ಕ್ರಿಕೆಟಿಗರ ಹಬ್ಬವಾಗಿದ್ದ ಐಸಿಸಿ ವಿಶ್ವ ಕಪ್ ಮುಗಿದಾಯಿತು. ವಿಜಯದ ಕಿರೀಟವನ್ನು ಇಂಗ್ಲೆಂಡ್ ತನ್ನ ಮುಡಿಗೇರಿಸಾಯಿತು. ಟೂರ್ನಿಯಲ್ಲಿ ಭಾಗವಹಿಸಲು ಹೋಗಿದ್ದ ಹತ್ತು ತಂಡಗಳು ಈಗ ಮರಳಿ ಸ್ವ ದೇಶಗಳಿಗೆ ವಾಪಸಾಗಿವೆ. ಟೂರ್ನಿಯಲ್ಲಿ ಭಾಗವಹಿಸಿದ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಿ ಗಳಿಸಿದ ಮೊತ್ತ ಎಷ್ಟು ಎಂಬುದು ಹಲವರಿಗೆ ತಿಳಿದಿಲ್ಲ‌. ಹಲವರಿಗೆ ಅದನ್ನು ತಿಳಿಯುವ ಕುತೂಹಲವಿದೆ. ನಿಮ್ಮ ಕುತೂಹಲವನ್ನು ತಣಿಸುವ ಮಾಹಿತಿ ಇಲ್ಲಿದೆ. ಅಂದರೆ ಯಾವ ದೇಶದ ತಂಡ ಎಷ್ಟು ಗಳಿಸಿದೆ ಎಂಬುದರ ವಿವರ ಇಲ್ಲಿದೆ.

ವಿಶ್ವಕಪ್ ಟ್ರೋಫಿಯನ್ನು ವಿಜಯದ ಮೂಲಕ ತನ್ನದಾಗಿಸಿಕೊಂಡ ಇಂಗ್ಲೆಂಡ್ ಬರೋಬ್ಬರಿ 29 ಕೋಟಿ ರೂಪಾಯಿಗಳ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ರನ್ನರ್ ಆಪ್ ಆಗಿ ಉಳಿದ ನ್ಯೂಜಿಲೆಂಡ್ ಗಳಿಸಿದ್ದು 15 ಕೋಟಿ ರೂಪಾಯಿಗಳು.
ಸೆಮಿಫೈನಲ್ ಪ್ರವೇಶಿಸಿ ಅಲ್ಲಿ ಪರಾಭವವನ್ನು ಎದುರಿಸಿದ ಟೀ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಎರಡು ಕೂಡಾ ತಲಾ 7 ಕೋಟಿ ರೂ ಗಳ ಬಹುಮಾನದ ಮೊತ್ತವನ್ನು ಗಳಿಸಿಕೊಂಡು ತಮ್ಮ ದೇಶಗಳಿಗೆ ಹಿಂದಿರುಗಿವೆ‌.

ವಿಜೇತ ಹಾಗೂ ರನ್ನರ್ ಅಪ್ ದೇಶಗಳನ್ನು ಬಿಟ್ಟು ಇನ್ನುಳಿದ ಅಂದರೆ ಉಳಿದ ಎಂಟು ರಾಷ್ಟ್ರಗಳ ಟೀಂ ಗಳು ಗಳಿಸಿದ ಕರಾರುವಕ್ಕಾದ ಬಹುಮಾನದ ಮೊತ್ತ ಎಷ್ಟು ಎನ್ನುವುದಾದರೆ, ಅವುಗಳ ಕ್ರಮ ಸಂಖ್ಯೆಗೆ ಅನುಗುಣವಾಗಿ ಅದರ ವಿವರ ಈ ಕೆಳಗಿನಂತೆ ಇದೆ.

ಸೆಮಿ ಫೈನಲಿಸ್ಟ್ ಇಂಡಿಯಾ-7,40,16,180 ರೂ
ಸೆಮಿ ಫೈನಲಿಸ್ಟ್ ಆಸ್ಟ್ರೇಲಿಯಾ-7,40,16,180 ರೂ
ಪಾಕಿಸ್ತಾನ-2,05,60,050 ರೂ
ಶ್ರೀಲಂಕಾ-1,50,77,370 ರೂ
ದಕ್ಷಿಣ ಆಫ್ರಿಕಾ-1,50,77,370 ರೂ
ಬಾಂಗ್ಲಾದೇಶ-1,50,77,370 ರೂ
ವೆಸ್ಟ್ ಇಂಡೀಸ್-1,26,36,030 ರೂ
ಆಫ್ಘಾನಿಸ್ತಾನ-68,53,350 ರೂ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here