ಇಡೀ ದೇಶವೇ ಬೆಚ್ಚಿ ಬೀಳುವಂತೆ, ಪೈಶಾಚಿಕತೆಯನ್ನು ಮೆರೆದಿದ್ದ ಹೈದರಾಬಾದ್ ಘಟನೆಯ  ಪ್ರಕರಣದ ನಾಲ್ವರು ಆರೋಪಿಗಳ ವಿರುದ್ಧ ಇಡೀ ದೇಶವೇ ಧ್ವನಿ ಎತ್ತಿತ್ತು. ಈ ನಾಲ್ಕು ಜನ ಆರೋಪಿಗಳನ್ನು ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿಯಾದ ವಿಶ್ವನಾಥ್ ಸಜ್ಜನರ್ ಅವರು ಇಂದು ಮುಂಜಾನೆ ಎನ್‍ಕೌಂಟರ್ ಮಾಡಿದ್ದಾರೆ. ವಿಶ್ವನಾಥ್ ಸಜ್ಜನರ್ ಅವರೊಬ್ಬ ಎನ್‍ಕೌಂಟರ್ ಸ್ಪೆಷಲಿಸ್ಟ್ ಆಗಿದ್ದಾರೆ. ಇವರು ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ವಿಶ್ವನಾಥ್ ಸಜ್ಜನರ್ ಅವರು ವಾರಂಗಲ್ ನಲ್ಲಿ ಎಸ್‍ಪಿ ಆಗಿ ಸೇವೆ ಸಲ್ಲಿಸಿದ್ದರು.

ಇವರು ಎಸ್ಪಿ ಆಗಿದ್ದಾಗ ಆಸಿಡ್ ಧಾಳಿ ಪ್ರಕರಣದ ಆರೋಪಿಗಳನ್ನು ಕೂಡಾ ಎನ್‍ಕೌಂಟರ್ ನಲ್ಲಿ ಹತ್ಯೆಗೈದು ಸರಿಯಾದ ಶಿಕ್ಷೆಯನ್ನು ನೀಡಿದ್ದರು. ಅವರು ಆ ಎನ್ ಕೌಂಟರ್ ನಡೆಸಿದ ನಂತರ ಸುತ್ತ ಮುತ್ತಲಲ್ಲಿ ಆ್ಯಸಿಡ್ ಧಾಳಿಯ ಪ್ರಕರಣಗಳು ಇಳಿಮುಖ ಆಗಿತ್ತು ಎನ್ನುವುದು ಕೂಡಾ ವಾಸ್ತವ.
ಮೂಲತಃ ಕನ್ನಡಿಗರಾದ ವಿಶ್ವನಾಥ್ ಅವರು ನಾಲ್ಕು ಜನ ಕಿರಾತಕರ ಸದ್ದನ್ನು ಈ ಮುಂಜಾನೆ ನಿಶ್ಯಬ್ದ ಮಾಡಿದ್ದಾರೆ. ಜನರ ಕೂಗಿಗೆ, ಇಂತಹ ಪಾಪಿಗಳಿಗೆ ತಕ್ಕದಾದ ದಂಡನೆಯನ್ನು ವಿಧಿಸಿದ್ದಾರೆ. ಕಾಮುಕರ ಹುಟ್ಟಡಗಿಸಿದ ವಿಶ್ವನಾಥ್ ಅವರಿಗೆ ವ್ಯಾಪಕ ಪ್ರಶಂಸೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀಡಲಾಗುತ್ತಿದೆ.

ನಾಲ್ವರು ರೇಪಿಸ್ಟ್ ಗಳ ಎನ್‍ಕೌಂಟರ್ ಬೆನ್ನಲ್ಲೇ ಹೈದಾರಾಬಾದ್‍ನಲ್ಲಿ ವಿದ್ಯಾರ್ಥಿಗಳು ಕೂಡಾ ಪೊಲೀಸರ ಈ ಕಾರ್ಯವನ್ನು ಮೆಚ್ಚಿ ಹೊಗಳಿದ್ದಾರೆ. ಆದರೆ ಟ್ವಿಟರ್ ನಲ್ಲಿ ಬುದ್ಧಿ ಜೀವಿಗಳೆಂಬ ಮುಸುಕನ್ನು ಧರಿಸಿದವರು ಇಂತಹ ಒಂದು ಎನ್ ಕೌಂಟರ್ ಕಾನೂನು ಬಾಹಿರ, ದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ಇದು ವಿರೋಧ ಎಂದು ಒಂದು ಹೊಸ ರಾಗವನ್ನು ಹಾಡಲು ಆರಂಭಿಸಿದ್ದು, ಅವರಿಗೆ ಪ್ರತಿಕ್ರಿಯೆಗಳ ಮೂಲಕ ವಿಶ್ವನಾಥ್ ಸಜ್ಜನರ್ ಮಾಡಿದ್ದು ಸರಿಯಾದ ನ್ಯಾಯ ಎಂದು ಅನೇಕರು ಟ್ವೀಟ್ ಮೂಲಕ ತಿಳಿಸುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here