ಸಾಮಾಜಿಕ ಜಾಲತಾಣಗಳಿಂದ ಇರುಳು ಕಳೆದು ಹಗಲಾಗುವ ವೇಳೆಗೆ ಕೆಲವರು ಸ್ಟಾರ್ ಗಳಾದರೆ ಆ ವಿಡಿಯೋ ಮಾಡಿ ಹರಿ ಬಿಟ್ಟವರನ್ನು ಹೊಗಳುತ್ತೇವೆ‌. ಆದರೆ ಅದೇ ವಿಡಿಯೋ ಒಂದರಿಂದ ಒಬ್ಬ ಹೆಣ್ಣಿನ ಬಾಳನ್ನೇ ನರಕ ಮಾಡಿದವರನ್ನು ಏನನ್ನಬೇಕೋ ತಿಳಿಯದು. ಕೆಲವು ತಿಂಗಳ ಹಿಂದೆಯಷ್ಟೇ ಹೆಣ್ಣೊಬ್ಬಳ ಖಾಸಗಿ ಜೀವನದ ವಿಡಿಯೋವೊಂದನ್ನು ಮಾಡಿದ ಕಿಡಿಗೇಡಿಗಳು ಅದನ್ನು ಎಲ್ಲೆಡೆ ಹರಡಿದರು. ಆ ವಿಡಿಯೋ ವೈರಲ್ ಆದಂತೆ ಹೆಣ್ಣೊಬ್ಬಳು ಸಮಾಜದ ಮುಂದೆ ತಲೆ ತಗ್ಗಿಸಿ ನಿಲ್ಲುವಂತೆ ಮಾಡಿದರು. ಆಕೆಯ ಜೀವನ ಹಾಳಾಗಿ ಹೋಯಿತು. ಆದರೆ ಅಂತಹ ನೀಚತನಕ್ಕೆ ಕೈ ಹಾಕಿದವರು ಮಾತ್ರ ಮನುಷ್ಯರ ಕುಲಕ್ಕೆ ಅವಮಾನವೇ ಸರಿ.

ಅಂತಹುದೇ ಪರಿಸ್ಥಿತಿಯಲ್ಲಿ ತಮ್ಮವರು ಯಾರಾದರೂ ಇದ್ದಿದ್ದರೆ ಇದೇ ರೀತಿ ವಿಡಿಯೋ ಮಾಡುತ್ತಿದ್ದರೆ? ಒಬ್ಬ ಅತಿ ಸಾಮಾನ್ಯ ಹಾಗೂ ಅಸಹಾಯಕ ಹೆಣ್ಣಿನ ಜೀವನವನ್ನು ನರಕ ಮಾಡಿದವರ ವಿಕೃತ ಮನಸ್ಸುಗಳಿಗೆ ಶಿಕ್ಷೆ ನೀಡುವವರು ಯಾರು? ವಿಡಿಯೋದಲ್ಲಿ ವೈರಲ್ ‌ಆದ ಮೇಲೆ ಆಕೆಯನ್ನು ಸಮಾಜ ಹೇಗೆ ನೋಡೀತು ಎಂಬ ಇಂಗಿತ ಜ್ಞಾನವಿಲ್ಲದ ಮಾನವ ಮೃಗಗಳಿಗೆ ಆಕೆ ಕಡೆಗೂ ಕಣ್ಣೀರು ಸುರಿಸುತ್ತಾ ತನ್ನ ವೇದನೆ ಹೇಳಿಕೊಂಡಿದ್ದಾಳೆ.
ನನ್ನ ಬಾಯಿಗೆ ಮಣ್ಣು ಹಾಕಿ ಬಿಟ್ರಲ್ಲಣ್ಣ ಎಂದು ಗೋಳಾಡಿದ್ದಾಳೆ ಆಕೆ‌.

ದಿನಾ ನಾನು ಕಣ್ಣೀರಲ್ಲಿ ಗೋಳಾಡುವಂತೆ ಮಾಡ್ಬಿಟ್ರಲ್ಲಣ್ಣ, ನನ್ನ ಜೀವನ ಸರ್ವನಾಶ ಮಾಡಿಬಿಟ್ರಲ್ಲಣ್ಣ ,ನಾನೀಗ ಎಲ್ಲಿಗೆ ಹೋಗಲಣ್ಣ, ಅವರ ಹಟ್ಟಿಯಾಗೆ ಅಕ್ಕ ತಂಗಿ ಇಲ್ವೇನಣ್ಣ, ನನಗೆ ಒಂದು ಹೆಣ್ಣು ಮಗು ಐತೆ. ಹೀಗೆ ನನಗೆ ಅವಮಾನ ಮಾಡಬೇಡಿ, ಯಾಕಣ್ಣ ನನ್ನ ಜೀವನ ಹಿಂಗೆ ಮಾಡಿದ್ರು? ಇನ್ಯಾರಿಗೂ ಈ ರೀತಿ ಮಾಡಬೇಡಿ ಎಂದು ಆಕೆ ಹೇಳಿರುವ ನೋವಿನ ಮಾತುಗಳು ಕಲ್ಲು ಹೃದಯವನ್ನು ಕೂಡಾ ಕರಗಿಸುವಂತಿದೆ. ಆದರೆ ಆಕೆಯ ಈ ಪರಿಸ್ಥಿತಿಗೆ ಕಾರಣರಾದವರಲ್ಲಿ ಇದನ್ನು ನೋಡಿದ ಮೇಲಾದರೂ ಮನಸ್ಸು ಬದಲಾಗಲಿ. ಈ ವಿಡಿಯೋ ನೋಡಿ…

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here