ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪನವರು ದೆಹಲಿಯಿಂದ ದಿಢೀರ್ ಎಂದು ವಾಪಸಾಗುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ರಾಜಕೀಯ ವಲಯದಲ್ಲಿ ಇದೊಂದು ಕುತೂಹಲಕಾರಿ ಹಾಗೂ ರೋಚಕ ಬೆಳವಣಿಗೆಯಂತೆ ಕಂಡಿದ್ದು, ಹಲವು ರಾಜಕಾರಣಿಗಳಿಗೆ, ಹಲವು ರೀತಿಯ ಅನುಮಾನಗಳು ಹಾಗೂ ಪ್ರಶ್ನೆಗಳನ್ನು ಇದು ಹುಟ್ಟು ಹಾಕಿದೆ. ಅವರ ದಿಢೀರ್ ವಾಪಸ್ ಆಗುವುದರ ಸ್ಪಷ್ಟ ಕಾರಣ ಏನಿರಬಹುದೆಂಬುದರ ಬಗ್ಗೆ ಎಲ್ಲರ ಗಮನ ಈಗ ಹರಿದಿದೆ. ಕಳೆದ ಶುಕ್ರವಾರ ಸಂಜೆ ಯಡಿಯೂರಪ್ಪನವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸುವ ಉದ್ದೇಶದಿಂದ ದೆಹಲಿಗೆ ಹೋಗಿದ್ದರು.

ದೆಹಲಿಗೆ ಹೋದಾಗಲೇ ರಾಜ್ಯದಲ್ಲಿ ಅದರ ಕುರಿತಾಗಿ ಅನೇಕ ಊಹಾ ಪೋಹಗಳು ಹಬ್ಬಿದ್ದವು. ಈ ನಡುವೆ ಅವರು ಎರಡು ದಿನಗಳಿಗೆಂದು ಹೋದವರು ಕೇವಲ ಕೆಲವೇ ಗಂಟೆಗಳಲ್ಲಿ ವಾಪಸಾಗಲಿರುವುದು ಈಗ ಸಂಚಲನ ಸೃಷ್ಟಿಸಿದೆ ಹಾಗೂ ಮತ್ತಷ್ಟು ಊಹೆಗಳಿಗೆ, ಅನುಮಾನಗಳಿಗೆ ಹಾಗೂ ಪ್ರಶ್ನೆಗಳಿಗೆ ಕಾರಣವಾಗಿದೆ. ಅವರು ವಾಪಸಾಗುವುದು ರಾಜ್ಯದ ರಾಜಕಾರಣಕ್ಕೆ ಸಂಬಂಧಿಸಿದ ಕೆಲವು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಲುವಾಗಿ ಹಾಗೂ ಈ ಸಂಬಂಧ ಕೆಲವು ರಹಸ್ಯ ಸಭೆಗಳನ್ನು ಕೂಡಾ‌ ನಡೆಸುವ ಸಾಧ್ಯತೆಗಳಿವೆಯೆಂದು ಹೇಳಲಾಗುತ್ತಿದೆ. ಅವರ ವಾಪಸಾತಿಯಂತು ಹಲವರಿಗೆ ಈಗ ಗೊಂದಲ ಉಂಟು ಮಾಡಿರುವುದು ವಾಸ್ತವ ಎನಿಸಿದೆ.

ಆದರೆ ಯಡಿಯೂರಪ್ಪನವರ ಕುಟುಂಬದ ಪ್ರಕಾರ ಅವರು ವಾಪಸಾಗುತ್ತಿರುವುದು ಯಾರೋ ಸ್ವಾಮಿಜಿಯೊಬ್ಬರನ್ನು ಭೇಟಿ ಮಾಡಲು ಎಂದು ಹೇಳಲಾಗಿದೆ. ಕೇವಲ ಸ್ವಾಮಿಜಿಯನ್ನು ಭೇಟಿ ಮಾಡಲು ಬಿಜೆಪಿ ರಾಷ್ಟ್ರೀಯ ಕಾರ್ಯ ಕಾರಿಣಿಯನ್ನು ಬಿಟ್ಟು ಬರುವ ಅಗತ್ಯವಿಲ್ಲ ,ಆದ್ದರಿಂದ ಇದು ಬೇರೆ ಯಾವುದೋ ಉದ್ದೇಶಕ್ಕೆ ಎಂಬ ಅನುಮಾನಗಳು ಮಾತ್ರ ದಟ್ಟವಾಗಿವೆ. ಅಲ್ಲದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ನಡೆಯುವ ಬದಲಾವಣೆಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರನ್ನು ರಾಜ್ಯಕ್ಕೆ ವಾಪಸ್ಸು ಕಳುಹಿಸುತ್ತಿದ್ದಾರೆ ಎಂಬುದು ಕೂಡಾ ಒಂದು ಅಭಿಪ್ರಾಯವಾಗಿದೆ. ಆದರೆ ಮತ್ತೆ ಶನಿವಾರ ಸಂಜೆ ದೆಹಲಿಗೆ ಹೋಗುವ ಹಾಗೂ ಭಾನುವಾರ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆಯೆಂದು ಹೇಳಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here