ವೀಕೆಂಡ್ ವಿತ್ ರಮೇಶ್. ಇದೊಂದು ಭಾವನೆಗಳ ಸಮಾಗಮಗ ಅಪರೂಪದ ಟಿವಿ ಶೋ. ನಟ ರಮೇಶ್ ಅರವಿಂದ್ ಅವರ ನಿರೂಪಣೆಯೊಂದಿಗೆ ಈಗಾಗಲೇ ಮೂರು ಸೀಸನ್ ಮುಗಿಸಿ, ನಾಲ್ಕನೇ ಸೀಸನ್ ಆರಂಭವಾಗಿ. ಈ ಶೋ ನಲ್ಲಿ ಬರುವ ಸೆಲೆಬ್ರಿಟಿ ಅತಿಥಿಗಳ ಜೀವನದ ಒಂದು ಯಶೋಗಾಥೆಯನ್ನು ಬಹಳ ಭಾವನಾತ್ಮಕವಾಗಿ ಮನಸ್ಸಿಗೆ ಮುಟ್ಟುವಂತೆ ತೋರುವುದು ಈ ಶೋ ನ ವಿಶೇಷತೆ. ಈಗ ನಾಲ್ಕನೇ ಸೀಸನ್ ನಲ್ಲಿ ಈಗ ಅತಿಥಿಯಾಗಿ ಬರಲಿದ್ದಾರೆ ರಾಘವೇಂದ್ರ ರಾಜ್‍ಕುಮಾರ್ ಅವರು. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಶನಿವಾರ ಹಾಗೂ ಭಾನುವಾರ ರಾಘಣ್ಣನ ಜೀವನವನ್ನು ನಮ್ಮ ಮುಂದೆ ಅನಾವರಣಗೊಳಿಸಲಿದೆ‌ ವೀಕೆಂಡ್ ವಿತ್ ರಮೇಶ್.

ರಾಘವೇಂದ್ರ ರಾಜ್‍ಕುಮಾರ್ ಅವರ ಜೀವನ ಒಂದು ಸಾಧನೆಗಿಂತ ಕಡಿಮೆಯೇನಿಲ್ಲ. ಆರೋಗ್ಯದಲ್ಲಿ ಉಂಟಾದ ಸಮಸ್ಯೆಯಿಂದ, ಬಳಲಿ, ಬೆಂಡಾಗಿ ಬಹಳ ಸೀರಿಯಸ್ ಹಂತದವರೆಗೂ ತಲುಪಿದ್ದ ಅವರು, ವಿಧಿಯನ್ನು ಎದುರಿಸಿ ಬಂದಿದ್ದಾರೆ. ಅಂತಹ ರಾಘಣ್ಣ ಈ ಬಾರಿಯ ಅತಿಥಿ. ಇನ್ನು ಈ ಶೋ ನಲ್ಲಿ ಬರುವ ಅತಿಥಿಗಳ ಆಪ್ತರು ಅವರೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದು ಉಂಟು. ಹಾಗೆ ಅನುಭವ ಹಂಚಿಕೊಂಡವರಲ್ಲಿ ಶಿವಣ್ಣ ಕೂಡಾ ಒಬ್ಬರು. ಆದರೆ ಶಿವಣ್ಣ ಮಾತನಾಡುವಾಗ ಸನ್ನಿವೇಶ ತೀರಾ ಭಾವನಾತ್ಮಕವಾದದ್ದು ನಿಜ.

ಶಿವಣ್ಣ ಮಾತನಾಡುತ್ತಾ ಅವನು ತುಂಬಾ ಒಳ್ಳೆಯವನು, ಯಾವಾಗಲೂ ಚೆನ್ನಾಗಿರಬೇಕು. ದೇವರು ನನ್ನ ಆಯಸ್ಸು ಕೂಡಾ ಅವನಿಗೆ ಕೊಡಲಿ ಎಂದಾಗ, ರಾಘಣ್ಣ ಹಾಗೂ ಅವರ ಹೆಂಡತಿಯ ಕಣ್ಣಲ್ಲಿ ನೀರು ತುಂಬಿಕೊಂಡರು. ಅಲ್ಲದೆ ‌ರಾಘಣ್ಣ ತಮ್ಮ ಅನುಭವವನ್ನು ಹೇಳುತ್ತಾ, ನನಗೆ ಹುಷಾರಿಲ್ಲದ ಕಾರಣ ಅಣ್ಣ ನನ್ನನ್ನು ಮಗುವಿನಂತೆ ನೋಡಿಕೊಂಡು, ಆರೈಕೆ ಮಾಡಿದ ಎಂದು ಹೇಳಿ, ಅಣ್ಣನ ಋಣವನ್ನು ಎಂದೂ ತೀರಿಸಲಾಗದು ಎಂದಾಗ ಇಡೀ ಶೋ ಆ ಸಮಯದಲ್ಲಿ ಭಾವನಾತ್ಮಕವಾದುದು ಸುಳ್ಳಲ್ಲ. ಇಂತಹ ಇನ್ನಷ್ಟು ವಿಚಾರಗಳೊಂದಿಗೆ ಬರಲಿದೆ, ಈ ಬಾರಿಯ ವೀಕೆಂಡ್ ವಿತ್ ರಮೇಶ್.

ತಮ್ಮ ಜೀವನದ ಸುಂದರವಾದ ಕ್ಷಣಗಳನ್ನು ಮೆಲುಕು ಹಾಕಲು ಈ ವಾರ ಸಾಧಕರ ಸೀಟ್‌'ನಲ್ಲಿ ಕೂರ್ತಿದ್ದಾರೆ ರಾಘವೇಂದ್ರ ರಾಜ್‌ಕುಮಾರ್'ರವರು.ರಾಘಣ್ಣನ …

Zee Kannada यांनी वर पोस्ट केले मंगळवार, २३ एप्रिल, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here