ಬಾಲಿವುಡ್ ನಟ ವಿವೇಕ್ ಓಬೆರಾಯ್ ಅಂದರೆ ಗೊತ್ತಿಲ್ಲದವರ ಸಂಖ್ಯೆ ಬಹಳ ಕಡಿಮೆ. ಚಿತ್ರರಂಗದಲ್ಲಿ ಮೊದಲಷ್ಟು ಸಕ್ರಿಯವಾಗಿಲ್ಲವಾದರೂ, ಆಗಾಗ ಒಂದೊಂದು ಸಿನಿಮಾ‌ ಮಾಡುತ್ತಿರುತ್ತಾರೆ. ಆದರೆ ವಿವೇಕ್ ಓಬೆರಾಯ್ ಒಂದು ಆಸಕ್ತಿಕರ ವಿಷಯವನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ರುಸ್ತುಂ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿರುವ ವಿವೇಕ್ ಓಬೆರಾಯ್ ಅವರು ಶಿವರಾಜ್ ಕುಮಾರ್ ಅವರ ಈ ಚಿತ್ರದಲ್ಲೊಂದು ಪ್ರಮುಖವಾದ ಅತಿಥಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಿನಿಮಾ ರಂಗದಲ್ಲಿ ಇಷ್ಟು ಹೆಸರು ಮಾಡಿರುವ ವಿವೇಕ್ ಓಬೆರಾಯ್ ಅವರಿಗೆ ಮೊದಲು ಸಿನಿಮಾ ಆಫರ್ ಕೊಟ್ಟವರು ಯಾರು ಎಂಬ ವಿಷಯವನ್ನು ಹೇಳಿದ್ದಾರೆ.

ವಿವೇಕ್ ಓಬೆರಾಯ್ ಅವರಿಗೆ ಚಿತ್ರರಂಗದಲ್ಲಿ ಮೊದಲ ಅವಕಾಶವನ್ನು ನೀಡಿದವರೇ ಶಿವಣ್ಣ ಎಂದು ಸ್ವತಃ ವಿವೇಕ್ ಹೇಳಿದ್ದಾರೆ. ಆಗಿನ್ನೂ ಅವರಿಗೆ ಹದಿನೆಂಟು, ಹತ್ತೊಂಬತ್ತರ ವಯಸ್ಸು, ವಿವೇಕ್ ಅವರ ಚಿಕ್ಕಮ್ಮ ಬೆಂಗಳೂರಿನಲ್ಲಿ ಇದ್ದರಂತೆ. ಅವರಿಗೆ ಡಾ.ರಾಜ್ ಕುಟುಂಬದೊಂದಿಗೆ ಒಳ್ಳೆಯ ಒಡನಾಟವಿದ್ದ ದಿನಗಳವು. ಆಗ ಶಿವಣ್ಣ ವಿವೇಕ್ ಅವರಿಗೆ ನೀನು ತುಂಬಾ ಹ್ಯಾಂಡ್ಸಮ್ ಇದ್ದೀಯಾ,ನನ್ನ ಸಿನಿಮಾದಲ್ಲಿ ತಮ್ಮನ ಪಾತ್ರವೊಂದಿದೆ , ಅದನ್ನು ನೀನೇ ಮಾಡು, ಕನ್ನಡದಲ್ಲಿ ನಿನ್ನನ್ನು ಲಾಂಚ್ ಮಾಡುತ್ತೇನೆ ಎಂದು ಸಿನಿಮಾ ಅವಕಾಶವನ್ನು ನೀಡಿದ್ದರು ಎಂದು ಅಂದಿನ ನೆನಪನ್ನು ಮಾಡಿಕೊಂಡಿದ್ದಾರೆ ವಿವೇಕ್ ಓಬೆರಾಯ್.

ಆದರೆ ವಿವೇಕ್ ಅವರು ಅಮೆರಿಕಾಕ್ಕೆ ಹೋಗಬೇಕಾಗಿದ್ದರಿಂದ ಸಿನಿಮಾ ಆಫರ್ ಒಪ್ಪಲಾಗಲಿಲ್ಲ. ಇಷ್ಟು ವರ್ಷಗಳ ನಂತರ ಕನ್ನಡದಲ್ಲಿ ಒಂದು ಸಿನಿಮಾ ಮಾಡಬೇಕೆನ್ನುವಾಗ ಅವರಿಗೆ ಬಂದ ಅವಕಾಶ ರುಸ್ತುಂ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ನಾಯಕ ಅಂತ ಗೊತ್ತಾಗಿದ್ದೇ ತಡ ವಿವೇಕ್ ಅವರು ಕೂಡಲೇ ಮರುಮಾತಿಲ್ಲದೆ ಸಿನಿಮಾ ಒಪ್ಪಿಕೊಂಡರಂತೆ. ಅಂದು ಶಿವಣ್ಣನವರು ತೋರಿದ ಆಪ್ಯಾಯತೆಯಿಂದಾಗಿ ಇಂದು ವಿವೇಕ್ ರುಸ್ತುಂ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದ್ದಾರೆ. ಈ ಸಿನಿಮಾದಲ್ಲಿ ವಿವೇಕ್ ಅವರು ಅತಿಥಿ ಪಾತ್ರವಾದರೂ, ಅದೊಂದು ವಿಶೇಷ ಪಾತ್ರವಾಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here