ಸೆಪ್ಟೆಂಬರ್ 18 ಬಂತೆಂದರೆ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಅದೊಂದು ದೊಡ್ಡ ಸಂಭ್ರಮದ ದಿನ. ಹಬ್ಬದಂತೆ ಸಂತಸದಿಂದ ಸಂಭ್ರಮವನ್ನು ಹಂಚಿಕೊಳ್ಳುವ ದಿನ. ಏಕೆಂದರೆ ಇದು ಅಭಿನಯ ಭಾರ್ಗವ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಜನ್ಮ ದಿನ ಇದು. ಇನ್ನು ಅವರ ಅಭಿಮಾನಿಗಳಂತೂ ಪ್ರತಿವರ್ಷವೂ ಈ ದಿನವನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಕೂಡಾ ಅದೇ ರೀತಿ ವಿಷ್ಣುವರ್ಧನ್ ಅವರ ಜನ್ಮದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ ಅವರ ಅಭಿಮಾನಿಗಳು.‌ ರಾಜ್ಯದ ವಿವಿಧ ಕಡೆಗಳಲ್ಲಿ ಇರುವ ವಿಷ್ಣು ದಾದಾ ಅವರ ಅಭಿಮಾನಿಗಳು ಅವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.‌

ಈ ಬಾರಿ ವಿಷ್ಣುವರ್ಧನ್ ಅವರ ಹುಟ್ಟು ಹಬ್ಬಕ್ಕೆ ಮತ್ತೊಂದು ವಿಶೇಷ ಕೂಡಾ ಇದೆ. ಏಕೆಂದರೆ ಈ ಬಾರಿ ಅವರ ಹುಟ್ಟುಹಬ್ಬದ ದಿನವೇ ಅವರ ಅಭಿನಯದ, ದಶಕಗಳ ಹಿಂದೆ ಅಂದರೆ 1993 ರಲ್ಲಿ ತೆರೆ ಕಂಡ ಒಂದು ವಿನೂತನ ಶೈಲಿಯ ಚಿತ್ರ ‘ನಿಷ್ಕರ್ಷ’ ಆಗ ಒಂದು ವಿಭಿ‌ನ್ನ ಅನುಭವವನ್ನು ಜನರಿಗೆ ನೀಡಿತ್ತು. ಈಗ ಅದೇ ಸಿನಿಮಾ ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದ್ದು ಮತ್ತೊಮ್ಮೆ ಎಲ್ಲರನ್ನು ರಂಜಿಸಲು ಬರುತ್ತಿದೆ. ಈ ಚಿತ್ರದ ನಿರ್ಮಾಪಕರಾದ ಬಿ.ಸಿ. ಪಾಟೀಲ್ ಅವರು ಸಿನಿಮಾವನ್ನು ಹೈ ಟೆಕ್ನಾಲಜಿ, ಕಲರಿಂಗ್ ಹಾಗೂ ಡಿಜಿಟಲ್ ಸೌಂಡ್​​​​​ನೊಂದಿಗೆ ಸೆಪ್ಟೆಂಬರ್ 20 ರಂದು ರೀ-ರಿಲೀಸ್ ಮಾಡುತ್ತಿದ್ದಾರೆ.

ಬಿಡುಗಡೆಯಾಗಲಿರುವ ಈ ಸಿನಿಮಾವನ್ನು ನೋಡಲು ಸ್ಯಾಂಡಲ್​​​ವುಡ್ ಮಂದಿ ಬಹಳ ಉತ್ಸುಕರು ಮತ್ತು ಕಾತರರಾಗಿದ್ದಾರೆ. ಈ ವಿಷಯದ ಬಗ್ಗೆ ಮಾತನಾಡಿರುವ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಅವರು ಕೂಡಾ ಈ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾರೆ. ಅದು ಮಾತ್ರವಲ್ಲದೆ ’25 ವರ್ಷಗಳ ನಂತರ ಸಿನಿಮಾ ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿರುವ ಅವರು ಈ ಮೊದಲು ಕೂಡಾ ತಾನು 4-5 ಬಾರಿ ಈ ಸಿನಿಮಾವನ್ನು ನೋಡಿದ್ದೇನೆ ಎಂದು ಹೇಳಿದ್ದು, ಈಗ ಮತ್ತೊಮ್ಮೆ ನೋಡುವುದಾಗಿಯೂ, ನೀವೆಲ್ಲರೂ ಸಿನಿಮಾ ನೋಡಿ ಎಂದು ಎಲ್ಲರಿಗೂ ಸಂದೇಶ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here