ಭಾರತೀಯ ಜನತಾ ಪಕ್ಷದ ನಾಯಕರಾದ ಬಿ ಎಸ್ ಯಡಿಯೂರಪ್ಪ ಮತ್ತು ಕನ್ನಡ ಚಿತ್ರರಂಗದ ಹೆಸರಾಂತ ನಟ ರೆಬೆಲ್ ಸ್ಟಾರ್ ಅಂಬರೀಶ್ ಇಬ್ಬರೂ ಒಂದೇ ವೇದಿಕೆ ಹಂಚಿಕೊಳ್ಳಲು ಸಿದ್ದರಾಗುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 52 ನೇ ಸಿನಿಮಾ ಒಡೆಯ ಚಿತ್ರದ ಮುಹೂರ್ತ ಇದೇ ತಿಂಗಳ 16 ನೇ ತಾರೀಖಿನಂದು ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಸಂದೇಶ್ ನಾಗರಾಜ್ ಅವರ ಜನ್ಮದಿನ ಆಗಸ್ಟ್ 16 ರಂದು ಇರುವ ಕಾರಣಕ್ಕಾಗಿಯೇ ಸಂದೇಶ್ ನಾಗರಾಜ್ ನಿರ್ಮಾಣದ ಚಾಲೆಂಜಿಂಗ್ ದರ್ಶನ್ ಅಭಿನಯದ ಒಡೆಯ ಸಿನಿಮಾಗೆ ಮುಹೂರ್ತ ಸಿದ್ದಪಡಿಸಲಾಗುತ್ತಿದೆ.

ಎಂ ಡಿ ಶ್ರೀಧರ್ ನಿರ್ದೇಶನ ಮಾಡುತ್ತಿರುವ ಒಡೆಯ ಚಿತ್ರಕ್ಕೆ ಈ ಮೊದಲು ಒಡೆಯರ್ ಎಂದು ಹೆಸರಿಡಲಾಗಿತ್ತು. ಆಸರೆ ಕೆಲವರು ಒಡೆಯರ್ ಎಂಬ ಹೆಸರಿಟ್ಟುಕೊಂಡು ಸಿನಿಮಾ ಮಾಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.  ಒಡೆಯರ್ ಚಿತ್ರದ ಹೆಸರನ್ನು ಬದಲಾಯಿಸಬೇಕು ಈ ಹೆಸರು ಇಟ್ಟಿ ಸಿನಿಮಾ ಮಾಡಿದರೆ ಅದು ಐತಿಹಾಸಿಕ ಸಿನಿಮಾ ಆಗಬೇಕು , ಕಮರ್ಷಿಯಲ್ ಸಿನಿಮಾಗಳಿಗೆ ಒಡೆಯರ್ ಹೆಸರು ಬಳಸಬಾರದು ಎಂದು ಪೋಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

ಈ ಎಲ್ಲಾ  ಕಾರಣಗದಾಗಿ  ಒಡೆಯರ್ ಎಂದು ಶೀರ್ಷಿಕೆಯನ್ನು ಇದೀಗ ಒಡೆಯ ಎಂದು ಬದಲಾಯಿಸಲಾಗಿದೆ‌.ಇನ್ನು ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಭಾರತೀಯ ಜನತಾ ಪಕ್ಷದ ರಾಜ್ಯಾದ್ಯಕ್ಷ ಹಾಗು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ.ಬಿ ಎಸ್ ಯಡಿಯೂರಪ್ಪ ಅವರ ಜೊತೆಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ಆಗಮಿಸುತ್ತಿದ್ದಾರೆ. ಇದೇ ಆಗಸ್ಟ್ 16 ರಂದು ಒಡೆಯ ಚಿತ್ರದ ಮುಹೂರ್ತ ನಡೆಯುತ್ತಿದ್ದು ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಬಿ ಎಸ್ ಯಡಿಯೂರಪ್ಪ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಕಣ್ತುಂಬಿಕೊಳ್ಳಬಹುದಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here