ಸಾಹಸಸಿಂಹ, ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಅವರು ನಮ್ಮ‌ ಮಧ್ಯೆ ಶಾರೀರಿಕವಾಗಿಲ್ಲ. ಆದರೆ ಅವರ ಚಿತ್ರಗಳು ಹಾಗೂ ಅವರ ನೆನಪುಗಳು ಮಾತ್ರ ಸದಾ ನಮ್ಮೊಂದಿಗಿವೆ. ಅವರ ಸಾಧನೆಗಳು ಕಣ್ಮುಂದೆ ಇದೆ. ಅವರ ನೆನಪು ಬಂದಾಗ ಅವರು ಅಭಿನಯಿಸಿದ ಪಾತ್ರಗಳು ಸ್ಮೃತಿ ಪಟಲದಲ್ಲಿ ಹಾದು ಹೋಗುತ್ತವೆ. ಅಂತಹ ಅದ್ಭುತ ನಟ ಡಾ.ವಿಷ್ಣುವರ್ಧನ್. ಅವರ ಅಭಿಮಾನಿಗಳಿಗಂತೂ ವಿಷ್ಣುವರ್ಧನ್ ಅವರು ಆರಾಧ್ಯದೈವ. ಇಂದಿಗೂ ವಿಷ್ಣುವರ್ಧನ್ ಚಿತ್ರಗಳೆಂದರೆ ಜನರಲ್ಲಿ ಒಂದು ರೀತಿಯ ಕ್ರೇಜ್ ಹಾಗೂ ಆಸಕ್ತಿಯಿದೆ ಎಂದು ಹೇಳಬಹುದು. ಇಂತಹ ಅದ್ಭುತ ನಟನಿಗೆ ಪ್ರೇರಣೆ ಯಾರು ಎಂಬ ವಿಷಯ ನಿಜವಾಗಿಯೂ ರೋಚಕವಾಗಿದೆ.

ವಿಷ್ಣುವರ್ಧನ್ ಅವರು ಶೂಟಿಂಗ್ ಇಲ್ಲಿದೆ ಬಿಡುವಾಗಿರುವಂತಹ ಸಂದರ್ಭಗಳಲ್ಲಿ ಫಿಲಂಗಳನ್ನು ನೋಡುವುದರಲ್ಲಿ ಬಹಳ ಆಸಕ್ತಿ ತೋರಿಸುತ್ತಿದ್ದರಂತೆ. ಯಾರಾದರೂ ಯಾವುದಾದರೂ ಸಿನಿಮಾ ಚೆನ್ನಾಗಿದೆ ಅಂದರೆ ಆ ಸಿನಿಮಾವನ್ನು ಮನೆಗೆ ತರಿಸಿಕೊಂಡು ನೋಡೋದು ಅವರಿಗೆ ಬಹಳ ಇಷ್ಟವಾಗಿತ್ತು. ಸಿನಿಮಾ ನೋಡಿ ಸುಮ್ಮನಾಗದೆ, ತಮ್ಮ ಮಕ್ಕಳನ್ನು ಕರೆದು ಆ ಸಿನಿಮಾದ ಬಗ್ಗೆ ವಿವರಣೆಯನ್ನು ಕೂಡಾ ನೀಡ್ತಾ ಇದ್ದರಂತೆ. ಮಕ್ಕಳಿಗೆ ಸಿನಿಮಾದ ಪಾತ್ರಗಳ ಬಗ್ಗೆ , ನಟನೆಯ ಬಗ್ಗೆ ಹೇಳ್ತಾ, ಆ ಸಿನಿಮಾಗಳ ಕುರಿತು ಮಾತನಾಡ್ತಾ ಇದ್ದರಂತೆ. ನಟನಾಗಿ, ಇತರರ ಸಿನಿಮಾ‌ ನೋಡಿ, ಅದನ್ನು ಮೆಚ್ಚುವ ವಿಶಾಲ ಹೃದಯ ಅವರಿಗಿತ್ತು…

ಇನ್ನು ವಿಷ್ಣುವರ್ಧನ್ ಅವರ ಮಗಳು ಕೀರ್ತಿ ಅವರು ಹೇಳುವ ಪ್ರಕಾರ ವಿಷ್ಣುವರ್ಧನ್ ಅವರಿಗೆ ಅಣ್ಣಾವ್ರೆ ಪ್ರೇರಣೆಯಂತೆ.ಡಾ.ವಿಷ್ಣುವರ್ಧನ್ ಅವರ ಕೊನೆಯ ದಿನಗಳಲ್ಲಿ ಪುತ್ರಿ ಕೀರ್ತಿ‌ ವಿಷ್ಣುವರ್ಧನ್ ಜೊತೆ ಹೆಚ್ಚಾಗಿ ವರನಟ ಡಾ.ರಾಜಕುಮಾರ್  ಅವರ ಬಗ್ಗೆಯೇ ಚರ್ಚಿಸುತ್ತಿದ್ದರಂತೆ. ಬಿಡುವಾಗಿದ್ದಾಗಲೆಲ್ಲಾ, ಡಾ.ರಾಜ್ ಅವರ ಸಿನಿಮಾಗಳನ್ನು ನೋಡ್ತಾ ಇದ್ದರಂತೆ. ಅದರಲ್ಲೂ ವಿಶೇಷವಾಗಿ ರಣಧೀರ ಕಂಠೀರವ, ಶ್ರೀಕೃಷ್ಣ ದೇವರಾಯ ಫಿಲಂಗಳನ್ನು ನೋಡ್ತಾ, ಮಗಳಿಗೆ ಡಾ.ರಾಜ್ ಅವರ ನಟನ ಪ್ರತಿಭೆಯನ್ನು ಹೊಗಳುತ್ತಾ, ಆ ನಟನ ಹಾವ, ಭಾವ ನೋಡು, ಕಾಸ್ಟ್ಯೂಮ್ಸ್ ನೋಡು, ಅವರ ನಟನಾ ಕೌಶಲ ನೋಡು ಎಂದೆಲ್ಲಾ ಹೇಳ್ತಾ ಇದ್ದರಂತೆ. ಪೌರಾಣಿಕ ಆಗಿರಲಿ ಅಥವಾ ಐತಿಹಾಸಿಕ ಆಗಿರಲಿ ಅವರಿಗೆ ವರನಟ ಡಾ.ರಾಜಕುಮಾರ್ ಅವರ ಪಾತ್ರಗಳು ಪ್ರೇರಣೆಯಾಗಿದ್ದವಂತೆ. ಹೀಗೆ ವರನಟನ ಬಗ್ಗೆ ಅಪಾರವಾದ ಅಭಿಮಾನ ಡಾ.ವಿಷ್ಣುವರ್ಧನ್ ಅವರಲ್ಲಿತ್ತು… ವರದಿ ಕೃಪೆ :- tv9

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here