Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿಶ್ವವಿದ್ಯಾನಿಯಲಗಳು ಜಾಗತಿಕ ಆರ್ಕಷಣೆಯಾಗಬೇಕು:ಪ್ರೊ.ಕುಂಬಾರ

 

ದಾವಣಗೆರೆ; ವಿಶ್ವವಿದ್ಯಾನಿಲಯಗಳು ಜಾಗತಿಕ ಸ್ಪರ್ಧೆಗೆ ತಲುಪಬೇಕು. ಸಹಭಾಗಿತ್ವ ಹೋಂದುವ ನಿಟ್ಟನಲ್ಲಿ ವಿದೇಶಗಳಿಂದ ಬೋಧಕರು ಹಾಗೂ ವಿದ್ಯಾರ್ಥಿಗಳನ್ನು ಆರ್ಕಷಿಸುವಂತಗಾಬೇಕು  ಎಂದು ದಾವಣಗೆರೆ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೋ. ಬಿ.ಡಿ ಕುಂಬಾರ ತಿಳಿಸಿದರು.

ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಆಡಳಿತ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ಆತ್ಮನಿರ್ಭರ ಭಾರತ ಹಾಗೂ ನಿರ್ವಹಣಾ ಶಾಸ್ತ್ರದ ಹೊಸ ದಿಕ್ಕುಗಳ ಕುರಿತು ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತಿಕ ಈ ಕಾಲದಲ್ಲಿ ವಿಶ್ವವಿದ್ಯಾನಿಲಯಗಳ ಉನ್ನತ ಶ್ರೇಯಾಂಕ ಪಡೆದುಕೊಳ್ಳುವುದು ಅತ್ಯಗತ್ಯವಾಗಿದ್ದು, ಇದಕ್ಕಾಗಿ ಕೇವಲ ಪಾಠ ಬೋಧನೆಗμÉ್ಟೀ ಅಲ್ಲದೇ, ಸಂಶೋಧನಾ ಪ್ರಬಂಧಗಳ ಬಗ್ಗೆ ಪರಿಣಿತಿ ಹೊಂದಿರುವ ಉಪನ್ಯಾಸಕರ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೆಲ ವಿಶ್ವವಿದ್ಯಾನಿಲಯಗಳು ಕೇವಲ ಅಧ್ಯಯನ ಹಾಗೂ ಸಂಶೋಧನೆಗಾಗಿಯೇ ಉಪನ್ಯಾಸಕರನ್ನು ನೇಮಿಸಿಕೊಳ್ಳುತ್ತಿವೆ ಎಂದರು.

ವಿಶ್ರಾಂತ ಕುಲಪತಿಗಳಾದ ಪ್ರೋ. ಎಂ.ಎಸ್ ಸುಭಾಸ್ ಮಾತನಾಡಿ ಜಾಗತಿಕ ಪೂರೈಕೆ ಸರಪಳಿ ಮಾರುಕಟ್ಟೆಗಳಲ್ಲಿ ಭಾರತೀಯ ಸರಕುಗಳನ್ನು ಉತ್ತೇಜಿಸಲು ಮತ್ತು ದೇಶವು ಸ್ವಾವಲಂಬನೆಯನ್ನು ಸಾಧಿಸಲು ಆತ್ಮ ನಿರ್ಭರ್ ಪ್ರಾರಂಭವಾಗಿದೆ. ಸಂಶೋಧನಾ ಪ್ರಬಂಧಗಳಿಗೆ ಒತ್ತು ನೀಡಿದಾಗ ಮಾತ್ರ ಉತ್ತಮ ಶ್ರೇಯಾಂಕ ಪಡೆದುಕೊಳ್ಳುವ ಜೊತೆಗೆ, ವಿದ್ಯಾರ್ಥಿಗಳ ಭವಿಷ್ಯಕ್ಕೂ ನೆರವಾಗಲು ಸಾಧ್ಯ ಎಂದು ತಿಳಿಸಿದರು.

ದೇಶದ ಮೊದಲ ಹತ್ತು ಉನ್ನತ ವಿಶ್ವವಿದ್ಯಾನಿಲಯಗಳಿಗೆ ರೂ.10ಸಾವಿರ ಕೋಟಿ ಗಳನ್ನು ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಅನುದಾನ ಪಡೆಯಲು ದಾವಣಗೆರೆ ವಿಶ್ವವಿದ್ಯಾನಿಲಯವೂ ಗುರಿ ಹೊಂದಬೇಕು ಎಂದರು.

ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಸರ್ಕಾರದಿಂದ ಬರುವ ಅನುದಾನದ ಶೇ.90ರಷ್ಟು ಹಣ ವೇತನಕ್ಕೇ ಹೋಗುತ್ತಿದೆ. ಅಭಿವೃದ್ಧಿಗೆ ಹೆಚ್ಚು ಹಣ ಸಿಗುತ್ತಿಲ್ಲ. ಸರ್ಕಾರಗಳೂ ಸಹ ವಿಶ್ವವಿದ್ಯಾನಿಲಯಗಳಿಗೆ ಹೆಚ್ಚು ಅನುದಾನ ನೀಡಲಿ ಸಾಧ್ಯವಾಗುತ್ತಿಲ್ಲ.

ಲೆಕ್ಕ ಪರಿಶೋಧಕ ಮತ್ತು ಉದ್ಯಮಿಯಾದ ಅಥಣಿ ವೀರಣ್ಣ ಮಾತನಾಡಿ ಈ ಹಿಂದೆ ಕೈಗಾರಿಕೆಗಳನ್ನು ನಿಯಂತ್ರಿಸುವ ಕಾನೂನುಗಳಿದ್ದವು. ಇದರಿಂದಾಗಿ ಕೆಲವೇ ಕಂಪನಿಗಳಿಗೆ ಉತ್ಪಾದನಾ ಅವಕಾಶ ಸಿಗುತ್ತಿತ್ತು. ಈಗ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣದಿಂದ ಉದ್ಯಮಗಳಿಗೆ ಹೆಚ್ಚು ಅವಕಾಶ ಸಿಗುತ್ತಿದೆ ಎಂದರು.

ಬೆಂಗಳೂರಿನ ಐ.ಎಸ್.ಇ.ಸಿ ಪೆÇ್ರ. ರಾಮಪ್ಪ ಕೆ.ಬಿ, ಆಡಳಿತ ಕುಲಸಚಿವರಾದ ಬಿ.ಬಿ ಸರೋಜ, ಪರೀಕ್ಷಾಂಗ ಕುಲಸಚಿವರಾದ ಡಾ.ಶಿವಶಂಕರ್ ಕೆ, ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಪ್ರಿಯಾಂಕ ಡಿ, ಡಾ.ಶಶಿಧರ್ ಹಾಗೂ ಎಂ.ಬಿ.ಎ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.