ಇಂತಹುದೊಂದು ದಿನ ಬರಬಹುದೆಂದು ಯಾರೊಬ್ಬರೂ ಕೂಡಾ ಊಹೆ ಮಾಡಿರಲಿಲ್ಲ. ಯಾಕಂದ್ರೆ ಇತಿಹಾಸದಲ್ಲಿ ಕಂಡು, ಕೇಳದ ಒಂದು ಪ್ರಕಟಣೆ ಮಾಡಿದ್ದಾರೆ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ವೀರೇಂದ್ರ ಹೆಗ್ಡೆಯವರು. ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಧರ್ಮಸ್ಥಳಕ್ಕೆ ಬಂದು ನೇತ್ರಾವತಿಯಲ್ಲಿ ಮಿಂದು, ಶ್ರೀ ಮಂಜುನಾಥನ ದರ್ಶನ ಪಡೆದು, ದೇವಾಲಯದ ಭೋಜನ ಶಾಲೆಯಲ್ಲಿ ಅನ್ನ ಪ್ರಸಾದ ಸ್ವೀಕರಿಸೋ ಈ ಪುಣ್ಯ ಧಾಮಕ್ಕೆ ಕೆಲವು ದಿನ ಭಕ್ತಾದಿಗಳು, ಪ್ರವಾಸಿಗರು ಬರಬೇಡಿ ಎಂದು ಧರ್ಮಾಧಿಕಾರಿಯವರು ಮನವಿ ಮಾಡಿದ್ದಾರೆ. ನಿಜಕ್ಕೂ ಇದು ಬೇಸಿಗೆಯ ತೀವ್ರತೆಯನ್ನು ತೋರಿಸೋ ತರ ಇದೆ.

ಬೇಸಿಗೆ ಬಂದಾಗ ಪ್ರತಿವರ್ಷ ಬರ ಆಗೋದು ಸಾಮಾನ್ಯ ಎನಿಸಿರೋ ಇತ್ತೀಚಿನ ವರ್ಷಗಳಲ್ಲಿ, ಈ ಬಾರಿ ಬೇಸಿಗೆಯಂತೂ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೂಡಾ ನೀರಿನ ಸಮಸ್ಯೆಗೆ ಕಾರಣವಾಗಿದೆ. ಬೇಸಿಗೆಯ ಹೊಡೆತಕ್ಕೆ ನೇತ್ರಾವತಿಯ ಒಡಲು ಬತ್ತಿ ಬರಿದಾಗ್ತಾ ಇದೆ. ಅದಕ್ಕೆ ಹೆಗ್ಡೆಯವರು ಪ್ರವಾಸಿಗರಿಗೆ ತಮ್ಮ ಯಾತ್ರೆ ಮುಂದೂಡುವಂತೆ ಮನವಿ ಮಾಡಿದ್ದಾರೆ. ಏಕೆಂದರೆ ಬರೋ ಜನರಿಗೆ ಸ್ನಾನ, ಶೌಚಾದಿಗಳಿಗೆ ನೀರು ಒದಗಿಸಲೇ ಬೇಕು. ಆದರೆ ಅದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ ಅನ್ನೋದು ನಿಜ. ಇಂತಹ ಭೀಕರ ನೀರಿನ ಬರ ಇರುವಾಗ್ಲೇ ಮತ್ತೊಂದು ವಿಷಯ ಕೂಡಾ ಹೊರ ಬಿದ್ದಿದೆ.

ಮಂಜುನಾಥನ ಅಭಿಷೇಕಕ್ಕೆ ಬೇಕಾಗಿರುವ ನೇತ್ರಾವತಿಯ ಪವಿತ್ರ ಜಲವು ಇನ್ನಿ ಹದಿನೈದು ದಿನಗಳಿಗೆ ಸಾಕಾಗಬಹುದು. ಇನ್ನು ಹದಿನೈದು ದಿನಗಳಲ್ಲಿ ಮಳೆ ಬಂದು, ಭೂಮಿ ತಣಿದರೆ ಮಾತ್ರವೇ ಮಂಜುನಾಥನ ಅಭಿಷೇಕಕ್ಕೆ ನೇತ್ರಾವತಿಯ ‌ನೀರು ಸಿಗುತ್ತದೆ. ಇಲ್ಲವಾದರೆ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥನ ಅಭಿಷೇಕಕ್ಕೆ ನೀರು ಸಿಗುವುದಿಲ್ಲ ಎಂದು ಹೆಗ್ಗಡೆಯವರು ತಿಳಿಸಿದ್ದಾರೆ. ಅರಣ್ಯ ನಾಶದ ಪರಿಣಾಮವನ್ನು ಎಷ್ಟು ವಿವರಿಸಿದರೂ ಜಾಗೃತವಾಗದ ಜನರಲ್ಲಿ ಇನ್ನಾದರೂ ತಪ್ಪು ತಿಳಿದುಕೊಂಡು ಜಲ ಸಂರಕ್ಷಣೆಗೆ ಮುಂದಾದರೆ ಮುಂದೆ ಇಂತಹ ಸಮಸ್ಯೆಗಳ ನಿವಾರಣೆ ಸಾಧ್ಯ. ಇಲ್ಲವಾದಲ್ಲಿ ಹನಿ ಹನಿ ನೀರಿಗೂ ಪರದಾಡಬೇಕಾಗುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here