ಒಂದಕ್ಕಿಂತ ಹೆಚ್ಚು ಮತದಾರ ಚೀಟಿಗಳನ್ನು ಹೊಂದುವ ಅವಕಾಶ ತಡೆಯಲು ಜನತಾ ಪ್ರಾತಿನಿಧ್ಯ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಬೇಕೆಂಬ ಚುನಾವಣಾ ಆಯೋಗದ ಸಲಹೆಯನ್ನು ಕೇಂದ್ರ ಕಾನೂನು ಸಚಿವಾಲಯ ಇದೀಗ ಗಂಭೀರವಾಗಿ ಪರಿಗಣಿಸುತ್ತದೆ. ಅನೇಕರು ವಿಭಿನ್ನ ಕ್ಷೇತ್ರಗಳಲ್ಲಿ ಮತದಾನ ಹಕ್ಕು ಹೊಂದಿರುವುದು ಸಂಕೀರ್ಣ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.
ರಾಷ್ಟ್ರೀಯ ಮತದಾರ ಪಟ್ಟಿ ಶುದ್ಧೀಕರಣ ಮತ್ತು ದೃಢೀಕರಣ ಕಾರ್ಯಕ್ಕಾಗಿ ಚುನಾವಣಾ ಆಯೋಗ ಈ ಹಿಂದೆ ಆಧಾರ್ ದಾಖಲೆಯ ದತ್ತಾಂಶವನ್ನು ಬಳಸಿಕೊಳ್ಳಲು ಮುಂದಾಗಿತ್ತು.

ಒಬ್ಬರೇ ವ್ಯಕ್ತಿ ವಿಭಿನ್ನ ಕ್ಷೇತ್ರಗಳಲ್ಲಿ ಹೆಸರು ನೊಂದಾಯಿಸಿಕೊಳ್ಳುವುದನ್ನುಇ ತಡೆಯಹುವುದು ಈ ಪ್ರಕ್ರಿಯೆಯ ಮುಖ್ಯ ಉದ್ದೇಶವಾಗಿತ್ತು.
ಆದರೆ ೨೦೧೫ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಈ ಪ್ರಯತ್ನಕ್ಕೆ ತಡೆ ಹಾಕಿ ಮತದಾರ ಪಟ್ಟಿ ವಿಷಯಕ್ಕೆ ಆಧಾರ್ ಕಾರ್ಡ್ ಬಳಸುವುದನ್ನು ಸ್ಥಗಿತಗೊಳಿಸಿತು. ಹೀಗಾಗಿ ಹಾಲಿ ನೊಂದಾಯಿತರಾಗಿರುವ ಮತದಾರರು ಹಾಗೂ ಹೊಸದಾಗಿ ನೋಂದಾವಣೆ ಮಾಡಿಕೊಳ್ಳಲು ಬಯಸುವ ನಾಗರಿಕರಿಂದ ಆಧಾರ್ ಕಾರ್ಡ್ ಮೂಲಕ ಮಾಹಿತಿ ದೃಢೀಕರಣ ಪಡೆಯಲು ಚುನಾವಣಾ ಆಯೋಗ ಮತ್ತೊಮ್ಮೆ ಮುಂದಾಗಿದೆ.

ಆದರೆ ಸರ್ವೋಚ್ಛ ನ್ಯಾಯಾಲಯದ ತೂಗುಕತ್ತಿ ಚುನಾವಣಾ ಆಯೋಗದ ಮೇಲೆ ತೂಗುತ್ತಿದ್ದು ಕಾನೂನು ತಿದ್ದುಪಡಿಯೊಂದೇ ಇದಕ್ಕೆ ಪರಿಹಾರ ಮಾರ್ಘವಾಗಿದೆ. ಈ ಹಿನ್ನೆಲೆಯಲ್ಲಿ ಆಯೋಗದ ಪ್ರಸ್ತಾಪವನ್ನು ಪರಿಗಣಿಸಿ ಶಾಸನಾತ್ಮಕ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಆದಷ್ಟು ಬೇಗ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here