ಕನ್ನಡ ಚಿತ್ರಗಳಲ್ಲಿ ಕನ್ನಡ ಬಾಡಿನ ಮೇಲಿನ ಅಭಿಮಾನ ಸಾರುವ ಹಲವು ಹಾಡುಗಳು ಬಂದಿವೆ.ಅವುಗಳಲ್ಲಿ ಹಲವಾರು ಹಾಡುಗಳು ಸಾಕಷ್ಟು ಜನಪ್ರಿಯತೆ ಪಡೆದಿವೆ.ಕನ್ನಡ ನಾಡಿನ ಜನರಲ್ಲಿ ಕನ್ನಡದ ಬಗ್ಗೆ ಅತಿ ಹೆಚ್ಚಿನ ಜನಪ್ರಿಯತೆ ಪಡೆದ ಹಾಡುಗಳಲ್ಲಿ ಆಕಸ್ಮಿಕ ಚಿತ್ರದ ವರನಟ ಗಾನಗಂಧರ್ವ ಡಾ‌.ರಾಜ್‍ಕುಮಾರ್ ಅವರು ಹಾಡಿರುವ ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಹಾಡು ಮೊದಲ ಸಾಲಿನಲ್ಲಿ ನಿಲ್ಲುತ್ತದೆ.ಇಂದಿಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡನ್ನು ನಾಡಗೀತೆಯಂತೆ ಬಿಂಬಿಸಲಾಗುತ್ತದೆ.

ಆಕಸ್ಮಿಕ ಚಿತ್ರದ ಈ ಅದ್ಭುತ ಹಾಡಿನ ಹಿಂದೆ ನಾದಬ್ರಹ್ಮ ಹಂಸಲೇಖ ಅವರ ಶ್ರಮ ಇದೆ.ನಾದಬ್ರಹ್ಮ ಹಂಸಲೇಖ ಅವರ ಅದ್ಭುತ ಸಂಗೀತದ ಸಂಯೋಜನೆಗೆ ಡಾ.ರಾಜ್‍ಕುಮಾರ್ ಅವರು ಜೀವತುಂಬಿದ್ದರು.ಇನ್ನು ಈ ಹಾಡಿಗೆ ಸ್ವತಃ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರೇ ಮಾರುಹೋಗಿದ್ದರು.ಈ ಹಾಡಿಗೆ ಮರುಳಾಗಿದ್ದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರು ನಂತರ ಹಂಸಲೇಖ ಅವರು ಸಿಕ್ಕಾಗ ” ದೊಡ್ಡವರಿಗಾಗಿ ಮಾಡಿದ ಹಾಡು ಕೇಳಿದೆ. ಬಹಳ ಅದ್ಬುತ ಹಾಡು ದಯವಿಟ್ಟು ನಮಗೂ ಒಂದು ಹಾಡು ನಾಡಿನ ಬಗ್ಗೆ ಮಾಡಿಕೊಡಿ ಎಂದು ನಾದಬ್ರಹ್ಮ ಹಂಸಲೇಖ ಅವರ ಬಳಿ ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರು ಕೇಳಿದ್ದರು.

ಇದಾದ ಬಳಿಕ ಡಾ.ವಿಷ್ಣುವರ್ಧನ್ ಅವರ 150 ನೇ ಚಿತ್ರವಾದ ಮೋಜುಗಾರ ಸೊಗಸುಗಾರ ಚಿತ್ರದ ಮುಹೂರ್ತ ಆರಂಭವಾಗುತ್ತದೆ. ಆ ಸಂದರ್ಭದಲ್ಲಿ ಸಾಹಸಸಿಂಹ ಡಾ ವಿಷ್ಣುವರ್ಧನ್ ಮತ್ತು ನಾದಬ್ರಹ್ಮ ಹಂಸಲೇಖ ಅವರು ಜೊತೆಯಲ್ಲಿ ಸಿನಿಮಾ ಮಾಡುವ ಅವಕಾಶ ಬರುತ್ತದೆ‌. ಮೊದಲ ಬಾರಿಗೆ ವಿಷ್ಣುದಾದಾ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡುತ್ತಾರೆ.ಹಂಸಲೇಖ ಅವರು ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಉಪಯೋಗಿಸಿ ಮೋಜುಗಾರ ಸೊಗಸುಗಾರ ಚಿತ್ರಕ್ಜೆ ಅತ್ಯುತ್ತಮ ಸಂಗೀತ ನೀಡುತ್ತಾರೆ.

ಇದೇ ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಅವರ ಆಸೆಯಂತೆ ಕನ್ನಡ ನಾಡಿನ ಮೇಲೆ ಅಭಿಮಾನ ಸಾರುವ ಕನ್ನಡವೇ ನಮ್ಮಮ್ಮ ಎನ್ನುವ ಸುಂದರ ಹಾಡನ್ನು ಬರೆದು ಸಂಗೀತ ಸಂಯೋಜನೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಈ ಸುಂದರ ಹಾಡನ್ನು ಸ್ವತಃ ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ ಬಳಿಯೇ ಹಾಡಿಸುತ್ತಾರೆ.ನಂತರದ ದಿನಗಳಲ್ಲಿ ಕನ್ನಡವೇ ನಮ್ಮಮ್ಮ ಹಾಡು ಜನ ಜನಪ್ರಿಯವಾಗುತ್ತದೆ‌.ಹೀಗೆ ವಿಷ್ಣುವರ್ಧನ್ ಅವರು ಕನ್ನಡ ನಾಡಿನ ಮೇಲಿನ ಪ್ರೀತಿಯಿಂದ ಹಂಸಲೇಖ ಅವರ ಬಳಿ ಕೇಳಿ ಮಾಡಿಸಿದ ಹಾಡೇ ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ…ಹೀಗೆ ಈ ಹಾಡು ಹುಟ್ಟಿದ ನೆನಪನ್ನು ನಾದಬ್ರಹ್ಮ ಹಂಸಲೇಖ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here