ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಹೊಸ ಸಾಧಕರೊಂದಿಗೆ ಬರಲು ಸಿದ್ಧವಾಗಿದೆ‌. ಕಳೆದ ವಾರ ನಟ ಶರಣ್ ಅವರ ಜೀವನ ಹಾಗೂ ಸಾಧನೆಯನ್ನು ಎರಡು ದಿನಗಳ ಎಪಿಸೋಡ್ ನಲ್ಲಿ ಸವಿಸ್ತಾರವಾಗಿ ಜನರ ಮುಂದೆ ಇಡಲಾಗಿತ್ತು‌. ಇದಾದ ನಂತರ ಮುಂದಿನ ಯಾವ ಸಾಧಕರು ಬರಲಿದ್ದಾರೆ ಎಂಬ ಕುತೂಹಲ ಹಾಗೂ ಆಸಕ್ತಿ ಕೆರಳಿಸಿತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಕಾರಣ ಈಗಾಗಲೇ ಜೀ ವಾಹಿನಿ ಪ್ರೋಮೋ ಗಳಲ್ಲಿ ಈ ವಾರದ ಸಾಧಕರ ಕುರ್ಚಿಯಲ್ಲಿ ಕೂರುವವರ ಬಗ್ಗೆ ತಿಳಿಸಿಯಾಗಿದೆ. ಈ ವಾರ ಸಾಧಕರ ಕುರ್ಚಿಯ ಮೇಲೆ ಕೂರಲು ಬರುತ್ತಿರುವವರು ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ.

ಆ ಹಾಸ್ಯ ನಟ ಮತ್ತಾರೂ ಅಲ್ಲ, ಈಗಾಗಲೇ ತನ್ನ ನಟನೆಯಿಂದ, ಹಾಸ್ಯ ದಿಂದ ಅಪಾರ ಅಭಿಮಾನಿಗಳ ಅಭಿಮಾನವನ್ನು ತನ್ನದಾಗಿಸಿಕೊಂಡಿರುವ ಚಿಕ್ಕಣ್ಣ. ಈ ವಾರದ ವೀಕೆಂಡ್ ನಲ್ಲಿ ಚಿಕ್ಕಣ್ಣ ಸಾಧಕರ ಕುರ್ಚಿಯನ್ನು ಅಲಂಕರಿಸಲಿದ್ದಾರೆ. ಕಿರಾತಕ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದ ಚಿಕ್ಕಣ್ಣ ಇಂದು, ಬಹು ಬೇಡಿಕೆಯ ಹಾಗೂ ಜನಪ್ರಿಯ ಹಾಸ್ಯ ನಟನಾಗಿ ತನ್ನ ಛಾಪನ್ನು ಚಿತ್ರರಂಗದಲ್ಲಿ ಮೂಡಿಸಿದ್ದಾರೆ. ಚಿಕ್ಕಣ್ಣ ನವರು ನಡೆದು ಬಂದ ಹಾದಿಯ ಪರಿಚಯವನ್ನು ಮಾಡಿಕೊಡಲಿದೆ ಈ ವಾರದ ವೀಕೆಂಡ್ ವಿತ್ ರಮೇಶ್.

ಚಿಕ್ಕಣ್ಣ ಕಾಮೆಡಿ ಕಿಲಾಡಿಗಳು ಸೇರಿದಂತೆ ಕೆಲವು ಟೀ ಶೋ ಗಳಲ್ಲಿ ಕೂಡಾ ತಮ್ಮ ಸಾಮರ್ಥ್ಯ ತೋರಿದ್ದಾರೆ. ಹೀಗೆ ಶೋ ಒಂದರ ಮೂಲಕ ಚಿಕ್ಕಣ್ಣನವರ ಪ್ರತಿಭೆಯನ್ನು ಗುರುತಿಸಿ, ರಾಕಿಂಗ್ ಸ್ಟಾರ್ ಯಶ್ ಅವರು ಚಿಕ್ಕಣ್ಣ ಅವರಿಗೆ ಕಿರಾತಕ ಸಿನಿಮಾದಲ್ಲಿ ಮೊದಲ ಬಾರಿಗೆ ಅವಕಾಶವನ್ನು ನೀಡಿದರು. ಅಲ್ಲಿಂದ ಆರಂಬವಾಯಿತು ಚಿಕ್ಕಣ್ಣ ಅವರ ಸಿನಿಮಾ‌ ಜರ್ನಿ. ಅಂದಿನಿಂದ ಇಂದಿನವರೆಗೂ ಯಶಸ್ವಿಯಾಗಿ ನಡೆದು ಹೋಗುತ್ತಿದೆ ಚಿಕ್ಕಣ್ಣ ಅವರ ಕೆರಿಯರ್.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here