ತಾನೇ ಒಬ್ಬ ಸೂಪರ್ ಸ್ಟಾರ್ ಆಗಿರುವಾಗ ಆ ಸ್ಟಾರ್ ಒಂದು ಜನಪ್ರಿಯ ಕಾರ್ಯಕ್ರಮದಲ್ಲಿ ನಿಂತು ಮತ್ತೊಬ್ಬ ಸ್ಟಾರ್ ಬಗ್ಗೆ ಮಾತಾಡುವುದು ಎಂದರೆ ಅದು ಸಾಮಾನ್ಯ ವಿಷಯವಲ್ಲ.ಹೌದು ಈಗಿನ ಸಿನಿಮಾ ರಂಗದಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಅಷ್ಟಕ್ಕಷ್ಟೇ,ಕಾಲೆಳೆಯುವ ಮಂದಿಗಳೇ ಹೆಚ್ಚಿರುವ ಸಿನಿಮಾ ರಂಗ ಇದು.ಅಂತಹದ್ದರಲ್ಲಿ ಕನ್ನಡ ಚಿತ್ರರಂಗದ ಪ್ರಸ್ತುತ ನಂಬರ್ 1 ಸ್ಟಾರ್ ಎನಿಸಿಕೊಂಡಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕಲರ್ಸ್ ಸೂಪರ್ ಗಾಗಿ ಫ್ಯಾಮಿಲಿ ಪವರ್ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ.ಇನ್ನು ಈ ಕಾರ್ಯಕ್ರಮಕ್ಕೆ ಎಲ್ಲಾ ನಟ ನಟಿಯರ ಅಭಿಮಾನಿಗಳು ಬರುತ್ತಾರೆ ಮತ್ತು ಆಡುತ್ತಾರೆ.

ಎಲ್ಲ ಸ್ಪರ್ಧಿಗಳನ್ನು ಆತ್ಮೀಯವಾಗಿ ಮಾತಾಡಿಸುವ ಪುನೀತ್ ರಾಜ್‍ಕುಮಾರ್ ಆ ಸ್ಪರ್ಧಿಗಳಿಗೆ ಅವರ ಮೆಚ್ಚಿನ ಸ್ಟಾರ್ ಗೆ ಸಂಬಂಧಿಸಿದ ಪ್ರಶ್ನೆಗಳನ್ನೇ ಕೇಳುತ್ತಾರೆ ಅಷ್ಟೇ ಅಲ್ಲ ಆ ಸ್ಟಾರ್ ಗಳ ಬಗ್ಗೆ ತಮಗೆ ತಿಳಿದಿರುವ ಮಾಹಿತಿಗಳನ್ನು ಕೂಡ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ವಿಷ್ಣುವರ್ಧನ್ ಅವರ ಬಗ್ಗೆ ಒಂದು ಮಾಹಿತಿ ತಿಳಿಸುತ್ತಾ ವಿಷ್ಣುವರ್ಧನ್ ಅವರು ಮುತ್ತಿನ ಹಾರ ಸಿನಿಮಾ ಮಾಡುವಾಗ ಆ ಸಿನಿಮಾದ ದೃಶ್ಯವೊಂದರಲ್ಲಿ ವಿಷ್ಣುವರ್ಧನ್ ಅವರ ತಲೆ ಕೂದಲು ತೆಗೆದು ಬೋಳು ತಲೆಯಲ್ಲಿರುವ ದೃಶ್ಯ ಮಾಡಬೇಕು ಎಂದಾಗ

ಚಿತ್ರದ ನಿರ್ದೇಶಕ ಎಸ್ .ವಿ.ರಾಜೇಂದ್ರಸಿಂಗ್ ಬಾಬು ವಿಗ್ ಹಾಕಿ ಚಿತ್ರಿಸೋಣ ಎಂದು ನಿರ್ಧರಿಸಿದರಂತೆ ಆದರೆ ಇದಕ್ಕೆ ಒಪ್ಪದ ವಿಷ್ಣುದಾದಾ ನಿಜವಾಗಿಯೂ ತಲೆಕೂದಲು ತೆಗೆದು ಬೋಳುತಲೆಯಲ್ಲಿ ಚಿತ್ರೀಕರಣಕ್ಕೆ ರೆಡಿಯಾದರಂತೆ ಇದು ವಿಷ್ಣುವರ್ಧನ್ ಅವರಿಗೆ ಸಿನಿಮಾದ ಮೇಲೆ ಇದ್ದ ಪ್ರೀತಿ ತೋರುತ್ತದೆ ಎಂದ ಪುನೀತ್ ವಿಷ್ಣುವರ್ಧನ್ ಬೋಳುತಲೆಯಲ್ಲಿದ್ದ ಕಂಡ ವಿಷ್ಣುದಾದಾ ಅಭಿಮಾನಿಗಳು ಕೂಡ ತಲೆ ಕೂದಲು ತೆಗೆಸಿಕೊಂಡು ಸಿನಿಮಾ ನೋಡಿದ್ದರಂತೆ ಎಂಬ ಮಾಹಿತಿಯನ್ನು ನೋಡುಗರಿಗೆ ಹೇಳುವ ಮೂಲಕ ವೀಕ್ಷಕರ ಮನಗೆದ್ದರು.

ಇನ್ನು ಸ್ಪರ್ಧಿಯೊಬ್ಬರು ನಾನು ದರ್ಶನ್ ಸರ್ ಅಭಿಮಾನಿ ಎಂದಾಗ ದರ್ಶನ್ ಅವರ ಸಿನಿಮಾ ಬಗ್ಗೆ ಪ್ರಶ್ನೆ ಕೇಳಿ ದರ್ಶನ್ ನನಗೊಬ್ಬ ಉತ್ತಮ ಸ್ನೇಹಿತ ದರ್ಶನ್ ಅವರ ಹೈಟ್ ಎಂಡ್ ಪರ್ಸಾನಲಿಟಿ ನನಗೆ ತುಂಬಾ ಇಷ್ಟ ಎಂದು ದರ್ಶನ್ ಗುಣಗಾನ ಮಾಡಿದ ಪುನೀತ್ ರಾಜ್‍ಕುಮಾರ್ ತಮ್ಮ ಸರಳತೆ ಮೂಲಕವೇ ಹೆಚ್ಚು ಹೆಚ್ಚು ಜನಪ್ರಿಯರಾಗುತ್ತಿದ್ದಾರೆ.ಪುನೀತ್ ನಡವಳಿಕೆ ಕಂಡ ಹಲವರು ಈಗ ಹೇಳುತ್ತಿರುವುದು ತುಂಬಿದ ಕೊಡ ತುಳುಕಲ್ಲ ಎಂಬ ಗಾದೆ ಸುಳ್ಳಲ್ಲ ಎನ್ನುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

1 COMMENT

  1. ನಾನು ಮನರಂಜನೆಗಾಗಿ ಚಲನಚಿತ್ರಗಳನ್ನು ನೋಡುತ್ತೇನೆ. ನಾನು ಯಾವುದೇ ವ್ಯಕ್ತಿ ಪೂಜೆ ಮಾಡುವುದಿಲ್ಲ.

LEAVE A REPLY

Please enter your comment!
Please enter your name here