ಮಾಜಿ ಸಿಎಂ ಸಿದ್ಧರಾಮಯ್ಯನವರು ತಮ್ಮ ಅಧಿಕಾರಾವಧಿಯಲ್ಲಿ ಜಾರಿಗೊಳಿಸಿದ್ದ ಅನ್ನ ಭಾಗ್ಯ ಯೋಜನೆ ದೊಡ್ಡ ಸದ್ದು ಮಾಡಿತ್ತು. ಮಾಜಿ ಸಿಎಂ ಸಿದ್ಧರಾಮಯ್ಯನವರು ಈಗಲೂ ಕೂಡಾ ಆಗಾಗ ಭಾಷಣಗಳನ್ನು ಮಾಡುವಾಗ ತಮ್ಮ ಈ ಯೋಜನೆಯ ಬಗ್ಗೆ ಬಹಳ ಹೆಮ್ಮೆಯಿಂದ ಹೇಳುತ್ತಾ ಇರುತ್ತಾರೆ. ಆದರೆ ಈಗ ಅನ್ನಭಾಗ್ಯದ ಕಲ್ಪನೆಯನ್ನು ನಿಮಗೆ ಕೊಟ್ಟಿದ್ದು ನಾನು, ಅದು ನಿಮ್ಮ ಸಾಧನೆಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ವಿಶ್ವನಾಥ್ ಅವರು ವಾಗ್ದಾಳಿಯನ್ನು ನೀಡುವ ಮೂಲಕ ಅನ್ನಭಾಗ್ಯ ಕಲ್ಪನೆಯು ನನ್ನದು ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್ ಅವರು, ದೇಶದ ಪ್ರಧಾನಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಇಬ್ಬರೂ ಮಾಡುತ್ತಿರುವ ಟೀಕಾ ಪ್ರಹಾರಗಳ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದು, ಅವರು ಪ್ರಧಾನಿ ವಿರುದ್ಧ ವಿಪಕ್ಷಗಳು ಮಾಡಿರುವಂತಹ ಪದ ಪ್ರಯೋಗವು ಸರಿಯಿಲ್ಲ‌ ಅದನ್ನು ದೇಶದ ಜನರು ಮೆಚ್ಚುವುದಿಲ್ಲವೆಂದು ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಸಾಧನೆ ಏನು? ಹಾಗೂ ಮೋದಿ ಸಾಧನೆ ಏನು? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ದೊಡ್ಡ ದೊಡ್ಡವರು ಕೂಡಾ ಅಪ್ರಬುದ್ಧರಂತೆ ಮಾತನಾಡುತ್ತಿದ್ದಾರೆ. ನಾನು ಮೋದಿಯವರಲ್ಲಿ ದೇವರಾಜ್ ಅರಸ್ ಅವರನ್ನು ಕಾಣುತ್ತೇನೆ. ಅಹಿಂದ ಪ್ರಧಾನಿ ಯನ್ನು ಈ ರೀತಿ ಟೀಕೆ ಮಾಡುವುದು ಸರಿಯಲ್ಲ. ರಾಹುಲ್ ಗಾಂಧಿಯವರು ಈ ಪ್ರಧಾನಿಗೂ ಮರ್ಯಾದೆ ಕೊಡುವುದಿಲ್ಲ, ಕಾಂಗ್ರೆಸ್ ನವರೇ ಪ್ರಧಾನಿಯಾಗಿದ್ದಾಗಲೂ ಗೌರವ ಕೊಡಲಿಲ್ಲ, ನೀವು ಗೌರವ ಕೊಡುವುದನ್ನೇ ಕಲಿತಿಲ್ಲವೆಂದಿದ್ದಾರೆ. ಪ್ರಧಾನಿಯವರನ್ನು ಸಿದ್ಧರಾಮಯ್ಯನವರು ಅನ್ ಫಿಟ್ ಎನ್ನುತ್ತಾರೆ. ಹಾಗಾದರೆ ಸಿದ್ಧರಾಮಯ್ಯನವರು ಸಿಎಂ ಆಗುವುದಕ್ಕೆ ಫಿಟ್ ಆಗಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಮೋದಿಯವರ ಬಳಿ ಗುಜರಾತ್ ಮಾಡೆಲ್ ಇದೆ, ನಿಮ್ಮ ಮಾಡೆಲ್ ಏನು ಎಂದು ಪ್ರಶ್ನಿಸಿರುವ ಅವರು ನಿಮ್ಮ ಅನ್ನ ಭಾಗ್ಯ ಕಲ್ಪನೆ ಕೂಡಾ ನಾನು ಕೊಟ್ಟಿದ್ದು ಅದು ನಿಮ್ಮ ಸಾಧನೆಯಲ್ಲ ಎಂದು ಟೀಕೆ ಮಾಡಿದ್ದಾರೆ. ಸರ್ಕಾರದ ವಿರುದ್ಧ, ಪ್ರಧಾನಿ ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಿ ಸುಮ್ಮನೆ ಮಾತನಾಡಬೇಡಿ ಎಂದು ವಿಪಕ್ಷಗಳ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here