ಮೇ ೧ ವಿಶ್ವ ಕಾರ್ಮಿಕರ ದಿನ. ಜಗತ್ತಿನ ಎಲ್ಲಾ ಶ್ರಮ ಜೀವಿಗಳ ಶ್ರಮವನ್ನು ಗುರ್ತಿಸಿ, ಗೌರವಿಸಿ, ಜಗದ ಉದ್ದಗಲಕ್ಕೂ ಕಾರ್ಮಿಕ ಶಕ್ತಿಯ ಔನತ್ಯವನ್ನು ಸಾರಿ ಹೇಳುವ ಸುದಿನ. ಕಾಯಕವೇ ಕೈಲಾಸ ಎಂದು ನಂಬಿ ದುಡಿಯುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ಕಾರ್ಮಿಕನೇ ಹಾಗೂ ಆತನು ಮಾಡುವ ಕೆಲಸವೇ ಶ್ರಮ.

ನಾವು ವ್ಯಕ್ತಿಯನ್ನು ಗೌರವಿಸುವ ಬದಲು ಆತನ ಶ್ರಮವನ್ನು ಗೌರವಿಸಬೇಕಾದ ಅರ್ಥ ಪೂರ್ಣ ದಿನ ಕಾರ್ಮಿಕ ದಿನಾಚರಣೆ.ಇಂತಹ ಒಳ್ಳೆಯ ದಿನದಂದು ಶ್ರಮವೇ ತನ್ನ ಧರ್ಮವೆಂದು ತಿಳಿದು ನಾಡಿನ ಒಳಿತಿಗಾಗಿ ಜೀವ ಸವೆಸಿದ ಒಬ್ಬ ಮಹಾನ್ ವ್ಯಕ್ತಿ ಭಾರತ ರತ್ನ ಶ್ರೀ ಸರ್.ಎಂ.ವಿಶ್ವೇಶ್ವರಯ್ಯನವರು.

ಶ್ರಮ‌‌ ನಂಬಿದವನು, ಕಾರ್ಮಿಕನಾಗಿ ಆತ್ಮ ಪೂರ್ವಕವಾಗಿ ದುಡಿಯುವವನಿಗೆ ಸೋಲೇ ಇಲ್ಲ‌ ಎಂಬುದಕ್ಕೆ ಒಂದು ಉತ್ತಮ ಉದಾಹರಣೆ. ಕೇವಲ‌ ತನ್ನ ಶ್ರಮ ಹಾಗೂ ನಂಬಿಕೆಯಿಂದ ಹುಟ್ಟಿನಿಂದ ‌ ಸಾಮಾನ್ಯ ಎನಿಸಿದರೂ‌ ವೃತ್ತಿಯಿಂದ ಕಾರ್ಮಿಕ ವರ್ಗಕ್ಕೆ ಪ್ರೇರಣೆಯಾದವರು, ಸರ್.ಎಂ.ವಿ. ಇವರ ಕಾರ್ಯ ವೈಖರಿಗೆ ಇವರೇ ಸಾಟಿ.

ತನ್ನ ನಿರಂತರ ಶ್ರಮದಿಂದ ಅನೇಕರಿಗೆ ಇವರು‌‌ ಮಾದರಿಯಾದರು. ತಮ್ಮ ಅಪಾರ ಬುದ್ದಿಮತ್ತೆಯಿಂದ ಮೈಸೂರು ರಾಜ್ಯದ ದಿವಾನರಾದರು. ದಿವಾನ‌ಗಿರಿ ಸಿಕ್ಕ ಮಾತ್ರಕ್ಕೆ ಅವರು ವಿಲಾಸೀ ಜೀವನಕ್ಕೆ ದಾಸರಾಗಲಿಲ್ಲ
ಜೀವನದಲ್ಲಿ ಏನಾದರೂ ಸಾಧನೆ‌ ಮಾಡಬೇಕೆಂಬುವವರಿಗೆ‌ ಸರ್.ಎಂ. ವಿ ಅವರು ಒಂದು‌ ಉದಾಹರಣೆ.ಸರ್.ಎಂ.ವಿ ಯವರು ದಿವಾನರಾಗಿದ್ದಾಗ ಆಗಾಗ ವೃತ್ರಿ ಸಂಬಂಧ ಬೇರೆಯ ಸ್ಥಳಗಳಿಗೆ ಹೋಗುತ್ರಿದ್ದರು.

ಆಗ ಇಂದಿನಂತೆ ವಿದ್ಯುತ್ ಪೂರೈಕೆ ಇರುತ್ತಿರಲಿಲ್ಲ. ಆದ್ದರಿಂದ ಸರ್.ಎಂ.ವಿ. ಅವರು ತಮ್ಮೊಟಿಗೆ ಎರಡು‌ ರೀತಿಯ ಮೇಣದ ಬತ್ತಿ ಗಳನ್ನು ತೆಗೆದುಕೊಂಡು‌ ಹೋಗುತ್ತಿದ್ದರು. ಕಛೇರಿ‌ ಕೆಲಸಗಳಿಗೆ ಸರ್ಕಾರದ ಮೇಣದ ಬತ್ತಿಗಳನ್ನು ಹಾಗೂ ತಮ್ಮ ಸ್ವಂತ ಕಾರ್ಯಗಳಿಗೆ ತಾವು ಹಣಕೊಟ್ಟು ತಂದ ಮೇಣದ ಬತ್ತಿ ಗಳನ್ನು ಮಾತ್ರ ಬಳಸುತ್ತಿದ್ದರು. ಹೀಗೆ ವೃತ್ತಿಯಲ್ಲಿ ಸದಾ ಪ್ರಾಮಾಣಿಕತೆ ಮೆರೆದರು.ಸರ್. ಎಂ.ವಿಯವರು ತಮ್ಮನ್ನು ದಿವಾನರೆಂದು ಯಾರಾದರೂ ಗೌರವಿಸಿ, ತಾವು ಮಾಡಿದ ಕೆಲಸಕ್ಕೆ ಹಣಬೇಡ ಎಂದು ಹೇಳಿದರೆ ಅದಕ್ಕೊಪ್ಪದೆ ಇವರು, ಅವರ ಶ್ರಮವನ್ನು ಗೌರವಿಸಿ ಹಣ ನೀಡುವವರೆಗೂ ಬಿಡುತ್ತಿರಲಿಲ್ಲ. ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಇರುತ್ತಿದ್ದರು. ಇವರು ಶ್ರಮದಿಂದ ಪಡೆದ ಪ್ರಶಸ್ತಿ ಪುರಸ್ಕಾರಗಳು ಅನೇಕ.

ನಾವು ಕಾರ್ಮಿಕ ದಿನಾಚರಣೆಯ ಆಚರಣೆಯನ್ನು ನಿಜವಾದ ಅರ್ಥದಲ್ಲಿ ಮಾಡುವುದಾದರೆ ,ನಮ್ಮ‌‌ ಸುತ್ತ ಮುತ್ತ ಇರುವ ಕಾರ್ಮಿಕರನ್ನು ಗುರ್ತಿಸಿ, ಗೌರವಿಸಿದರೆ ಆಗ‌ ಸರಿಯಾದ ಅರ್ಥದಲ್ಲಿ ಕಾರ್ಮಿಕ ದಿನಾಚರಣೆ ಮಾಡಿದಂತೆ. ಇಂತಹ ದಿನಗಳಲ್ಲಿ ಶ್ರಮದಿಂದ ಯಶಸ್ಸನ್ನು ಪಡೆದವರ ಕತೆ ಹೇಳಿದರೆ ಅದು ಒಂದು ರೀತಿಯ ಉತ್ಸಾಹವನ್ನು ನಮ್ಮಲ್ಲಿ ಮೂಡಿಸುತ್ತದೆ.

ಇ.ಸೋಮಶೇಖರ್
ಉಪನ್ಯಾಸಕ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here