ಸದಾ ಯಾವುದಾದರೊಂದು ಹೋರಾಟ, ಧರಣಿ, ರಸ್ತೆಗಿಳಿದು ಪ್ರತಿಭಟನೆ ಮಾಡುವವರು ವಾಟಾಳ್ ನಾಗರಾಜ್ ಅವರು. ರಾಜ್ಯದಲ್ಲಿ ಅವರು ಕನ್ನಡಪರ ಹೋರಾಟಗಾರ ಎಂದೇ ಹೆಸರಾದ ವಾಟಾಳ್ ನಾಗರಾಜ್ ಅವರು ಯಡಿಯೂರಪ್ಪಗೆ ತಾಖತ್ ಇದ್ರೆ ಎಲ್ಲಾ ಜಯಂತಿಗಳನ್ನೂ ರದ್ದು ಮಾಡಲಿ ಎನ್ನುವಂತಹ ಸವಾಲೊಂದನ್ನು ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ವಾಟಾಳ್ ನಾಗರಾಜ್ ಅವರು ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದನ್ನು ಖಂಡಿಸುತ್ತಾ ವಾಟಾಳ್ ನಾಗರಾಜ್ ಅವರು ಪ್ರತಿಭಟನೆeಯನ್ನು ಮಾಡಿದ್ದಾರೆ.

ವಾಟಾಳ್ ನಾಗರಾಜ್ ಅವರು ತಮ್ಮ ಪ್ರತಿಭಟನೆಯ ಸಂದರ್ಭದಲ್ಲಿ ಟಿಪ್ಪು ಜಯಂತಿ ರದ್ದಾದ ವಿಷಯದ ಬಗ್ಗೆ ಮಾತನಾಡುತ್ತಾ, ಮುಖ್ಯಮಂತ್ರಿ ಯಾವುದೇ ಪಕ್ಷದವರೇ ಆದರೂ ಕೂಡಾ ಅವರ ಮುಖ್ಯ ಕರ್ತವ್ಯ ರಾಜ್ಯದ ಜನರ ಹಿತವನ್ನು ಕಾಯಬೇಕಾದುದು. ಆದರೆ ಯಡಿಯೂರಪ್ಪನವರು ತಾವು ಅಧಿಕಾರಕ್ಕೆ‌ ಬಂದ‌ ಕೂಡಲೇ ಟಿಪ್ಪು ಜಯಂತಿ ರದ್ದು ಮಾಡಿದರು. ಅವರು ಚರಿತ್ರೆಗಳನ್ಮ ಬದಲಾಯಿಸಲು ಸಾಧ್ಯವಿಲ್ಲ ಎಂದು ವಾಟಾಳ್ ನಾಗರಾಜ್ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಚರಿತ್ರೆಗಳಿಗೆ ಅದರದ್ದೇ ಆದ ಮಹತ್ವ ಇದ್ದು,ಇದು ಸರಿಯಾದ ಬೆಳವಣಿಗೆಯಲ್ಲ ಎಂದಿದ್ದಾರೆ.

ಟಿಪ್ಪು ಸುಲ್ತಾನ್ ವಿಷಯವನ್ನ ರಾಜ್ಯ ಪಠ್ಯಕ್ರಮದಿಂದ ಕೈಬಿಡಬಾರದು ಎಂದು ಕೂಡಾ ಅವರು ಆಗ್ರಹಿಸಿದ್ದಾರೆ. ಟಿಪ್ಪು ಸುಲ್ತಾನ್ ದೇಶಕ್ಕಾಗಿ ತಮ್ಮ ಮಕ್ಕಳನ್ನು ಒತ್ತೆಯಿಟ್ಟಿದ್ದರು. ಆದರೆ ಅಂತಹವರ ವಿಷಯವನ್ನು ಪಠ್ಯದಿಂದ ತೆಗೆಯಲು ಹೊರಟಿದ್ದಾರೆ ಎಂದು ದೂರುತ್ತಾ, ಒಂದು ವೇಳೆ ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆದರೆ, ರಾಜ್ಯದಲ್ಲಿ ಎಲ್ಲರೂ ದಂಗೆ ಏಳುತ್ತಾರೆ ಎಂದು ಹೇಳುತ್ತಾ, ಕೆಲವರ ಮಾತು ಕೇಳಿ ಇಂತಹ ತೀರ್ಮಾನ ಮಾಡಬೇಡಿ, ನಿಮ್ಮ ಸ್ವಂತ ನಿರ್ಧಾರ ಮಾಡಿ ಎಂದು ಅವರು ಸಿಎಂ ಅವರಿಗೆ ಸಲಹೆಯನ್ನು ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here