Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

WWE- ಸ್ಟಾರ್‌ ಬ್ರೇ ವ್ಯಾಟ್‌ ಹೃದಯಘಾತದಿಂದ ನಿಧನ

ನ್ಯೂಯಾರ್ಕ್ : ವರ್ಲ್ಡ್ ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ ಸ್ಟಾರ್ ಬ್ರೇ ವ್ಯಾಟ್ ಗುರುವಾರ ನಿಧನರಾಗಿದ್ದಾರೆ ಎಂದು ಕಂಪನಿಯ ಸಿಸಿಒ ಪಾಲ್ “ಟ್ರಿಪಲ್ ಎಚ್” ಲೆವೆಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದೆ.

36 ವರ್ಷದ ಬ್ರೇ ವ್ಯಾಟ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ನಮ್ಮ ಡಬ್ಲ್ಯೂ ಡಬ್ಲ್ಯೂಇ ಕುಟುಂಬದಲ್ಲಿ ಬ್ರೇ ವ್ಯಾಟ್ ಎಂದು ಕರೆಯಲ್ಪಡುವ ವಿಂಡಮ್ ರೊಟುಂಡಾ ಅವರು ಇಂದು ಮುಂಜಾನೆ ಅನಿರೀಕ್ಷಿತವಾಗಿ ನಿಧನರಾದರು ಎಂಬ ದುರಂತ ಸುದ್ದಿಯನ್ನು ನಮಗೆ ತಿಳಿಸಿದರು. ನಮ್ಮ ಪ್ರಾರ್ಥನೆಗಳು ಅವರ ಕುಟುಂಬದೊಂದಿಗೆ ಇದೆ” ಎಂದು ತ್ರಿಪಲ್ ಎಚ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇಎಸ್‌ಪಿಎನ್ ಪ್ರಕಾರ, ಬ್ರೇ ವ್ಯಾಟ್ ಅವರ ನಿಜವಾದ ಹೆಸರು ವಿಂಡ್‌ಹ್ಯಾಮ್ ರೋಟುಂಡಾ. ಆರೋಗ್ಯ ಸಮಸ್ಯೆಯೊಂದಿಗೆ ಬಳಲುತ್ತಿದ್ದ ಅವರು ಕಳೆದ ಹಲವಾರು ತಿಂಗಳುಗಳಿಂದ ಡಬ್ಲ್ಯೂ ಡಬ್ಲ್ಯೂಇ ನಲ್ಲಿ ಭಾಗವಹಿಸಿಲ್ಲ ಎನ್ನಲಾಗಿದೆ. ವ್ಯಾಟ್ ಒಂದು ಬಾರಿ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್‌ ಶಿಪ್ ಮತ್ತು ಎರಡು ಬಾರಿ ಯುನಿವರ್ಸಲ್ ಚಾಂಪಿಯನ್‌ಶಿಪ್ ಸೇರಿದಂತೆ ಡಬ್ಲ್ಯೂ ಡಬ್ಲ್ಯೂಇ ನಲ್ಲಿ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು .