ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಪುತ್ರನನ್ನು ನಾಡಿನ ಜನತೆಗೆ ಮಾಧ್ಯಮಗಳ ಮೂಲಕ ಪರಿಚಯ ಮಾಡಿಸಿದ್ದಾರೆ. ಫೋರ್ಟೀಸ್ ಆಸ್ಪತ್ರೆಯಲ್ಲಿ ರಾಧಿಕಾ ಪಂಡಿತ್ ಕಳೆದ ವಾರ ಗಂಡು ಮಗುವಿಗೆ ಜನ್ಮ ನೀಡಿದ್ರು. ಇಂದು ಡಿಸ್ಟಾರ್ಜ್ ಆಗಿದ್ದಾರೆ ರಾಧಿಕಾ. ಇದೇ ಹಿನ್ನಲೆಯಲ್ಲಿ ಸುದ್ದಿಗೋಷ್ಠಿ ಇಡಲಾಗಿತ್ತು. ರಾಕಿ ಭಾಯ್ ಪುತ್ರನನ್ನು ನೋಡಲು ಆಸ್ಪತ್ರೆ ಸುತ್ತಮುತ್ತ ಜನಸಾಗರವೇ ನೆರೆದಿತ್ತು.ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಯಶ್, ನನಗೆ ಹೆಣ್ಣು ಮಗು ಆಗಬೇಕೆಂಬ ಆಸೆ ಇತ್ತು. ಅದರಂತೆ ಮೊದಲು ಐರಾ ಹುಟ್ಟಿದಳು. ಆದರೆ ರಾಧಿಕಾಗೆ ಗಂಡು ಮಗು ಬೇಕೆಂಬ ಆಸೆ ಇತ್ತು. ಈಗ ರಾಧಿಕಾ ಆಸೆಯಂತೆ ಗಂಡು ಮಗು ಹುಟ್ಟಿದೆ.

ಈ ಇಬ್ಬರ ಆಸೆಯಂತೆ ಆಗಿದೆ. ಇಬ್ಬರೂ ನಮ್ಮ ಹಾಗೆಯೇ ಇದ್ದಾರೆ. ಎಂದು ಯಶ್ ಸುದ್ದಿಗೋಷ್ಠಿ ವೇಳೆ ಮಾತಾಡಿದ್ರು. ಮೊದಲು ಮಾತು ಆರಂಭಿಸಿದ ಯಶ್​, “ತಾಯಿ ಮಗು ಇಬ್ಬರೂ ಆರಾಮಾಗಿದ್ದಾರೆ. ಕಳೆದ ಬಾರಿ ರಾಧಿಕಾಗೆ ಮಗುವಾದಾಗ ಅಷ್ಟು ಸಮಯ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಶೂಟಿಂಗ್ ಬಿಟ್ಟು ಕಂಪ್ಲೀಟ್ ಆಗಿ ರಾಧಿಕಾ ಜೊತೆಲಿ ಇದ್ದುಬಿಟ್ಟೆ.

ಯಾವಾಗಲೂ ಮಕ್ಕಳು ಅನ್ನೋದೇ ಸಂತೋಷ. ಆದರೆ ಮಕ್ಕಳನ್ನು ಲಕ್ ಅಥವಾ ಅದೃಷ್ಟ ಅನ್ನೋ ಮಾನದಂಡದಲ್ಲಿ ಅಳೆಯಲು ಸಾಧ್ಯವೇ ಇಲ್ಲ. ನಾವು ಹ್ಯಾಪಿ ಆಗಿದ್ದೇವೆ,” ಎಂದರು.ತಮ್ಮನ ಆಗಮನವಾಗಿರುವುದಕ್ಕೆ ಆಯ್ರಾ ಸಖತ್​ ಖುಷಿಯಾಗಿದ್ದಾಳಂತೆ. “ಆಯ್ರಾ ಖುಷಿಯಾಗಿದ್ದಾಳೆ. ಫ್ಲೈಯಿಂಗ್ ಕಿಸ್ ಎಲ್ಲಾ‌ ಕೊಡುತ್ತಾಳೆ. ನನಗೆ ಹೆಣ್ಣು ಮಗು ಬೇಕು ಎನ್ನುವ ಆಸೆ ಇತ್ತು. ರಾಧಿಕಾಗೆ ಗಂಡು ಮಗು ಬೇಕು ಎನ್ನುವ ಆಸೆ ಇತ್ತು. ಈಗ ಇಬ್ಬರ ಆಸೆಯೂ ನೆರವೇರಿದೆ” ಎಂದರು ಯಶ್​.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here