ಕೊರೊನಾ ವೈರಸ್ ಭಾರತ ಮಾತ್ರವಲ್ಲ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ತನ್ನ ಮರಣ ಮೃದಂಗವನ್ನು ಬಾರಿಸುತ್ತಿದೆ. ವಿಶ್ವದ ಬಲಿಷ್ಠ ರಾಷ್ಟ್ರಗಳೇ ಕೊರೊನಾ ವನ್ನು ಎದುರಿಸಲು ಹರ ಸಾಹಸ ಪಡುವಂತಾಗಿದೆ. ಇನ್ನು ನಮ್ಮದೇಶದಲ್ಲಿ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ 4 ಸಾವಿರದ ಗಡಿಯನ್ನು ದಾಟಿದೆ. ಹೀಗೆ ಸೋಂಕಿಗೆ ಗುರಿಯಾದವರಲ್ಲಿ ಶೇ.30 ರಷ್ಟು ಪ್ರಕರಣಗಳು ದೆಹಲಿಯಲ್ಲಿ ನಡೆದ ತಬ್ಲೀಘಿ ಜಮಾತ್ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದು ಎಂಬುದು ಕೂಡಾ ಈಗಾಗಲೇ ತಿಳಿದಿದೆ. ಈ ಹಿನ್ನೆಲೆಯಲ್ಲಿ ತಬ್ಲೀಘಿ ಜಮಾತ್ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹ ವೊಂದನ್ನು ಮಾಡಿದೆ.

ತಬ್ಲೀಘಿ ಜಮಾತ್ ಸಂಘಟನೆಯು ಉಗ್ರರೊಂದಿಗೆ ಸಂಬಂಧವನ್ನು ಹೊಂದಿದೆ. ಈಗ ಕೊರೊನಾ ವನ್ನು ತನ್ನ ಅಸ್ತ್ರವನ್ನಾಗಿಸಿಕೊಂಡು ಅದು ದೇಶವನ್ನು ಹಾಳು ಮಾಡಲು ಪ್ರಯತ್ನ ಮಾಡುತ್ತಿದೆ. ಆದ ಕಾರಣ ಈ ಮುಸ್ಲಿಂ ಸಂಘಟನೆಯನ್ನು ನಿಷೇಧಿಸಬೇಕೆಂದು ಹಾಹೂ ನಿಜಾಮುದ್ದೀನ್ ಮರ್ಕಜ್‍ನ ಬ್ಯಾಂಕ್ ಖಾತೆಗಳ ಕುರಿತಾಗಿ ಶೀಘ್ರವಾಗಿ ತನಿಖೆಯನ್ನು ನಡೆಸಬೇಕೆಂದು ವಿಶ್ವ ಹಿಂದು ಪರಿಷತ್ ತಿಳಿಸಿದೆ. ನಡೆಸಬೇಕು. ಈ ವಿಷಯವಾಗಿ ವಿಶ್ವ ಹಿಂದೂ ಪರಿಷತ್ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಅವರು ಹೇಳಿಕೆಯನ್ನು ನೀಡಿದ್ದಾರೆ.

ಅವರು ತಮ್ಮ ಹೇಳಿಕೆಯಲ್ಲಿ ಈ ಸಂಘಟನೆಯು ನಿಜಾಮುದ್ದೀನ್‍ನಲ್ಲಿರುವ ಪ್ರಧಾನ ಕಚೇರಿಯಿಂದ, ಲಕ್ಷಾಂತರ ತಬ್ಲೀಘಿಗಳ ಮೂಲಕ ಪ್ರಪಂಚದಾದ್ಯಂತ ದುಷ್ಟತನವನ್ನು ಹಾಗೂ ಭಯೋತ್ಪಾದನೆಯನ್ನು ಹರಡುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ. ಅವರು ನಡೆಸಿದ ಸಭೆಯಿಂದಾಗಿ ಇಂದು ಭಾರತ ಸಂಕಷ್ಟವನ್ನು ಎದುರಿಸುವಂತೆ ಆಗಿದೆ. ಅವರ ವರ್ತನೆಯಿಂದಾಗಿ ಭಾರತದಲ್ಲಿ ಸಾವು ನೋವುಗಳ ಸಂಖ್ಯೆ ಹೆಚ್ಚಾಗಿದೆ. ನಿಜಾಮುದ್ದೀನ್ ನಲ್ಲಿ ಇರುವ ಮರ್ಕಜ್ ಕಟ್ಟಡವನ್ನು ಸೀಲ್ ಮಾಡಬೇಕೆಂದು ಕೂಡಾ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here