ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬಗ್ಗೆ  ಮಾತನಾಡುತ್ತಾ ಮೊದಲಿನ ಯಡಿಯೂರಪ್ಪ ಈಗ ಇಲ್ಲ ಮೊದಲೆಲ್ಲ ಯಡಿಯೂರಪ್ಪ ಮಾತನಾಡಿದರೆ ಗುಡುಗು-ಮಿಂಚು ಎಂಬ ಮಾತುಗಳು ಬರುತ್ತಿತ್ತು ಆದರೆ ಈಗ ಯಡಿಯೂರಪ್ಪನನ್ನು ನೋಡಿದರೆ ಗುಡುಗು ಇಲ್ಲ ಮಿಂಚೂ ಇಲ್ಲಾ  ಎಂದು ವಿಧಾನಸೌಧದಲ್ಲಿ ಮಾತನಾಡಿದರು.. ನೆನ್ನೆ ಮಾತನಾಡಲು ಅವಕಾಶ ಹೆಚ್ಚಿಗೆ ಇಲ್ಲ ಎಂದು ಸಭಾಧ್ಯಕ್ಷ ಕಾಗೇರಿ ಮತ್ತು  ಯಡಿಯೂರಪ್ಪ ವಿರುದ್ಧ ಗುಡುಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಹ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.

ಈ ಸಮಯದಲ್ಲಿ ಮಾತನಾಡುತ್ತಾ ಯಡಿಯೂರಪ್ಪ ವಿರುದ್ಧ ಈ ರೀತಿಯ ಮಾತುಗಳನ್ನಾಡಿದರು. ಹಿಂದೆಲ್ಲಾ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುತ್ತಿದ್ದರು. ಆದರೆ ಈಗ ಗುಡುಗೂ ಇಲ್ಲ ಮಿಂಚೂ ಇಲ್ಲ.ಯಡಿಯೂರಪ್ಪ ಮೆತ್ತಗಾಗಿ ಬಿಟ್ಟಿದ್ದಾರೆ. ಅವರ ಹಿಂದಿನ ಜೋರು ಇಲ್ಲ‌. ಇಲ್ಲದಂತೆ ಮಾಡಿಬಿಟ್ಟಿದ್ದೀರಿ.ನೀವು ಹಿಂದಿನ ಯಡಿಯೂರಪ್ಪ ಆಗಿ ಉಳಿದೇ ಇಲ್ಲ ಎಂದು ಟೀಕಿಸಿದ ಸಿದ್ದರಾಮಯ್ಯ. ಸಿದ್ದರಾಮಯ್ಯ ಟೀಕೆಗೆ ಯಡಿಯೂರಪ್ಪ ಮುಗುಳ್ನಗೆಯೇ ಉತ್ತರ.

ನೀವೂ ಹಿಂದೆ ಹೇಗಿದ್ದಿರಿ ದಾಡಿ ಬಿಟ್ಟುಕೊಂಡು ರೆಬೆಲ್ ಆಗಿದ್ರಿ. ಈಗ ಮೆತ್ತಗಾಗಿ ಬಿಟ್ರಲ್ಲಾ ಎಂದು ಕಾಲೆಳೆದ ಬಸವರಾಜ ಬೊಮ್ಮಾಯಿ ಅವರು ಸಿದ್ಧರಾಮಯ್ಯ ಅವರ ಕಾಲೆಳೆದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು ಯಡಿಯೂರಪ್ಪನವರನ್ನು ನೀವೆಲ್ಲ ಸೇರಿ ಈಗ ತನಗೆ ಮಾಡಿಬಿಟ್ಟಿದ್ದೀರಿ ಎಂದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here