ಒಂದೆಡೆ ಕೆಜಿಎಫ್ ನ ಯಶಸ್ಸು ಸ್ಯಾಂಡಲ್ ವುಡ್ ನಲ್ಲಿ ಒಂದು ಸಂತಸದ ಅಲೆಯನ್ನು ಮೂಡಿಸಿದ್ದರೆ, ಮತ್ತೊಂದೆಡೆ ಇಂದು ನಡೆದಿರುವ ಒಂದು ಆಘಾತಕಾರಿ ಘಟನೆಯು ಬೇಸರವನ್ನು ಕೂಡಾ ತರಿಸುವಂತಾಗಿದೆ. ಇಂದು ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮ ದಿನ. ಆದರೆ ಅವರು ಕನ್ನಡ ಚಿತ್ರರಂಗದ ಮೇರು ನಟರಾದ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಿಧನರಾದ ಕಾರಣ ತಮ್ಮ ಜನ್ಮದಿನವನ್ನು ಆಚರಿಸುವುದಿಲ್ಲ ಎಂದು ಅವರು ಈ ಮೊದಲೇ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದರು. ಸಾಲದೆಂಬಂತೆ ಕಳೆದ ಕೆಲವು ದಿನಗಳ ಹಿಂದೆ ನಡೆದ ಐಟಿ ರೈಡ್ ನಿಂದಾಗಿ ಕೂಡಾ ಅವರು ಸ್ವಲ್ಪ ಟೆನ್ಷನ್ ಅಲ್ಲಿ ಇದ್ದಾರೆ ಎಂದು ಹೇಳಬಹುದು.

ಆದರೆ ಇಂದು ಕೆಲವು ಅಭಿಮಾನಿಗಳು ಯಶ್ ಅವರ ಜನ್ಮದಿನದ ಕಾರಣ, ಅವರನ್ನು ನೋಡಲು ಅವರ ಮನೆಯ ಬಳಿ ಹೋಗಿದ್ದಾರೆ. ಆದರೆ ಯಶ್ ಅವರನ್ನು ನೋಡಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಮನಸ್ಸಿಗೆ ಬೇಜಾರುಕೊಂಡ ಒಬ್ಬ ಅಭಿಮಾನಿ ಅಲ್ಲೇ ಸೀಮೆ ಎಣ್ಣೆ ಸುರಿದು ಕೊಂಡು ಬೆಂಕಿ ಹೊತ್ತಿಸಿಕೊಂಡು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾನೆ. ಅನಿರೀಕ್ಷಿತವಾಗಿ ನಡೆದ ಆ ಘಟನೆಯಿಂದ ವಿಚಲಿತರಾದ ಜನ ತಕ್ಷಣ ಅವನನ್ನು ಉಳಿಸುವ ಪ್ರಯತ್ನ ಮಾಡದೆ ಶೇ 50 ರಷ್ಟು ದೇಹ ಸುಟ್ಟು ಹೋಗಿದೆ ಎನ್ನಲಾಗಿದೆ. ಕೆಲವರು ಕೂಡಲೇ ಗಿರಿ ನಗರ ಪೋಲಿಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ.

ವಿಷಯ ತಿಳಿದ ಪೋಲಿಸರು ಕೂಡಲೇ ಸ್ಥಳಕ್ಕೆ ಧಾವಿಸಿ ,ಆತನನ್ನು ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್ ನಲ್ಲಿ ದಾಖಲಿಸಿದ್ದಾರೆ. ವೈದ್ಯರು ಇನ್ನೂ ನಿರ್ದಿಷ್ಟವಾಗಿ ಆತನ ಕಂಡೀಷನ್ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದರೆ, ಆ ಅಭಿಮಾನಿ ಲಗ್ಗೆರೆ ನಿವಾಸಿ ರವಿ ಎಂದು ತಿಳಿದು ಬಂದಿದೆ ಎನ್ನಲಾಗಿದೆ. ಇದುವರೆಗೆ ಆತನ ಕುಟುಂಬ ಅಥವಾ ಸಂಬಂಧಿಕರು ಯಾರೂ ಪೋಲಿಸರ ಸಂಪರ್ಕಕ್ಕೆ ಸಿಕ್ಕಿಲ್ಲವಂತೆ. ಒಂದೆಡೆ ಹಲವರು ಇದು ಅಭಿಮಾನಿಯ ಅತಿರೇಕ ಎಂದರೆ, ಮತ್ತೆ ಕೆಲವರು ಯಶ್ ಅವರು ಒಂದರ್ಧ ಗಂಟೆ ಹೊರಗಡೆ ಬಂದಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ ಎಂದಿದ್ದಾರೆ. ಒಟ್ಟಾರೆ ಅಭಿಮಾನಿಯ ಈ ವರ್ತನೆ ಯಶ್ ಅವರಿಗೆ ನೋವುಂಟು ಮಾಡುವುದು ಖಚಿತ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here