ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿದ್ದ ಪಾದರಾಯನಪುರದಲ್ಲಿ ನಡೆದ ಗಲಭೆಯ ಆರೋಪಿಗಳಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪನವರು ಡಿಸಿಎಂ ಮತ್ತು ರಾಮನಗರದ ಉಸ್ತುವಾರಿ ಸಚಿವರೂ ಆಗಿರುವ ಅಶ್ವಥ್ ನಾರಾಯಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಮನಗರದಲ್ಲಿನ ಪರಿಸ್ಥಿತಿ ಕುರಿತು ಸಿಎಂ ಅವರಿಗೆ ವಿವರಣೆ ನೀಡಲು ಡಿಸಿಎಂ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ರಾಮನಗರದ ಬೆಳವಣಿಗೆಗಳನ್ನು ಕುರಿತಾಗಿ ತಿಳಿಸಿದ್ದಾರೆ. ಈ ವೇಳೆ ಸಿಎಂ ಅವರು ಡಿಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ಅಶ್ವಥ್ ನಾರಾಯಣ ಅವರನ್ನು ನೀವು ಉಪಮುಖ್ಯಮಂತ್ರಿ ಮಾತ್ರವಲ್ಲದೇ ರಾಮನಗರದ ಉಸ್ತುವಾರಿ ಸಚಿವರು ಕೂಡಾ ಆಗಿದ್ದು ರಾಜ್ಯದಲ್ಲಿ ಈಗಾಗಲೇ ಕೊರೊನಾ ನಿಯಂತ್ರಣಕ್ಕೆ ಎಷ್ಟೆಲ್ಲಾ ಕಷ್ಟಪಡುತ್ತಿದ್ದೇವೆ ಎಂದು ನಿಮಗೆ ತಿಳಿದಿಲ್ಲವೇ? ನೀವು ಜವಾಬ್ದಾರಿಯುತ ಹುದ್ದೆಯಲ್ಲಿರುವಿರಿ, ಈ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು ? ಎಂದು ನಿಮಗೆ ತಿಳಿದಿಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ನಿಮ್ಮದೇ ಉಸ್ತುವಾರಿ ಇರುವ ರಾಮನಗರ ದಲ್ಲಿ ಕೊರೊನಾ ಸೋಂಕಿನ ಒಂದು ಪ್ರಕರಣ ಕೂಡಾ ಇರಲಿಲ್ಲ. ಆದರೆ ಪಾದರಾಯನಪುರದ ಆರೋಪಿಗಳನ್ನು ಅಲ್ಲಿಗೆ ಶಿಫ್ಟ್ ಮಾಡಿ ಗ್ರೀನ್ ಜೋನ್ ನಲ್ಲಿ ವೈರಸ್ ಹಬ್ಬಿದೆ.

ಈ ವಿಚಾರವಾಗಿ ಹೆಚ್. ಡಿ.ಕುಮಾರಸ್ವಾಮಿ ಅವರು ಪ್ರಶ್ನೆ ಮಾಡುತ್ತಿದ್ದಾರೆ. ಈ ಮಾಹಿತಿ ನಿಮಗಾಗಲೀ ಗೃಹಸಚಿವರಿಗಾಗಲೀ ಇಲ್ಲ. ಪರಿಸ್ಥಿತಿ ಹೀಗೆ ಆದ್ರೆ ಪ್ರತಿಪಕ್ಷಗಳನ್ನು ಹೇಗೆ ಎದುರಿಸುವುದು ಎಂದಿದ್ದಾರೆ. ಇದೇನಾದ್ರೂ ಹೆಚ್ಚಾದರೆ ಇದೆಲ್ಲಾ ಬರೋದು ನಿಮ್ಮ ತಲೆಗೆ ಎಂದಿರುವ ಸಿಎಂ ಯಡಿಯೂರಪ್ಪ ಅವರು ಡಿಸಿಎಂ ಅವರ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದು, ಖಾರವಾಗಿಯೇ ಅವರು ಡಿಸಿಎಂ ಅನ್ನು ದಂಡಿಸಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ ಈ ವಿಚಾರದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿರುವುದು ಕೂಡಾ ಸುದ್ದಿಯಾಗಿದೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here