ಉತ್ತರ ಕರ್ನಾಟಕದ ವಿಷಯ ದಿನೇ ದಿನೇ ರಂಗೇರುತ್ತಿದೆ. ಇದೀಗ ಈ ವಿಷಯ ರಾಜ್ಯದ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವನ್ನು ಎಬ್ಬಿಸಿದೆ. ರಾಜ್ಯ ರಾಜಕೀಯದ ಗಣ್ಯಾತಿ ಗಣ್ಯರೆಲ್ಲಾ ಮತ್ತೆ ಚುರುಕಾಗಿದ್ದಾರೆ, ಒಬ್ಬೊಬ್ಬರು ತಮ್ಮ ಹೇಳಿಕೆ ಹಾಗೂ ಮಾತಿನ ವರಸೆಯನ್ನು ತೋರಿಸಲು ಈಗಾಗಲೇ ಪ್ರಾರಂಭಿಸಿದ್ದಾರೆ. ಕೆಲವರು ಆಡಳಿತ ಪಕ್ಷದ ಪರವಾಗಿ ,‌ಮತ್ತೆ ಕೆಲವರು ಅದರ ವಿರೋಧವಾಗಿ, ಮಾತನಾಡುತ್ತಾ ಇದ್ದಾರೆ. ಈಗ ಈ ಸರದಿಯಲ್ಲಿ ವಿಪಕ್ಷ ನಾಯಕರಾದ ಬಿ.ಎಸ್‌.ಯಡಿಯೂರಪ್ಪ ಅವರು ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ಆಪಾದನೆ ಮಾಡಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿರುವ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕದ ಏಕೀಕರಣದ ನಂತರ ಯಾರೊಬ್ಬರೂ ಮಾತನಾಡದ ರೀತಿಯಲ್ಲಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ ಎಂದು ತಮ್ಮ ಮಾತಿನಲ್ಲಿ ಆರೋಪ ಮಾಡಿದ್ದಾರೆ‌. ಅಲ್ಲದೆ ಮಾನ್ಯ ಮುಖ್ಯಮಂತ್ರಿ ಅವರು ರಾಜ್ಯವನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿದ್ದಾರೆ ಎಂದೂ ಟೀಕಿಸಿದ್ದಾರೆ. ಮಾದ್ಯಮಗಳ ಬಗ್ಗೆ ಕುಮಾರಸ್ವಾಮಿಯವರು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ, ಹಿಂದಿನ ಸರ್ಕಾರದಲ್ಲಿ ಯಾವೊಬ್ಬ ಮಂತ್ರಿ ಅಥವಾ ಶಾಸಕರಾಗಲೀ ಈ ರೀತಿ ಮಾದ್ಯಮಗಳ ಕುರಿತು ಮಾತಾಡಿಲ್ಲ ಎಂದು, ಮಾನ್ಯ ಮುಖ್ಯಮಂತ್ರಿ ಅವರು ನಿನ್ನೆಯಷ್ಟೇ ಮಾದ್ಯಮಗಳ ಕುರಿತು ಮಾತನಾಡುತ್ತಾ, ನಾಡಿನ ಕೆಡುಕಿಗೆ ಮಾದ್ಯಮಗಳೇ ಕಾರಣ ಎಂದು ಹೇಳಿದ್ದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಮಂತ್ರಿಯವರು ಬಹಳ ಉದ್ದಟತನದಿಂದ ನಾತನಾಡುತ್ತಿದ್ದಾರೆ ಹಾಗೂ ಇದು ಸರಿಯಲ್ಲ, ಮುಖ್ಯಮಂತ್ರಿಯವರು ಅವರ ತಂದೆಯ ಅನುಮತಿಯಿಲ್ಲದೆ ಹೀಗೆಲ್ಲಾ ಮಾತನಾಡುವುದರ ಬಗ್ಗೆ ನಮಗೆ ಅನುಮಾನ ಎಂದು ಹೇಳುತ್ತಾ, ಕುಮಾರ ಸ್ವಾಮಿಯವರು ರಾಜ್ಯವನ್ನು ಒಡೆದು ಆಳುವ ನೀತಿಯನ್ನು ಅಳವಡಿಸಿಕೊಂಡಿದ್ದಾರೆ. ಆದರೆ ನಾವು ಅದಕ್ಕೆ ಯಾವುದೇ ರೀತಿಯ ಅವಕಾಶವನ್ನು ನೀಡುವುದಿಲ್ಲ. ಅಗತ್ಯವಾದರೆ ತಾವು ಮುಖ್ಯಮಂತ್ರಿ ಅವರ ವಿರುದ್ಧ ಹೋರಾಟ ಮಾಡುವುದಾಗಿ ವಿಪಕ್ಷ ನಾಯಕರಾದ ಶ್ರೀ ಯುತ್ ಬಿ.ಎಸ್.ಯಡಿಯೂರಪ್ಪನವರು ಇಂದು ಹುಬ್ಬಳ್ಳಿ ಯಲ್ಲಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ.

ಉತ್ತರ ಕರ್ನಾಟಕವನ್ನು ಪ್ರತ್ಯೇಕ ಮಾಡಬೇಕೆಂಬ ವಿಷಯ ಬಂದಿದ್ದೇ ಈಗ ರಾಜಕಾರಣ ಮಾಡುವವರಿಗೆಲ್ಲಾ ,ಮತ್ತೊಂದು ವಿಷಯ ಸಿಕ್ಕಿರುವ ಹಾಗಿದೆ. ಈ ಬಾರಿಯ ಚುನಾವಣೆಯ ನಂತರ, ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ರಾಜ್ಯ ರಾಜಕಾರಣ ಕುರುಕ್ಷೇತ್ರವಾಗಿ‌ ಬದಲಾಗುತ್ತಿದೆ. ಒಂದೆಡೆ ಮುಖ್ಯಮಂತ್ರಿಯವರು ಉತ್ತರ ಕರ್ನಾಟಕದ ವಿಷಯದಲ್ಲಿ ಬೆಂಕಿ ಹಾಕುತ್ತಿರುವುದು ಮಾದ್ಯಮಗಳು ಎಂದು ಮಾದ್ಯಮಗನ್ನು ತರಾಟೆಗೆ ತೆಗೆದುಕೊಂಡರೆ, ಇನ್ನೊಂದು ಕಡೆ ವಿಪಕ್ಷ ನಾಯಕರಾದ ಯಡಿಯೂರಪ್ಪ ಅವರು ಕುಮಾರಸ್ವಾಮಿಯವರ ಒಡೆದಾಳುವ ನೀತಿಯೆ ಪ್ರಸ್ತುತ ಸಮಸ್ಯೆಗೆ ಕಾರಣ ಎಂದು ಹೇಳಿದ್ದಾರೆ.

Photos Credit :- Facebook BSY Supports

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here