City Big News Desk.
ಸಂದರ್ಶನದ ಹಳೆಯ ಪೇಪರ್ ಕಟಿಂಗ್ ನಲ್ಲಿ ಅವರು ರಿಷಿ ಕಪೂರ್ ಅವರ ಮೇಲಿದ್ದ ಆರೋಪಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ನೀತು ಕಪೂರ್ ಅವರು ತಮ್ಮ ಪತಿ ರಿಷಿ ಕಪೂರ್ ಫ್ಲರ್ಟಿಂಗ್ ಮಾಡುವಾಗ ಅದನ್ನು ನೇರವಾಗಿ ನೂರಾರು ಬಾರಿ ತಾವೇ ಪತ್ತೆ ಮಾಡಿರುವುದಾಗಿ ಹೇಳಿದ್ದಾರೆ.
ಹೊರಾಂಗಣ ಚಿತ್ರೀಕರಣ ವೇಳೆ ಅವರ ಅವ್ಯವಹಾರಗಳ ಬಗ್ಗೆ ಮೊದಲು ತಿಳಿದುಕೊಳ್ಳುತ್ತಿದ್ದ ವ್ಯಕ್ತಿ ನಾನಾಗಿದ್ದೆ ಎಂದು ಬಹಿರಂಗಪಡಿಸಿದ್ದಾರೆ. “ಫ್ಲರ್ಟಿಂಗ್ ಮಾಡಿ ಅವರು ನನ್ನ ಕೈಯಲ್ಲಿ ನೂರಾರು ಬಾರಿ ಸಿಕ್ಕಿಬಿದ್ದಿದ್ದಾರೆ. ಹೊರಾಂಗಣ ಸ್ಥಳಗಳಲ್ಲಿ ನಡೆಯುತ್ತಿದ್ದ ಅವರ ವ್ಯವಹಾರಗಳ ಬಗ್ಗೆ ನಾನು ಯಾವಾಗಲೂ ಮೊದಲು ತಿಳಿದುಕೊಳ್ಳುತ್ತಿದ್ದೆ. ಆದರೆ ಅದು ಕೇವಲ ಒಂದು ರಾತ್ರಿಗೆ ಮೀಸಲು ಎಂಬುದು ನನಗೆ ಗೊತ್ತಿದೆ. ಎರಡು ವರ್ಷಗಳ ಹಿಂದೆ ನಾನು ಈ ವಿಚಾರವಾಗಿ ಅವರೊಂದಿಗೆ ಜಗಳವಾಡುತ್ತಿದ್ದೆ. ಆದರೆ ಈಗ ನಾನು ಈ ಮನೋಭಾವವನ್ನು ಬದಲಾಯಿಸಿಕೊಂಡಿದ್ದೀನಿ. ಮುಂದುವರಿಯಲಿ, ಅವರು ಈ ರೀತಿ ಎಷ್ಟು ದಿನ ಮಾಡುತ್ತಾರೋ ನೋಡೋಣ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
ಇಷ್ಟೇ ಅಲ್ಲದೇ “ನಾವು ಪ್ರತಿಯೊಂದರ ಬಗ್ಗೆಯೂ ತುಂಬಾ ವಿಶ್ವಾಸ ಹೊಂದಿದ್ದೇವೆ. ಅವರ ಕುಟುಂಬವೇ ಸಂಬಂಧ ಬೆಳೆಸಲು ಮೊದಲು ಬಂದಿತು. ಆದ್ದರಿಂದ ನಾನು ಅವರ ಇಂತಹ ವಿಚಾರಗಳ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು? ಅವರು ನನ್ನ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ, ಅವರು ಎಂದಿಗೂ ನನ್ನನ್ನು ಬಿಡುವುದಿಲ್ಲ ಎಂದು ತಿಳಿದಿತ್ತು. ಪುರುಷರಿಗೆ ನಿರ್ದಿಷ್ಟ ಪ್ರಮಾಣದ ಸ್ವಾತಂತ್ರ್ಯವನ್ನು ನೀಡಬೇಕು ಎಂದು ನಾನು ಭಾವಿಸುತ್ತೇನೆ. ಅವರು ಸ್ವಭಾವತಃ ಚೆಲ್ಲಾಟವಾಡುವವರು, ಅವರನ್ನು ಕಟ್ಟಿಹಾಕಲು ಸಾಧ್ಯವಿಲ್ಲ.” ಎಂದಿದ್ದಾರೆ.
ನೀತು ಕಪೂರ್ ಜನವರಿ 22, 1980 ರಂದು ರಿಷಿ ಕಪೂರ್ ಅವರನ್ನು ವಿವಾಹವಾದರು. ನಂತರ ಅವರು ಶ್ಯಾಮ್ ರಾಲ್ಹಾನ್ ನಿರ್ದೇಶನದ ಗಂಗಾ ಮೇರಿ ಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಅವರಿಗೆ ಸೆಪ್ಟೆಂಬರ್ 1980 ರಲ್ಲಿ ರಿದ್ಧಿಮಾ ಕಪೂರ್ ಮತ್ತು 1982 ರಲ್ಲಿ ರಣಬೀರ್ ಕಪೂರ್ ಜನಿಸಿದರು. ಹಲವು ವರ್ಷಗಳ ಬಳಿಕ ನೀತು ಕಪೂರ್ 2009 ರಲ್ಲಿ ಚಿತ್ರರಂಗಕ್ಕೆ ಮರಳಿದರು. 2020 ರಲ್ಲಿ ರಿಷಿ ಕಪೂರ್ ಮರಣ ಹೊಂದಿದರು.
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.