿಮಾನಿಗಳು ಡಾ.ರಾಜ್ ಹಾಗೂ ಅಂಬರೀಶ್ ಅವರಿಗೆ ಈಗಾಗಲೇ ಸ್ಮಾರಕ ನಿರ್ಮಾಣಕ್ಕೆ ಸ್ಥಳ ನೀಡಿದೆ. ಆದರೆ ವಿಷ್ಣುವರ್ಧನ್ ಅವರ ವಿಷಯದಲ್ಲಿ ಮಾತ್ರ ಏಕೆ ಇಷ್ಟು ತಾರತಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸರ್ಕಾರ ತನ್ನಿಂದ ಸಾಧ್ಯವಿಲ್ಲ ಎಂದು ಹೇಳಿದರೆ ಅಭಿಮಾನಿಗಳೇ ವಿಷ್ಣುವರ್ಧನ್ ಅವರ ಸ್ಮಾರಕವನ್ನು ನಿರ್ಮಾಣ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅವರ ಕೋಪ ತಾರಕಕ್ಕೇರಿದ್ದು, ನೀಡಿರುವ ಗಡುವಿನೊಳಗೆ ಸರಿಯಾದ ನಿರ್ಧಾರ ತಿಳಿಸದಿದ್ದರೆ ಬೆಂಗಳೂರು ಬಂದ್ ಖಚಿತ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here