ಕೆಜಿಎಫ್ ನಂತರ ನಟ ರಾಕಿಂಗ್ ಸ್ಟಾರ್ ಯಶ್ ಅವರು ಆಲ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅದರಲ್ಲೂ ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ ಯಶ್ ಅವರ ಹವಾ ಹೆಚ್ಚಾಗಿಯೇ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ನೆರೆಯ ಆಂಧ್ರ, ತಮಿಳು ನಾಡು ಹಾಗೂ ಕೇರಳದಲ್ಲಿ ಕೂಡಾ ಯಶ್ ಅಭಿಮಾನಿಗಳ ಸಂಘಗಳು ಹುಟ್ಟಿ ಕೊಂಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಯಶ್ ಅವರ ಭೇಟಿಗಾಗಿ ತಮಿಳುನಾಡು ಹಾಗೂ ಕೇರಳದಿಂದ ಅವರ ಅಭಿಮಾನಿಗಳು ಯಶ್ ರನ್ನು ಭೇಟಿ ಮಾಡುವುದಕ್ಕಾಗಿ ಬಂದಿದ್ದ ವಿಷಯ ಕೂಡಾ ಬಹಳಷ್ಟು ಸುದ್ದಿ ಮಾಡಿತ್ತು.

ಇದು ಮಾತ್ರವಲ್ಲದೆ ನೆರೆಯ ರಾಜ್ಯ ತಮಿಳು ನಾಡಿನಲ್ಲಿ ಉಶ್ ಅವರ ಅಭಿಮಾನಿಗಳ ಸಂಘ ನೋಂದಣಿ ಕೂಡಾ ಆಗಿದೆ. ಹೀಗಿರುವಾಗ ನಿನ್ನೆ ಅಂದರೆ ಅಕ್ಟೋಬರ್ 30 ರಂದು ಯಶ್ ಅವರ ಪತ್ನಿ ರಾಧಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ತಮಿಳು ನಾಡಿನ ಅಭಿಮಾನಿಗಳು ಸಂಭ್ರಮಾಚರಣೆಯನ್ನು ಮಾಡಿದ್ದಾರೆ. ರಾಖೀ ಭಾಯ್ ನ ಮನೆಗೆ ಮಗುವಿನ ಆಗಮನದ ಹಿನ್ನೆಯಲ್ಲಿ ಪಟಾಕಿ ಸಿಡಿಸಿ ಸಂತಸ ಹಂಚಿಕೊಂಡಿದ್ದಾರೆ ಯಶ್ ಅವರ ತಮಿಳು ಅಭಿಮಾನಿಗಳು.

ಅವರು ತಾವು ಸಂಭ್ರಮಾಚರಣೆ ಮಾಡಿದ ವಿಡಿಯೋಗಳನ್ನು ಟ್ವಿಟರ್ ಹಾಗೂ ಫೇಸ್ ಬುಕ್ ನ ತಮಿಳು ಯಶ್ ಅಭಿಮಾನಿಗಳ ಗ್ರೂಪ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮಿಳು ಅಭಿಮಾನಿಗಳು ಮಾತ್ರವಲ್ಲದೆ ಇನ್ನೂ ಅನೇಕರು ಯಶ್ ದಂಪತಿಗೆ ಟ್ವಿಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಯಶ್ ಅವರ ಮನೆಗೆ ಆಗಮಿಸಿರುವ ಹೊಸ ಅತಿಥಿಯ ಆಗಮನಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.

https://m.facebook.com/story.php?story_fbid=584028379010464&id=105704667506587

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here