ಕೊರೊನಾ ಜಗತ್ತಿನಲ್ಲೇ ತನ್ನ ಭೀಕರ ಛಾಯೆಯನ್ನಿ ತೋರಿಸುತ್ತಿರುವಾಗ ಅದರ ಬಗ್ಗೆ ಎಚ್ಚರವಾಗಿರಬೇಕಾದುದು ಪ್ರತಿಯೊಬ್ಬರ ಕರ್ತವ್ಯ. ಜಗತ್ತಿನ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಸ್ವಚ್ಚತೆಯ ವಿಷಯದಲ್ಲಿ ಭಾರತಕ್ಕಿಂತ ಮುಂದಿರುವ ರಾಷ್ಟ್ರಗಳಲ್ಲಿ ಕೂಡಾ ಕೊರೊನಾ ಮರಣ ಮೃದಂಗ ಬಾರಿಸುವ ಈ ಹೊತ್ತಿನಲ್ಲಿ ನಮ್ಮಲ್ಲಿ ಮಾತ್ರ ಜನ ತಿಳುವಳಿಕೆ ಇಲ್ಲದಂತೆ ಹಬ್ಬಗಳಿಗೆ ಊರಿಗೆ ಹೋಗುವ ಪ್ರಯತ್ನಕ್ಕೆ ಕೈ ಹಾಕಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೊಸ ವಿಷಯವನ್ನು ಘೋಷಣೆ ಮಾಡಿದ್ದಾರೆ.

ನಾಳೆ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಊರುಗಳಿಗೆ ಹೊರಡುವವರು ಇಂದೇ ಹೊರಟು ಬಿಡಿ, ಏಕೆಂದರೆ ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊರಡಿಸಲಾಗಿದ್ದ ಲಾಕ್ ಡೌನ್ ಅನ್ನು ಕೊಂಚ ಸಡಿಲಿಸಲಾಗಿದೆ. ಇದು ಕೇವಲ ಊರುಗಳಿಗೆ ತೆರಳುವವರಿಗೆ ಮಾತ್ರ ಎನ್ನಲಾಗಿದೆ. ಈ ಕುರಿತಾಗಿ ಯಡಿಯೂರಪ್ಪ ಅವರು ಮಾತನಾಡುತ್ತಾ ಹಬ್ಬದ ಪ್ರಯುಕ್ತ ಬೆಂಗಳೂರಿಗೆ ಬರುವವರು ಬರಬಹುದು ಹಾಗೂ ಬೆಂಗಳೂರಿನಿಂದ ತೆರಳುವವರು ತೆರಳಬಹುದು ಎಂದಿದ್ದು, ಕಂಡೀಷನ್ ಒಂದು ವಿಧಿಸಿದ್ದಾರೆ.

ಕಂಡೀಷನ್ ಏನೆಂದರೆ ಈ ಅವಕಾಶ ಇವತ್ತು ರಾತ್ರಿಯ ವರೆಗೆ ಮಾತ್ರ ಎನ್ನಲಾಗಿದೆ. ನಾಳೆಯಿಂದ ಎಲ್ಲಿ ಇರುವಿರೋ ಎಲ್ಲೇ ಇರಬೇಕು ಎಂದು ಎಚ್ಚರಿಕೆಯನ್ನು ಕೂಡಾ ನೀಡಿದ್ದಾರೆ. ಇವತ್ತು ಮಾತ್ರ ಅವಕಾಶವಿದ್ದು ನಾಳೆಯಿಂದ ಮತ್ತೆ ಲಾಕ್ ಡೌನ್ ಜಾರಿಯಾಗಲಿದ್ದು, ಓಡಾಡಿದ್ರೆ ಕಠಿಣವಾದ ಕ್ರಮವನ್ನು ಕೈಗೊಳ್ಳಲಾಗುವುದು ಎಂಬ ಮುನ್ಸೂಚನೆಯನ್ನು ಕೂಡಾ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here