ಕೊರೊನಾ ಅಟ್ಟಹಾಸವು ದಿನೇ ದಿನೇ ಭಯ ಹುಟ್ಟಿಸುವಂತೆ ಇದೆ‌. ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಕೊರೊನಾ ಅಟ್ಟಹಾಸಕ್ಕೆ ಇದೀಗ ಜಿಲ್ಲಾಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಪಶ್ಚಿಮ ಬಂಗಾಳದ ಹೂಗ್ಲಿಯ ಜಿಲ್ಲಾಧಿಕಾರಿಯಾಗಿದ್ದ ದೇಬದತ್ತ ರಾಯ್‌ ಎಂಬ ಮಹಿಳಾ ಜಿಲ್ಲಾಧಿಕಾರಿಯವರು ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ. ಇವರ ನಿಧನದಿಂದಾಗಿ ಇದೀಗ ಸೋಂಕಿಗೆ ಬಲಿಯಾದ ಮೊದಲ ಜಿಲ್ಲಾಧಿಕಾರಿ ಇವರಾಗಿದ್ದಾರೆ. ನಿಜಕ್ಕೂ ಇದೊಂದು ವಿಷಾದವನ್ನುಂಟು ಮಾಡುವ ಘಟನೆಯಾಗಿದೆ.‌ ದೇಬದತ್ತ ಅವರಿಗೆ ಸೋಂಕಿನ ಲಕ್ಷಣ ಕಂಡು ಬಂದ ನಂತರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ದುರಾದೃಷ್ಟವಶಾತ್ ಅವರಿಗೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಇಂದು ಆಕೆ ಮೃತಪಟ್ಟಿದ್ದಾರೆ. ದೇಬದತ್ತ ರಾಯ್ ಅವರಿಗೆ 34 ವರ್ಷ ವಯಸ್ಸಾಗಿತ್ತು. ಜಿಲ್ಲೆಯಲ್ಲಿ ಅವರು ಕೊರೊನಾ ವೈರಸ್‌ನ ಈ ಬಿಕ್ಕಟ್ಟಿನ ಸಮಯದಲ್ಲಿ ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದರು. ಅವರ ಈ ಒತ್ತಡದ ಕೆಲಸದ ನಡುವೆ ಆಕೆಗೆ ಕೂಡಾ ಕೊರೊನಾ ಸೋಂಕು ತಗುಲಿದ ಕಾರಣ ಅವರು ಅದೇ ವೈರಸ್‌ಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ. ದೇಬದತ್ತ ಅವರ ಪತಿಗೆ ಕೂಡಾ ಕೊರೊನಾ ಪಾಸಿಟಿವ್ ವರದಿ ಬಂದಿದೆ.‌ ಮೊದಲು ಅವರಲ್ಲಿ ಲಕ್ಷಣ ಕಂಡು ಬಂದಾಗ ಗಂಡ ಹೆಂಡತಿ ಇಬ್ಬರೂ ಹೋಂ ಕ್ವಾರಂಟೈನ್ ನಲ್ಲಿ ಇದ್ದರು.

ಆದರೆ ದಿನಗಳು ಕಳೆದ ಹಾಗೆ ಪರಿಸ್ಥಿತಿ ಹದಗೆಟ್ಟ ಕಾರಣ ದೇಬದತ್ತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದೇಬದತ್ತ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಂತಾಪವನ್ನು ಸೂಚಿಸಿದ್ದಾರೆ. ಕೊರೊನಾ ವಾರಿಯರ್ ಆಗಿ ದೇಬದತ್ತ ನಿರ್ವಹಿಸಿದ ಕಾರ್ಯವನ್ನು ಶ್ಲಾಘಿಸಿರುವ ಮಮತಾ ಬ್ಯಾನರ್ಜಿಯವರು ದೇಬದತ್ತ ಅವರ ನಿಧನದಿಂದ ದುಃಖವಾಗಿದೆ ಎಂದಿದ್ದಾರೆ. ವಲಸೆ ಕಾರ್ಮಿಕರ ಆಹಾರ ಹಾಗೂ ವಸತಿ ಖುದ್ದಾಗಿ ನಿರ್ವಹಿಸುತ್ತಿದ್ದ ದೇಬದತ್ತ ಅವರಿಗೆ ಆಗ ಸೋಂಕು ತಗುಲಿದ ಬಹುದು ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here