ಮತದಾನದ ಬಗ್ಗೆ ಯಾರು ಎಷ್ಟೇ ಜಾಗೃತಿ ಮೂಡಿಸಿದರು ಕೆಲವರಿಗೆ ತಮ್ಮ ಜವಾಬ್ದಾರಿಗಳ ಅರಿವಾಗುವುದಿಲ್ಲ. ಎಷ್ಟೇ ಅಭಿಯಾನಗಳು ನಡೆದರೂ ವಿದ್ಯಾವಂತರಾಗಿಯೂ ಕೂಡಾ ಮತದಾನ ಮಾಡದೆ, ಆ ದಿನ ನೀಡುವ ಸಾರ್ವತ್ರಿಕ ರಜೆಯ ಮಜಾ ಪಡೆಯಲು ಪ್ರವಾಸಗಳಿಗೆ ತೆರಳುತ್ತಾರೆ. ಈ ಬಾರಿ ಹಲವೆಡೆ ಇಂತಹವರಿಗೆ ಬುದ್ದಿ ಕಲಿಸಲು ಹಲವು ವಿನೂತನ ದಾರಿಗಳನ್ನು ಹುಡುಕಲಾಗಿದೆ. ಮತ ಚಲಾಯಿಸದೆ ಬರುವವರಿಗೆ ಕೆಲವು ಪ್ರವಾಸಿ ತಾಣಗಳಲ್ಲಿ ನಿಷೇಧ ಕೂಡಾ ಮಾಡಲಾಗಿತ್ತು. ಆದರೆ ಚಿಕ್ಕಮಗಳೂರಿನಲ್ಲಿ ಇದಕ್ಕೆ ಭಿನ್ನವಾಗಿ ಅಂದರೆ ಮೂಲಕ ಮತ ಚಲಾಯಿಸದೆ ಚಿಕ್ಕಮಗಳೂರಿಗೆ ಬಂದವರನ್ನು ಸನ್ಮಾನ ಮಾಡಿದ್ದಾರೆ.

ಬೆಂಗಳೂರಿನ ಶಿವಾಜಿ ನಗರದ ನಿವಾಸಿಗಳು, ಖಾಸಗಿ ಕಂಪನಿಯೊಂದರ ಉದ್ಯೋಗಿಗಳು ರಜೆ ಬಂತೆಂದು ತಮ್ಮ ಮತ ಚಲಾಯಿಸದೆ ಚಿಕ್ಕಮಗಳೂರಿಗೆ ಪ್ರವಾಸ ಹೋಗಿದ್ದಾರೆ. ಆದರೆ ಅಲ್ಲಿ ಸ್ಕಚ್ಚ್ ಟ್ರಸ್ಟ್ ನ ಚಿಕ್ಕಮಗಳೂರು ಸದಸ್ಯರ ನಗರದ ಮಾಗಡಿ ರಸ್ತೆಯಲ್ಲಿ ಅವರ ಕಾರನ್ನು ನಿಲ್ಲಿಸಿ ವಿಚಾರಿಸಿದಾಗ ಅವರು ಮತದಾನ ಮಾಡಿಲ್ಲವೆಂದು ತಿಳಿದಾಗ, ಅವರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ನ ಪ್ರತಿಗಳ ಮಾಲೆ ಹಾಕಿ, ಶಾಲು ಹೊದಿಸಿ ಸನ್ಮಾನವನ್ನು ಮಾಡುವ ಮೂಲಕ ಸತ್ಕಾರ ಮಾಡಿದ್ದಾರೆ.

ನಂತರ ಅವರಿಗೆ ಒಂದೊಂದು ಗುಲಾಬಿ ಹೂವನ್ನು ಕೂಡಾ ನೀಡಿದ್ದಾರೆ. ಈ ಮೂಲಕ ಅವರಲ್ಲಿ ಮತ ಜಾಗೃತಿಯನ್ನು ಮೂಡಿಸಿದ್ದಾರೆ. ಮೋಜು ಮಸ್ತಿಗಾಗಿ ನೀಡಿರುವ ರಜೆಯ ಅರ್ಥವನ್ನು ತಿಳಿಯದೆ ಪ್ರವಾಸ ಹೋಗಿದ್ದ ಯುವಕರಿಗೆ ಈ ಘಟನೆ ಮುಜುಗರ ಉಂಟು ಮಾಡಿದೆ. ಅಲ್ಲದೆ ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಎಲ್ಲೆಡೆ ಇಂತಹ ಸತ್ಕಾರಗಳು ನಡೆದರೆ ಆಗಲಾದರೂ ಪೌರರು ತಮ್ಮ ಜವಾಬ್ದಾರಿಯನ್ನು ಅರಿತು, ಒಳ್ಳೆಯ ನಾಗರಿಕರಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here