ವಯಸ್ಕರಿಗೆ ಮಾತ್ರ……. 

ಮಾನವ ದೇಹದಲ್ಲಿ ನೀರಿನ ಮಹತ್ವ ಏನೆಂಬುದು ಬಹುತೇಕ ಎಲ್ಲರಿಗೂ ತಿಳಿದಿದೆ. ನಮ್ಮ ದೇಹದಲ್ಲಿ 75% ನೀರಿನಿಂದ ಕೂಡಿದ್ದು, ದೇಹಕ್ಕೆ ಪ್ರತಿನಿತ್ಯ ಅಗತ್ಯ ಪ್ರಮಾಣದಲ್ಲಿ ನೀರು ಸೇರಬೇಕು. ಇಲ್ಲವಾದಲ್ಲಿ ಅದರಿಂದ ದೇಹದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಇಂತಹ ನೀರು ಮಾನವ ಜೀವನದಲ್ಲಿ ಸೆಕ್ಸ್ ಅಥವಾ ಲೈಂಗಿಕ ಕ್ರಿಯೆಯ ನಂತರ ಕೂಡಾ ಬಹಳ ಉಪಯುಕ್ತ ಎಂಬುದು ಹಲವರಿಗೆ ತಿಳಿದಿಲ್ಲ.
ಲೈಂಗಿಕ ಚಟುವಟಿಕೆಯು ದೇಹದಲ್ಲಿ ಹೃದಯ ಬಡಿತ ಹಾಗೂ ಬೆವರು ಎರಡನ್ನು ಹೆಚ್ಚಿಸುವುದರಿಂದ ನೀರು ಅತ್ಯಗತ್ಯವಾಗಿ ಬೇಕಾಗಿರುತ್ತದೆ. ದೇಹದ ಆಯಾಸವನ್ನು ಹೋಗಲಾಡಿಸಲು ಲೈಂಗಿಕ ಕ್ರಿಯೆಯ ನಂತರ ನೀರು ಕುಡಿಯಲೇ ಬೇಕು.

ಲೈಂಗಿಕವಾಗಿ ಬಹಳ ಚಟುವಟಿಕೆಯಿಂದ ಇರುವ ಮಹಿಳೆಯರು ಹೆಚ್ಚು ನೀರು ಸೇವಿಸುವುದರಿಂದ ಮೂತ್ರ ಕೋಶದ ಸೋಂಕು ತಡೆಯಲು ನೆರವಾಗುತ್ತದೆ. ನೀರು ಸೇವನೆಯಿಂದ ಮೂತ್ರ ತೆಳುವಾಗುವುದಲ್ಲದೆ,ಮೂತ್ರ ವಿಸರ್ಜನೆ ಸರಾಗವಾಗಿ ನಡೆಯುತ್ತದೆ. ಯೋನಿಯ ತೇವಾಂಶವನ್ನು ಕಾಪಾಡಲು ಇದು ನೆರವು ನೀಡುತ್ತದೆ. ಸೆಕ್ಸ್ ಮಾಡುವಲ್ಲಿ ಹಲವು ಭಂಗಿಗಳನ್ನು ಬಳಸುವವರಿಗೆ ನಿರ್ಜಲೀಕರಣವಾದರೆ ಸ್ನಾಯು ಸೆಳೆತವಾಗಿ ಲೈಂಗಿಕ ಚಟುವಟಿಕೆಯನ್ನು ಆನಂದಿಸಲಾಗುವುದಿಲ್ಲ. ಆದ್ದರಿಂದ ಹೆಚ್ಚಿನ ನೀರು ಕುಡಿಯುವುದು ಅತ್ಯಗತ್ಯವಾಗಿದೆ.

ಪುರುಷರಿಗೆ ನೀರು ಕುಡಿಯುವುದರಿಂದ ಶಿಶ್ನಗಳಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುತ್ತದೆ. ಗಡಸು ನಿಮಿರುವಿಕೆಗೆ ನೆರವಾಗುತ್ತದೆ. ಒಮ್ಮೆ ಲೈಂಗಿಕ ಕ್ರಿಯೆ ನಡೆಸಿ, ಮತ್ತೆ ತೊಡಗುವುದಾದರೆ ಮೊದಲ ಬಾರಿಯ ನಂತರ ನೀರು ಕುಡಿಯುವುದು ಉತ್ತಮ. ಅಲ್ಲದೆ ಕೆಲವೊಮ್ಮೆ ಲೈಂಗಿಕ ಕ್ರಿಯೆಯ ಮೊದಲು ನೀರು ಕುಡಿಯುವುದು ಒಳ್ಳೆಯದು. ನೀರು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಅಂದರೆ ದಿನಕ್ಕೆ ಸುಮಾರು ಎಂಟರಿಂದ ಹತ್ತು ಲೋಟ ನೀರು ಕುಡಿಯುವುದು ದೇಹಾರೋಗ್ಯ ಮಾತ್ರವಲ್ಲದೆ, ಲೈಂಗಿಕ ಜೀವನ ಕೂಡಾ ಸುಧಾರಿಸುತ್ತದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here