ಎಂದೊ ನನಗೆ ನನ್ನ ಅಜ್ಜಿ ಹೇಳಿದ ಸತ್ಯ ಕಥೆ
ಅನಾದಿ ಕಾಲದಿಂದಲೂ ಅತ್ತೆ ಸೊಸೆಯರ‌ ನಡುವೆ ವೈಷಮ್ಯ ಇದ್ದೇ ಇದೆ. ಮುಂದೆ ನಾನು ಅತ್ತೆಯ ಸ್ಥಾನ ಅಲಂಕರಿಸುತ್ತೇನೆ ಎನ್ನುವ ಭಾವನೆ ಅವರಲ್ಲಿ ಇರುವುದಿಲ್ಲ. ನಾನು ಸೊಸೆಯಾಗಿ ಇಂದು ಅತ್ತೆಯಾಗಿದ್ದೇನೆ ಎನ್ನುವುದನ್ನು ಇವರೂ ಮರೆತು ಬಿಡುತ್ತಾರೆ. ಇವರಿಬ್ಬರ ನಡುವೆ ಹಿಂಸೆ ನೋವು ಅವಮಾನ ಅಪನಿಂದನೆ ಮಾತ್ರ ಮಗ ಉರೂಫ್ ಗಂಡ ಅನ್ನೊನಿಗೆ.

ಹೆಂಡತಿಯ ವ್ಯಾಮೋಹಕ್ಕೆ ಸಿಲುಕಿ ಅಚಾತುರ್ಯ ನಡೆದ ಮೇಲೆ ಪ್ರಶ್ಚಾತ್ತಾಪ ಪಟ್ಟರೆ ಕಳೆದ ಸಮಯ ಕಳೆದ ವಸ್ತು ದೊರಕದು.

ಹೀಗೆ ಒಂದೂರಲ್ಲಿ ಒಬ್ಬ ತಾಯಿಗೆ ಒಬ್ಬನೇ ಮಗನು ಇದ್ದನು ಅವನನ್ನು ಬಹಳ ಅಕ್ಕರೆ ಆರೈಕೆ ಮುದ್ದಿನಿಂದ ಆ ತಾಯಿ ಬೆಳೆಸಿರುತ್ತಾಳೆ. ಕಾಲಕ್ರಮೇಣ ಹುಡುಗ ವಯಸ್ಕನಾದಾಗ ಅವನಿಗೆ ಒಂದು ಸುಂದರ ಯುವತಿಯನ್ನು ತಂದು ಮದುವೆ ಮಾಡುತ್ತಾಳೆ. ಎಲ್ಲಾ ಸಹಜ ಅನ್ನುವ ಹಾಗೆ ಅತ್ತೆ ಸೊಸೆಯರ ನಡುವೆ ಹೊಂದಾಣಿಕೆ ಇಲ್ಲದೆ ಇಬ್ಬರೂ ಬೇರ್ಪಡುತ್ತಾರೆ.
ಹೆಣ್ಣಿನ ಸಹಜ ಗುಣ ಅಸೂಹೆ ಸೊಸೆಯನ್ನು ಬಿಡುವುದಿಲ್ಲ. ಆಕೆ ಏನಾದರೂ ಮಾಡಿ ಅತ್ತೆಯನ್ನು ಮುಗಿಸ ಬೇಕೆಂದು ತೀರ್ಮಾನಿಸಿಬಿಡುತ್ತಾಳೆ.
ಅದರಂತೆ ಒಂದು ದಿನ ತನಗೆ ಕರುಳು ಬೇನೆ ಎಂದು ಅದಕ್ಕೆ ನಿಮ್ಮ ತಾಯಿಯ ಕರಳು ತರಬೇಕೆಂದು ಹೇಳುವ ಪತ್ನಿ ಕರುಳನ್ನು ತಂದರೆ ಅದರಿಂದ ತನ್ನ ನೋವು ಹೋಗುವುದು ಎಂದು ಹೇಳುತ್ತಾಳೆ.
ಹೆಂಡತಿಯ ಮೋಹ ಪಾಶ ದಲ್ಲಿದ್ದ ಗಂಡ ತಪ್ಪು ಸರಿಗಳ ಆಲೋಚನೆ ಮಾಡದೆ ಹೋಗಿ ತನ್ನ ತಾಯಿಯನ್ನು ಕೊಂದು ಕರುಳನ್ನು ಕೈಯ್ಯಲ್ಲಿ ಹಿಡಿದು ಓಡಿ ಹೋಗುತ್ತಾನೆ ಹೀಗೆ ದಾರಿಯಲ್ಲಿ ಕಲ್ಲು ಎಡವಿ ಬೀಳುತ್ತಾನೆ. ತಕ್ಷಣವೇ ಕೈಯಲ್ಲಿ ಇದ್ದ ಕರುಳು ಪೆಟ್ಟಾಯಿತಾ ಕಂದಾ ಅನ್ನುತ್ತೆ.

ಈ ಮಾತನ್ನು ಕೇಳಿದ ಮಗನು ಅಯ್ಯೊ ನಾ ಎಂಥಾ ನೀಚ ಕೆಲಸ ಮಾಡಿದೆ. ಪತ್ನಿಯ ಮೇಲಿನ ಮೋಹ ದಿಂದ ತಾಯಿಯನ್ನು ಕೊಂದೆನಲ್ಲಾ. ನನ್ನಂಥ ಪಾಪಿ ಯಾರೂ ಇಲ್ಲ. ತನ್ನನ್ನು ಕೊಂದರೂ ತಾಯಿ ಕರಳು ಮಗನ ಹಿತವನ್ಬೇ ಬಯಸುತ್ತೆ ಅದು ಅರಿಯುವ ವೇಳೆಗೆ ಅನಾಹುತವಾಗಿ ಹೋಯಿತು.
ಅದಕ್ಕೆ ಹೇಳೋದು ಆತುರಗಾರನಿಗೆ ಬುದ್ದಿ ಮಟ್ಟ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here