ಕರ್ನಾಟಕ ರಾಜ್ಯದ ರಾಜಕೀಯದಲ್ಲಿ ಸೋಮವಾರದ ನಂತರ ಅಚ್ಚರಿಯ ಬೆಳವಣಿಗೆ ನಡೆಯಲಿದೆಯಾ ? ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲಿದೆಯಾ ? ಬಿ ಎಸ್ ಯಡಿಯೂರಪ್ಪ ಅವರು ಮತ್ತೆ ಕರ್ನಾಟಕದ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರಾ ? ಬಿ ಎಸ್ ಯಡಿಯೂರಪ್ಪ ಅವರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರ ? ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಮತ್ತೆ ಕಂಟಕವಾಗಲಿದೆಯಾ ?  ಈ ಎಲ್ಲ
ಪ್ರಶ್ನೆಗಳು ಮೂಡಲು ಕಾರಣ ಬಿ ಎಸ್ ಯಡಿಯೂರಪ್ಪ ಅವರು ‌ನೀಡಿರುವ  ಇನ್ನು ಎರಡು ಮೂರು ದಿನಗಳಲ್ಲಿ ಕಾಂಗ್ರೆಸ್​ನ 18 ಶಾಸಕರು ರಾಜೀನಾಮೆ ನೀಡುತ್ತಾರೆ.

ಸರ್ಕಾರ ರಚಿಸುವ ಆಸೆಯನ್ನು ನಾವು ಬಿಟ್ಟಿಲ್ಲ ಎಂದು ಬಿ.ಎಸ್​ಯಡಿಯೂರಪ್ಪ ಹೇಳಿದ್ದು ರಾಜ್ಯ ರಾಜಕೀಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ.ರಾಜ್ಯದ ಬಿಜೆಪಿ ಶಾಸಕರ ಜೊತೆಗಿನ ಸಭೆ ಬಳಿಕ ಮಾಧ್ಯಮದವರ ಜತೆ ಬಿ ಎಸ್ ಯಡಿಯೂರಪ್ಪ ಅವರಯ ಮಾತನಾಡಿ ಕಾಂಗ್ರೆಸ್​ನ 18 ಶಾಸಕರ ರಾಜೀನಾಮೆ ನಿಶ್ಚಿತ. ಅತೃಪ್ತರ ಜತೆಗಿನ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಹೇಳಿದರು. ಯಾವುದೆ ಕಾರಣಕ್ಕೂ ಶಾಸಕರು ಕ್ಷೇತ್ರ ಬಿಟ್ಟು ಎಲ್ಲಿಗೂ ಹೋಗಬೇಡಿ.

ಯಾವುದೇ ಸಂದರ್ಭದಲ್ಲಿ ನಿಮಗೆ ದೂರವಾಣಿ ಕರೆ ಬರಬಹುದು. ನೀವು ಬೆಂಗಳೂರಿಗೆ ಬರಬೇಕಾಗುತ್ತದೆ. ಬೇರೆ ದೇಶಗಳಿಗೆಲ್ಲ ಹೋಗಬೇಡಿ. ಸೋಮವಾರದ ನಂತರ ಪ್ರತಿಕ್ಷಣವೂ ಮುಖ್ಯವೇ ಆಗಿದೆ ಎಂದು ಬಿಜೆಪಿ ಶಾಸಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ ಶಾಸಕರು, ಕಾರ್ಯಕರ್ತರು ಬೆಂಬಲ ನೀಡುತ್ತಾರೆಂದು ನಂಬಿಕೆಯಿದೆ. ಪಕ್ಷದ ನಿರ್ಣಯಕ್ಕೆ ಅವರೆಲ್ಲ ಬದ್ಧರಾಗಿರುತ್ತಾರೆ ಎಂದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here