ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಪತನವಾದ ನಂತರ ಬಿಜೆಪಿಯ ವರಿಷ್ಠ ಬಿ.ಎಸ್​.ಯಡಿಯೂರಪ್ಪ ಅವರು ನೂತನ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿ ಅದಾಗಲೇ 15 ದಿವಸ ಕಳೆದಿದೆ. ಆದರೆ ಹದಿನೈದು ದಿನ ಕಳೆದರೂ ಸಚಿವ ಸಂಪುಟ ರಚನೆಯಾಗಿದೆ , ವಿರೋಧ ಪಕ್ಷಗಳ ತೀವ್ರ ಟೀಕೆಗೆ ಇದು ಗುರಿಯಾಗಿತ್ತು. ಆದರೆ ಈಗ ಸಚಿವ ಸಂಪುಟ ರಚನೆಗೆ ಈಗ ಕಾಲ ಸನ್ನಿಹಿತವಾಗಿದೆ ಮಾತ್ರವಲ್ಲದೆ ಸಚಿವರ ಸಂಭಾವ್ಯ ಪಟ್ಟಿಯೂ ಕೂಡಾ ಹೊರ ಬಂದಿದೆ. ಮಾನ್ಯ ಮುಖ್ಯಮಂತ್ರಿ ಅವರು ಇದೇ
ಆಗಸ್ಟ್ 16 ರಂದು ದೆಹಲಿಗೆ ತೆರಳಿ ಹೈಕಮಾಂಡ್​ ನಲ್ಲಿ ಈ ವಿಷಯವನ್ನು ಚರ್ಚೆ ಮಾಡಲಿದ್ದಾರೆ.

ಹೈಕಮಾಂಡ್ ಜೊತೆ ಚರ್ಚೆ ಮುಗಿದ ನಂತರ ಸಚಿವರ ಪಟ್ಟಿಯನ್ನು ಫೈನಲ್​ ಮಾಡಲಾಗುವುದು ಎನ್ನಲಾಗಿದೆ. ಆಗಸ್ಟ್​ 17 ರಂದು ದೆಹಲಿಯಿಂದ ಬೆಂಗಳೂರಿಗೆ ಬಂದ ನಂತರ ಆಗಸ್ಟ್​ 18ರಂದು ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಸುವ ಯೋಜನೆಗಳಿವೆ ಎಂಬುದಾಗಿ ಬಿಜೆಪಿ ಮೂಲಗಳು ತಿಳಿಸಿವೆ. ಈಗ ಹೊರಬಿದ್ದಿರುವ ಸಂಭಾವ್ಯ ಸಚಿವರ ಪಟ್ಟಿ ಅನುಸಾರ ಯಾರಿಗೆ ಯಾವ ಸಚಿವ ಸ್ಥಾನವನ್ನು ನೀಡಲಾಗುವುದು ಎಂಬ ವಿವರ ಈ ಕೆಳಗಿನಂತೆ ಇದೆ.

1. ಗೋವಿಂದ ಕಾರಜೋಳ: ಲೋಕೋಪಯೋಗಿ
2. ಈಶ್ವರಪ್ಪ: ಗೃಹ ಇಲಾಖೆ
3. ಆರ್​.ಅಶೋಕ್: ಸಾರಿಗೆ
4. ಜಗದೀಶ ಶೆಟ್ಟರ್: ಕಂದಾಯ
5. ವಿ. ಸೋಮಣ್ಣ: ನಗರಾಭಿವೃದ್ಧಿ
6. ಜೆ.ಸಿ. ಮಾಧುಸ್ವಾಮಿ: ಕಾನೂನು & ಸಂಸದೀಯ ವ್ಯವಹಾರ
7. ಬಿ. ಶ್ರೀರಾಮುಲು: ಸಮಾಜ ಕಲ್ಯಾಣ
8. ಉಮೇಶ್ ಕತ್ತಿ: ಕೃಷಿ
9. ಡಾ.ಅಶ್ವತ್ಥ್ ನಾರಾಯಣ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
10. ಶಶಿಕಲಾ ಜೊಲ್ಲೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ
12. ರೇಣುಕಾಚಾರ್ಯ: ಪೌರಾಡಳಿತ ಖಾತೆ
13. ಬಾಲಚಂದ್ರ ಜಾರಕಿಹೊಳಿ: ಕಾರ್ಮಿಕ ಇಲಾಖೆ
14. ಶಿವನಗೌಡ ನಾಯಕ್​: ಸಣ್ಣ ಕೈಗಾರಿಕೆ ಖಾತೆ
15. ಅಂಗಾರ: ಸಣ್ಣ ನೀರಾವರಿ
16. ಬೋಪಯ್ಯ: ಉನ್ನತ ಶಿಕ್ಷಣ
17. ಕೋಟಾ ಶ್ರೀನಿವಾಸ ಪೂಜಾರಿ: ಮುಜರಾಯಿ ಮತ್ತು ಯೋಜನೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here