ಸಾಮಾನ್ಯವಾಗಿಯೇ ದೇಶದ ಪ್ರಧಾನಿ, ರಾಷ್ಟ್ರ ಪತಿ, ಮುಖ್ಯಮಂತ್ರಿ ಇಂತಹ ಪದವಿಗಳಲ್ಲಿ ಇರುವವರು ಹಿರಿಯರು, ವಯಸ್ಸಾದವರು ನಮ್ಮ ಮನಸ್ಸಿಗೆ ಬರುತ್ತಾರೆ. ಏಕೆಂದರೆ ನಮ್ಮ ದೇಶದಲ್ಲಿ ಬಹುತೇಕ ಇಂತಹವರೇ ಅಧಿಕಾರದ ಚುಕ್ಕಾಣಿ ಹಿಡಿದವರು. ಯವಕರಾರು ಪ್ರಧಾನಿ ಅಥವಾ ಮುಖ್ಯ ಮಂತ್ರಿಯಂತಹ ಸ್ಥಾನ ಅಲಂಕರಿಸುವುದು ಅಪರೂಪ, ತೀರಾ ವಿರಳ ಎನ್ನುವಂತಿದೆ. ಆದರೆ ಈಗ ಮಹಿಳೆಯೊಬ್ಬರು ತಮ್ಮ 34 ನೇ ವಯಸ್ಸಿಗೆ ದೇಶದ ಪ್ರಧಾನಿಯಾಗುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದು, ಜಗತ್ತಿನ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅವರೀಗ ಪಾತ್ರವಾಗಿದ್ದಾರೆ.

 

ಫಿನ್ ಲ್ಯಾಂಡ್ ನ ರಾಜಕಾರಣಿ, ಅಲ್ಲಿನ ಸಾರಿಗೆ ಸಚಿವೆಯಾಗಿದ್ದ ಸನ್ನಾ ಮರಿನ್ ಇದೀಗ್ ಆ ದೇಶದ ಪ್ರಧಾನಿಯಾಗಿ ಅಧಿಕಾರವನ್ನು ಪಡೆದುಕೊಂಡಿದ್ದಾರೆ.
ಈ ಮುನ್ನ ಆಂಟಿ ರಿನ್ನೆಯವರು ಅಲ್ಲಿನ ಪ್ರಧಾನಿಯಾಗಿದ್ದರು. ಅವರು ಅಂಚೆ ನೌಕರರ ಪ್ರತಿಭಟನೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ವಿಫಲರಾದ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಪ್ರಧಾನಿಯ ಸ್ಥಾನ ತೆರವುಗೊಂಡಿತ್ತು. ಈಗ ಆ ಸ್ಥಾನಕ್ಕೆ ಸನ್ನಾ ಮರಿನ್ ಅವರು ಆಯ್ಕೆಯಾಗಿದ್ದು, ಪ್ರಧಾನಿಯ ಸ್ಥಾನವನ್ನು ತುಂಬಿದ್ದಾರೆ.

ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಆಕೆ ತಾನು ತನ್ನ ವಯಸ್ಸು ಅಥವಾ ಲಿಂಗದ ಕುರಿತಾಗಿ ಯೋಚಿಸುವುದಿಲ್ಲ, ಬದಲಿಗೆ ಮತದಾರರ ಮನಸ್ಸನ್ನು ಗೆಲ್ಲುವುದರ ಬಗ್ಗೆ ಆಲೋಚನೆ ಮಾಡುವುದಾಗಿ ಹೇಳಿದ್ದಾರೆ. 34 ನೇ ವಯಸ್ಸಿಗೆ ದೇಶದ ಒಂದು ಜವಾಬ್ದಾರಿಯುತ ಹುದ್ದೆಯನ್ನು ಪಡೆದಿರುವ ಮರಿನ್ ಅವರು ದೇಶವನ್ನು ಹೇಗೆ ನಡೆಸಲಿದ್ದಾರೆ, ಅವರ ಕಾರ್ಯದಕ್ಷತೆ ಹೇಗಿರುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಎಲ್ಲರಿಗೂ ತಿಳಿಯಲಿದೆ. ಆದರೆ ಆಕೆಯ ಸಾಧನೆ ಮೆಚ್ಚುವಂತದ್ದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here