
ವೀಕೆಂಡ್ ವಿತ್ ರಮೇಶ್ ನಾಲ್ಕನೇ ಸೀಸನ್ ಕಡೆಯ ಹಂತಕ್ಕೆ ಬಂದಿದೆ. ಇನ್ನು ಈ ಬಾರಿಯ ಸೀಸನ್ ಹಿಂದಿನ ಎಲ್ಲಾ ಸೀಸನ್ ಗಳಿಗಿಂತ ಭಿನ್ನವಾಗಿ ಕೊನೆಯಾಗಲಿದೆ ಎಂಬುದು ಕೂಡಾ ಬಹಳ ವಿಶಿಷ್ಠ ಎನಿಸಿದೆ. ಆರಂಭದಲ್ಲೇ ವೀರೇಂದ್ರ ಹೆಗ್ಗಡೆಯವರು ಬಂದದ್ದು, ಅನಂತರ ಇನ್ಫೋಸಿಸ್ ನ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರು, ಅಂತಹ ಬಹಳ ಹೆಮ್ಮೆಯ ವ್ಯಕ್ತಿಗಳನ್ನು ಈ ಬಾರಿಯ ಸಾಧಕರ ಕುರ್ಚಿಯ ಮೇಲೆ ಕುಳಿತು ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ವೀಕೆಂಡ್ ವಿತ್ ರಮೇಶ್ ಶೋ. ಇನ್ನು ಕಡೆಯ ಹಂತವನ್ನು ವಿಶಿಷ್ಟವಾಗಿ ಈ ಬಾರಿ ರೂಪಿಸಲಾಗಿದೆ.
ಈ ಬಾರಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಫೈನಲ್ ನಲ್ಲಿ ಸಾಧಕರ ಮೇಲೆ ಕೂರುವ ಸಾಧಕರು ಒಬ್ಬರಲ್ಲ. ಬದಲಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಸಾಧಕರು ಬಂದು ಸಾಧಕರ ಕುರ್ಚಿಯ ಮೇಲೆ ಕುಳಿತು ತಮ್ಮ ಅನುಭವ ಹಾಗೂ ಸಾಧನೆಯ ಕಡೆ ಅವರು ನಡೆದ ಬಂದ ಹಾದಿಯನ್ನು ಹಂಚಿಕೊಳ್ಳುವುದು ವಿಶೇಷವಾಗಿದೆ. ಫಿನಾಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವ ಜನತೆಯ, ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ ಸಾಧಕರು. ಫಿನಾಲೆ ಎಪಿಸೋಡ್ ಪ್ರಶ್ನೋತ್ತರ ಗಳಿಂದ ಕೂಡಿರಲಿದೆ.
ಹಾಗಿದ್ದರೆ ಯಾರೆಲ್ಲಾ ಶೋ ಗೆ ಬರಲಿದ್ದಾರೆ ಎನ್ನುವುದು ಸಂಪೂರ್ಣವಾಗಿ ತಿಳಿದಿಲ್ಲವಾದರೂ ವಿಶ್ವ ಖ್ಯಾತಿಯನ್ನು ಪಡೆದಿರುವ ಬಹುಬೇಗ ಚಿತ್ರಗಳನ್ನು ಬರೆಯುವುದರಲ್ಲಿ ನಿಪುಣ ಹಾಗೂ ನಿಷ್ಣಾತ ಎನಿಸಿರುವ ವಿಲಾಸ್ ನಾಯಕ್ ಹಾಗೂ ಕರ್ನಾಟಕದ ಸಿಂಗಂ ಎಂದೇ ಖ್ಯಾತಿಯಾಗಿದ್ದು, ಇತ್ತೀಚಿಗೆಷ್ಟೇ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಅವರು ಬರುವುದು ಮಾತ್ರ ಚಾನೆಲ್ ನ ಪ್ರೋಮೋಗಳ ಮೂಲಕ ಖಚಿತವಾಗಿದೆ.
ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.