ರಾಜ್ಯ ರಾಜಕಾರಣದಲ್ಲಿ ಆಡಿಯೋ ಒಂದು ದೊಡ್ಡ ಸದ್ದು ಸುದ್ದಿ ಮಾಡುತ್ತಿದೆ. ಸಿಎಂ ಯಡಿಯೂರಪ್ಪ ಅವರು ಮಾತನಾಡಿದ್ದಾರೆ ಎನ್ನಲಾಗಿರುವ ಈ ಆಡಿಯೋ ವಿಷಯದಲ್ಲಿ ಇದೀಗ ಯಡಿಯೂರಪ್ಪ ಅವರು ಉಲ್ಟಾ ಹೊಡೆದು ಎಲ್ಲರ ಗಮನ ಸೆಳೆದಿದ್ದಾರೆ. ಅವರು ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಜೊತೆಗಿನ ಫೋನ್ ಮಾತುಕತೆಯನ್ನು ನಿಜವೆಂದು ಒಪ್ಪಿದ್ದರು. ಆದರೆ ಈಗ ಸಿಎಂ ಅವರು ಎಚ್‌ಡಿಡಿ ಅವರು ಫೋನ್ ಮಾಡಿದ್ದರು ಅನ್ನೋ ವಿಷಯದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎನ್ನುವ ಮೂಲಕ ಉಲ್ಟಾ ಹೊಡೆದಿದ್ದಾರೆ. ಮಾದ್ಯಮಗಳ ಜೊತೆ ಮಾತನಾಡಿದ ಸಿಎಂ ಅವರು ಮಾಜಿ ಪ್ರಧಾನಿ ದೇವೇಗೌಡರು ಫೋನ್ ಕರೆ ಮಾಡಿ ಅಭಯ ತಿಳಿಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ದೇವೇಗೌಡರ ಜೊತೆಗೆ ಫೋನ್ ಮಾತುಕತೆಯ ವಿಷಯದಲ್ಲಿ ಸತ್ಯಾಂಶ ಇಲ್ಲ. ದೇವೇಗೌಡರು ಮಾಜಿ ಪ್ರಧಾನಿಯಾಗಿದ್ದು ಅವರಿಗೆ ಸರಿ ತಪ್ಪುಗಳ ತೀರ್ಮಾನ ಮಾಡುವ ಶಕ್ತಿ ಇದೆ. ನಾನು ನನ್ನ ಮಾತಿನಲ್ಲಿ ಅವರ ಹೆಸರನ್ನು ಯಾವುದೇ ಸಂದರ್ಭದಲ್ಲಿಯೂ ಕೂಡಾ ಪ್ರಸ್ತಾಪವನ್ನು ಮಾಡಿಲ್ಲವೆಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ದೇವೇಗೌಡರು ಯಡಿಯೂರಪ್ಪನವರಿಗೆ ಮೈತ್ರಿಯ ಆಫರ್ ನೀಡಿದ್ದು, ಇದಕ್ಕೆ ಸಿಎಂ ಯಡಿಯೂರಪ್ಪ ಕೂಡ ಒಪ್ಪಿದ್ದಾರೆ ಎನ್ನುವ ಮಾತುಗಳು ಈ ಹಿಂದೆ ಕೇಳಿ ಬಂದಿತ್ತು.

ಹೆಚ್‌ಡಿ ಕುಮಾರಸ್ವಾಮಿ ಅವರು ವಿದೇಶಕ್ಕೆ ಹೋದ ಸಂದರ್ಭದಲ್ಲಿ ಇಂತಹುದೊಂದು ಮಹಾಮೈತ್ರಿಯ ಮಾತುಕತೆ ನಡೆದಿತ್ತಾ ಎನ್ನುವ ಅನುಮಾನ ಹುಟ್ಟಿತ್ತು. ಇತ್ತ ಬಿಜೆಪಿ ಹೈಕಮಾಂಡ್‌ನ ಒಪ್ಪಿಗೆ ಇಲ್ಲದೇ ಇಬ್ಬರ ನಡುವಿನ ಮಾತುಕತೆ ಹೇಗೆ ಸಾಧ್ಯ? ಎಂದು ಎರಡೂ ಪಕ್ಷಗಳಲ್ಲೂ ಈಗ ಚರ್ಚೆ ನಡೆದಿದೆ. ಇದೆಲ್ಲವಕ್ಕೂ ಇಂಬು ನೀಡುವಂತೆ ವಿರೋಧ ಪಕ್ಷದಲ್ಲಿದ್ದಾಗ ಅಪ್ಪ-ಮಕ್ಕಳನ್ನು ರಾಜಕೀಯವಾಗಿ ಮುಗಿಸೋದೇ ನನ್ನ ಗುರಿ ಎಂದು ಹೇಳುತ್ತಿದ್ದ ಯಡಿಯೂರಪ್ಪನವರು ಸಿಎಂ ಆಗುತ್ತಿದ್ದಂತೆ ಅವರ ಬಗ್ಗೆ ಸಾಫ್ಟ್ ಕಾರ್ನರ್ ಬೆಳೆಸಿಕೊಂಡಿದ್ದಾರೆ ಎಂದು ಕೂಡಾ ಹೇಳಲಾಗುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here