ನೆನ್ನೆ ಯಡಿಯೂರಪ್ಪ ಅವರು ವಿಶ್ವಾಸಮತ ಯಾಚಿಸುವ ಮುನ್ನವೇ ರಾಜೀನಾಮೆ ನೀಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಹಲವು ಬಿಜೆಪಿ ಮುಖಂಡರು ಭಾವನಾತ್ಮಕವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಟ್ವೀಟ್ ಮಾಡಿದ್ದಾರೆ. ಶ್ರೀರಾಮುಲು ಮತ್ತು ಪ್ರತಾಪ್ ಸಿಂಹ ಭಾವುಕರಾಗಿದ್ದಾರೆ.

2014ರಲ್ಲಿ ನಾನು ತುಂಬಾ ಖುಷಿಯಾಗಿದ್ದೆ, ಈಗ ತುಂಬಾ ದುಃಖದಿಂದ ಕಣ್ಣೀರು ತಡ್ಕೊಳ್ಳಕ್ಕಾಗುತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಫೇಸ್‍ಬುಕ್ ಲೈವ್‍ನಲ್ಲಿ ಕಣ್ಣೀರು ಸುರಿಸಿದ್ದಾರೆ.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಗದ್ಗದಿತರಾಗಿ ಮಾತನಾಡಿದ ಪ್ರತಾಪ್

1995-96ರಲ್ಲಿ ವಾಜಪೇಯಿ ಅವರು ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆಯಬೇಕಾಗಿ ಬಂದಾಗ ನಾನು ಅತ್ತಿದ್ದೆ. ಇದೀಗ 22 ವರ್ಷಗಳ ನಂತರ ಹಾಗನಿಸುತ್ತಿದೆ. ಅಧಿಕಾರ ಹೋಯ್ತು ಅಂತ ಬೇಸರ ಆಗ್ತಿಲ್ಲ. ನಾಲ್ಕು ವರ್ಷಗಳಲ್ಲಿ ಯಡಿಯೂರಪ್ಪ ಅವರನ್ನು ಹತ್ತಿರದಿಂದ ನೋಡುವ ಅವರ ಮಾತುಗಳನ್ನು ಕೇಳುವ ಅವಕಾಶ ನನಗೆ ಸಿಕ್ಕಿದೆ.

ಎಲ್ಲರೂ ಅವರನ್ನು ಕೋಪಿಷ್ಠ ಅಂತ ಭಾವಿಸುತ್ತಾರೆ. ಅವರ ಕೋಪದ ಹಿಂದೆ ಸಾತ್ವಿಕ ಕಾರಣಗಳಿವೆ. ನಾನು ಹಲವಾರು ಪೊಲಿಟಿಷನ್ ಜತೆ ಮಾತನಾಡಿದ್ದೀನಿ. ಕೆಲವರ ಜತೆ ಪಾರ್ಟಿ ಕೂಡಾ ಮಾಡಿದ್ದೀನಿ. ಆದರೆ ಸದಾ ಜನರ ಬಗ್ಗೆ ಯೋಚಿಸುವಂತ ರಾಜಕಾರಣಿಯನ್ನು ನಾನು ನೋಡಿಲ್ಲ.

ಮೋದಿಯವರನ್ನು ಬಿಟ್ಟರೆ ಯಡಿಯೂರಪ್ಪನವರು ಜನರ ಪರ ಯೋಚನೆ ಮಾಡುತ್ತಾರೆ. ಅವರ ಒಳ್ಳೆಯತನವನ್ನು ಯಾರೋ ದುರಪಯೋಗ ಪಡಿಸಿಕೊಂಡು ಕೆಟ್ಟ ನಡೆ ಆದರೇ ಹೊರತು ಅವರು ಒಳ್ಳೆಯವರು.ಅವರು ರಾಜೀನಾಮೆ ನೀಡಿ ಹೊರಬಂದರೂ ಅಧಿಕಾರ ಕಳೆದುಕೊಂಡ ದುಃಖ ಅವರಲ್ಲಿರಲಿಲ್ಲ.

ಅವಕಾಶ ಸಿಕ್ಕಿಯೂ ಕೊನೆ  ಕ್ಷಣದಲ್ಲಿ ಹೀಗಾಯ್ತಲ್ಲಾ ಎಂಬ ಪಶ್ಚಾತಾಪ ಅವರಲ್ಲಿತ್ತು. ಒಳ್ಳೆಯದನ್ನು  ಮಾಡುವ ಅವಕಾಶ ಕಳೆದುಕೊಂಡೆ ಎಂಬ ನೋವು ಅವರಲ್ಲಿ ನಾನು ಕಂಡೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.ಇದೀಗ ಪ್ರತಾಪ್  ಲೈವ್ ವಿಡಿಯೊವನ್ನು ತಮ್ಮ  ಫೇಸ್‍ಬುಕ್ ಪುಟದಿಂದ ತೆಗೆದುಹಾಕಿದ್ದಾರೆ.

Bangalore:30/05/2008. B S Yeddyurappa arriving to the swearing in ceremony to take oath as 25th Chief Minister infront of Vidhana Soudha in Bangalore on Friday. Photo:Bhagya Prakash K.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here