ರಾಜ್ಯ ಬಿಜೆಪಿ ವರಿಷ್ಠರಾದ ಬಿ.ಎಸ್.ಯಡಿಯೂರಪ್ಪನವರ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯನವರು ಏಕವಚನದಲ್ಲೇ ವಾಗ್ದಾಳಿಯನ್ನು ನಡೆಸಿದ್ದಾರೆ. ಮೂರು ದಿನ ಸಿಎಂ ಆಗಿದ್ದ ಯಡಿಯೂರಪ್ಪನಿಗೆ ಮಾನ ಮರ್ಯಾದೆ ಇಲ್ಲ. ಅದಕ್ಕೆ ಪದೇ ಪದೇ ಮುಖ್ಯಮಂತ್ರಿ ಆಗ್ತೀನಿ ಎಂದು ಹೇಳುತ್ತಿದ್ದಾರೆ. ಆದರೆ ತಿಪ್ಪರಲಾಗ ಹಾಕಿದ್ರು ಅವನು ಸಿಎಂ ಆಗೋಕಾಗಲ್ಲ ಎಂದು ಸಿದ್ಧರಾಮಯ್ಯನವರು ಹೇಳುತ್ತಾ ಕಿಡಿಕಾರಿದ್ದಾರೆ. ಮಾತು ಮುಂದುವರೆಸಿದ ಅವರು ಯಡಿಯೂರಪ್ಪ ಒಬ್ಬ ಮಹಾನ್ ಸುಳ್ಳುಗಾರ, ಅವನಿಗೆ ಅಧಿಕಾರದ ಲಾಲಸೆ ಹೆಚ್ಚಾಗಿದೆ. ಮತ್ತೊಮ್ಮೆ ಸಿಎಂ ಆಗುವ ಆಸೆ ಇಟ್ಕೊಂಡಿದ್ದಾನೆ. ಆದರೆ ಅದು ಮಾತ್ರ ಸಾಧ್ಯವಿಲ್ಲ ಎಂದಿದ್ದಾರೆ.

20 ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತಾರೆ, ಮೈತ್ರಿ ಸರ್ಕಾರ ಪತನ ಆಗುತ್ತೆ ಅಂತ ಸದಾ ಹೇಳ್ತಾನೆ ಇದ್ದಾರೆ. ಮುಂಬೈಗೆ ಹೋದೋರು ಎಷ್ಟು ಜನ, ಮೂರು ಜನ ಅಷ್ಟೆ. ನಮ್ಮಲ್ಲಿ ಪಕ್ಷ ಬಿಟ್ಟು ಹೋಗೋರು ಯಾರು ಇಲ್ಲ. ಸರ್ಕಾರ ಬೀಳುತ್ತೆ ಅಂತ ಸುಮ್ಮನೆ ಸುಳ್ಳು ಹೇಳ್ತಾ ಇದ್ದಾರೆ. ನಮ್ಮ ಶಾಸಕರು ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಸರ್ಕಾರ ಭದ್ರವಾಗಿರುತ್ತದೆ ಎಂದು ಭರವಸೆಯ ಮಾತುಗಳನ್ನು ಆಡಿದ್ದಾರೆ ಸಿದ್ಧರಾಮಯ್ಯನವರು. ಅತೃಪ್ತರು ಎಲ್ಲಾ ಪಕ್ಷಗಳಲ್ಲೂ ಇದ್ದಾರೆ, ಬಿಜಿಪಿಯಲ್ಲಿ ಕೂಡಾ ಇದ್ದಾರೆ‌ ಎಂದು ಕೂಡಾ ಅವರು ಹೇಳಿದ್ದಾರೆ.

ಬಿಜೆಪಿಯವರು ನಮ್ಮ ಶಾಸಕರನ್ನು ಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ, ಅವರಿಗೆ ಇಷ್ಟು ದುಡ್ಡು ಎಲ್ಲಿಂದ ಬಂತು. ಉಮೇಶ್ ಜಾದವ್ ರನ್ನು ಹಣಕೊಟ್ಟು ಖರೀದಿಸಿದ್ದಾರೆ. ಅದೇನು ವೈಟ್ ಮನೀನ ಎಂದು ಪ್ರಶ್ನೆ ಮಾಡುತ್ತಾ, ಅದಕ್ಕೆ ಆಡಿಯೋ ಸಾಕ್ಷಿ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಸಿದ್ಧರಾಮಯ್ಯನವರು ಮತ್ತೆ ಸಿಎಂ ಆಗಬೇಕು ಎನ್ನುವ ವಿಷಯಕ್ಕೆ ಇದು ಕೆಲವರಿಗೆ ಕೀ ಕೊಟ್ಟು ಮಾತಾಡಿಸುತ್ತಿರುವ ಯತ್ನ, ನಾನು ಈಗಾಗಲೇ ಐದು ವರ್ಷ ಮುಖ್ಯಮಂತ್ರಿ ಆಗಿದ್ದೇನೆ, ಮುಂದೆ ಆಗೋದು ಬಿಡೋದು ನೋಡೋಣ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here